ಬೆಂಗಳೂರು: ಜನ ವಿರೋಧಿ ಕಾನೂನನ್ನು ಜಾರಿಗೆ ತರಲು ಬಿಜೆಪಿ ಸರ್ಕಾರ ಮುಂದಾಗಿದ್ದು ಅದಕ್ಕೆ ನಮ್ಮ ವಿರೋಧವಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ನಾರಾಯಣ ಸ್ವಾಮಿ ಹೇಳಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ನಿವಾಸದ ಮುಂಭಾಗ ಸುದ್ದಿಗಾರರ ಜತೆ ಮಾತನಾಡಿದ ಅವರು, 'ನಾಳೆ ಅಧಿವೇಶನ ಪ್ರಾರಂಭವಾಗುತ್ತಿದೆ. ಯಾವ ವಿಚಾರಗಳ ಕುರಿತು ಚರ್ಚೆ ಮಾಡಬೇಕು ಎಂದು ಇಂದಿನ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ತೀರ್ಮಾನಿಸಿದ್ದಾರೆ. ದಿನಕ್ಕೆ ಐದು ಪ್ರಶ್ನೆಗಳನ್ನು ಒಬ್ಬ ಸದಸ್ಯರು ಕೇಳಲು ಮುಂದಾಗಿದ್ದೇವೆ. ಇದನ್ನು ಸಭೆಯಲ್ಲಿ ಕೂಡ ವಿವರಿಸಿ ಸಮ್ಮತಿ ಪಡೆದಿದ್ದೇವೆ' ಎಂದರು.
'ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮುಂದಾಗಿದ್ದಾರೆ. ಅದನ್ನು ಕೂಡ ಚರ್ಚೆ ಮಾಡುತ್ತೇವೆ. ಆರ್ಎಸ್ಎಸ್ನ ಮುಖವಾಣಿಯಾಗಿ ಬಿಜೆಪಿ ನಾಯಕರು ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಕೀ ಇರುವುದು ಕೇಶವ ಕೃಪಾದಲ್ಲಿ' ಎಂದು ಅವರು ಲೇವಡಿ ಮಾಡಿದರು.