ETV Bharat / city

ಮಸೀದಿ, ಜೈನ ಬಸದಿಗಳಿಗೆ ತಸ್ತಿಕ್ ಹಣ ಶೀಘ್ರ ಬಿಡುಗಡೆಗೆ ಎಮ್​ಎಲ್​ಸಿ ಫಾರೂಕ್ ಆಗ್ರಹ - Tasdik fund for temples and church

ತಸ್ತಿಕ್ ಹಣ ಸರ್ಕಾರದ ಖಜಾನೆಯದ್ದು, ಈಗ ಆ ಹಣವನ್ನು ಸಚಿವರು ಮಸೀದಿ ಮತ್ತು ಜೈನ ಬಸದಿಗಳಿಗೆ ತಡೆಹಿಡಿದಿರುವುದು ಸರಿಯಲ್ಲ. ಸರ್ಕಾರ ತಕ್ಷಣವೇ ಮಸೀದಿಗಳಿಗೆ ಮತ್ತು ಜೈನ ಬಸದಿಗಳಿಗೆ ಮಂಜೂರಾದ ತಸ್ತಿಕ್ ಹಣವನ್ನು ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖೆಗೆ ಬಿಡುಗಡೆ ಮಾಡಬೇಕು ಎಂದು ಸಿಎಂಗೆ ಬರೆದಿರುವ ಪತ್ರದಲ್ಲಿ ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಒತ್ತಾಯಿಸಿದ್ದಾರೆ.

muzrai-department-tasdik-fund-release
ಎಮ್​ಎಲ್​ಸಿ ಫಾರೂಕ್
author img

By

Published : Jun 15, 2021, 10:51 PM IST

ಬೆಂಗಳೂರು: ರಾಜ್ಯ ಸರ್ಕಾರದ ತಸ್ತಿಕ್ ಹಣದ ಬಿಡುಗಡೆಗೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಅನಗತ್ಯ ಗೊಂದಲ ಸೃಷ್ಟಿಸುತ್ತಿರುವುದನ್ನು ಖಂಡಿಸಿದ ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ರಾಜ್ಯ ಸರ್ಕಾರ ವಕ್ಫ್ ಮಸೀದಿಗಳು ಮತ್ತು ಜೈನ ಬಸದಿಗಳಿಗೆ ಮಂಜೂರಾಗಿರುವ ತಸ್ತಿಕ್ ಹಣವನ್ನು ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖೆಯ ಮೂಲಕ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Muzarayi Department Tastik fund release
ಮಸೀದಿ, ಜೈನ ಬಸದಿಗಳಿಗೆ ತಸ್ತಿಕ್ ಹಣ ಶೀಘ್ರ ಬಿಡುಗಡೆಗೆ ಎಮ್​ಎಲ್​ಸಿ ಬಿ.ಎಂ.ಫಾರೂಕ್ ಆಗ್ರಹ

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಸಚಿವ ಶ್ರೀನಿವಾಸ ಪೂಜಾರಿಯವರು ತಸ್ತಿಕ್ ಹಣದ ಹೆಸರಿನಲ್ಲಿ ಹಿಂದೂ, ಮುಸ್ಲಿಂ, ಜೈನ ಸಮುದಾಯದ ಜನರ ಮಧ್ಯೆ ಸಂಶಯದ ಬೀಜ ಬಿತ್ತುವುದು ಬೇಡ. ತಸ್ತಿಕ್ ಫಂಡ್ ಸರ್ಕಾರದ ಹಣ. ಅದು ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣ ಅಲ್ಲ. ಈ ಹಿಂದಿನಿಂದಲೂ ಸರ್ಕಾರದಿಂದ ತಸ್ತಿಕ್ ಹಣದ ಹಂಚಿಕೆ ಧರ್ಮಗಳ ಮಧ್ಯೆ ಯಾವ ತಾರತಮ್ಯವೂ ಇಲ್ಲದೆ ನಡೆದುಬಂದಿದೆ. 30 ಸಾವಿರ ದೇವಸ್ಥಾನಗಳಿಗೆ, 700 ಮಸೀದಿಗಳಿಗೆ ಮತ್ತು 300 ಬಸದಿಗಳಿಗೆ ಈ ಹಿಂದೆ ನೀಡುತ್ತಿದ್ದ ಇನಾಮ್ ಹಣವೇ, ಕಾಲ ಕ್ರಮೇಣ ತಸ್ತಿಕ್ ಎಂಬ ಹೆಸರಿನಿಂದ ಮುಂದುವರಿದಿದೆ ಎಂದು ಹೇಳಿದ್ದಾರೆ.

ಸರ್ಕಾರದ ಖಜಾನೆಯ ಹಣವನ್ನು ಎಲ್ಲ ಧರ್ಮದ ಆರಾಧನಾಲಯಗಳಿಗೂ ಸರ್ಕಾರ ಕೊಡುತ್ತಿತ್ತು. ಇದು ಮುಜರಾಯಿ ಇಲಾಖೆಯ ಮೂಲಕ ಬಿಡುಗಡೆ ಆಗುತ್ತಿತ್ತು. ಮುಜರಾಯಿ ಇಲಾಖೆಗೆ ಸೇರಿದ ಹಣವನ್ನು ಇಂದಿನವರೆಗೂ ಇತರ ಯಾವುದೇ ಧರ್ಮದ ಆರಾಧನಾಲಯಗಳಿಗೆ ನೀಡಲು ಯಾವ ನಿಯಮವೂ ಅನುಮತಿ ನೀಡಿಲ್ಲ. ಹಣವನ್ನು ಸರ್ಕಾರ ನೀಡಿಯೂ ಇಲ್ಲ. ಮುಜರಾಯಿ ಇಲಾಖೆಯ ಹಣ ಇನ್ನು ಮುಂದೆ ಮಸೀದಿಗಳಿಗೆ ನೀಡುವುದಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನೀಡಿರುವ ಹೇಳಿಕೆಗೆ ಅರ್ಥವೇ ಇಲ್ಲ ಎಂದಿದ್ದಾರೆ.

ತಸ್ತಿಕ್ ಹಣ ಸರ್ಕಾರದ ಖಜಾನೆಯದ್ದು, ಈಗ ಆ ಹಣವನ್ನು ಸಚಿವರು ಮಸೀದಿ ಮತ್ತು ಜೈನ ಬಸದಿಗಳಿಗೆ ತಡೆಹಿಡಿದಿರುವುದು ಸರಿಯಲ್ಲ. ಸರ್ಕಾರ ತಕ್ಷಣವೇ ಮಸೀದಿಗಳಿಗೆ ಮತ್ತು ಜೈನ ಬಸದಿಗಳಿಗೆ ಮಂಜೂರಾದ ತಸ್ತಿಕ್ ಹಣವನ್ನು ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖೆಗೆ ಬಿಡುಗಡೆ ಮಾಡಬೇಕು ಎಂದು ಸಿಎಂ ಗೆ ಬರೆದಿರುವ ಪತ್ರದಲ್ಲಿ ಫಾರೂಕ್ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.