ಬೆಂಗಳೂರು: ಕೊರೊನಾ ಸೋಂಕು ದೃಢಪಟ್ಟ ಬಳಿಕ ಸಚಿವ ಸುರೇಶ್ ಕುಮಾರ್ ಮನೆಯಲ್ಲೇ ಐಸೋಲೇಷನ್ ಆಗಿದ್ದಾರೆ. ಈ ನಡುವೆ ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡುತ್ತಿದ್ದು, ಕೋವಿಡ್ ಕೃಪೆಯಿಂದ ಪುಸ್ತಕದ ಮರುಓದು ಪೂರೈಸಿದೆ ಎಂದು ಬರೆದುಕೊಂಡಿದ್ದಾರೆ.
ಕೋವಿಡ್ ಕೃಪೆಯಿಂದ ಪುಸ್ತಕದ ಮರು ಓದು ಸಾಧ್ಯವಾಯಿತು: ಸಚಿವ ಸುರೇಶ್ ಕುಮಾರ್ ಅನೇಕ ವರ್ಷಗಳ ನಂತರದ ಓದು. ಈ ವಿಶಿಷ್ಟ ಪುಸ್ತಕ ಸ್ವಲ್ಪವೂ ಆಸಕ್ತಿ ಕುಂದಿಸಲಿಲ್ಲ. ಬೆಳೆಗೆರೆ ಕೃಷ್ಣಶಾಸ್ತ್ರಿಗಳನ್ನು ಬಿಳಿಯ ಬಟ್ಟೆ ಧರಿಸಿ ಸಮಾಜದ ಮಧ್ಯೆ ಕಾರ್ಯ ಮಾಡುತ್ತ ಒಳ್ಳೆಯತನವನ್ನು ಗುರುತಿಸಿ, ಒಳ್ಳೆಯ ಕೆಲಸದಲ್ಲಿ ಸದಾ ತೊಡಗಿದ್ದ ಸನ್ಯಾಸಿ ಎಂದೇ ಎಲ್ಲರೂ ಗುರುತಿಸುವುದು. ಅವರ ಯೇಗ್ದಾಗೆಲ್ಲಾ ಐತೆ" ನನ್ನ ಆಲ್ ಟೈಂ ಫೇವರಿಟ್ ಪುಸ್ತಕ ಅಂತ ಹಂಚಿಕೊಂಡಿದ್ದಾರೆ. ಕೋವಿಡ್ ಕೃಪೆಯಿಂದ ಪುಸ್ತಕದ ಮರು ಓದು ಸಾಧ್ಯವಾಯಿತು: ಸಚಿವ ಸುರೇಶ್ ಕುಮಾರ್ ಸಮಾಜದಲ್ಲಿ, ಬದುಕಿನಲ್ಲಿ "ನಂಬಿಕೆ" ಕಡಿಮೆಯಾಗಿ "ಅಪನಂಬಿಕೆ" ಜಾಸ್ತಿಯಾಗುತ್ತಿದೆ ಎಂದು ಹಳಹಳಿಸುವರಿಗೆಲ್ಲಾ ಈ ಪುಸ್ತಕ ಒಂದು ಒಯಾಸಿಸ್. ಅದೆಷ್ಟೋ ಗುಣವಂತ ವ್ಯಕ್ತಿಗಳ ಪರಿಚಯ ಈ ಪುಸ್ತಕದಲ್ಲಿ ದೊರಕುತ್ತದೆ. ಸಾಮಾನ್ಯ ವ್ಯಕ್ತಿಗಳ ಅಸಾಮಾನ್ಯ ಗುಣಗಳ ಪರಿಚಯ ಈ ಪುಸ್ತಕದಲ್ಲಿ ದೊರಕುತ್ತದೆ. ಈ ಅವಧಿಯಲ್ಲಿ ನನಗೆ ಬೇಕಿದ್ದ ಚೈತನ್ಯ ನೀಡಿದ ಬೆಳಗೆರೆ ಕೃಷ್ಣಶಾಸ್ತ್ರಿಗಳ ಈ ನೆನಪಿನ ಬಂಡಾರ ಅಂತ ಸಂತಸದ ಮಾತುಗಳನ್ನ ಹೇಳಿದ್ದಾರೆ.ಪಿಪಿಇ ಕಿಟ್ ಧರಿಸಿ ಕೊಠಡಿ ಸ್ವಚ್ಛಗೊಳಿಸಿದ ಸುರೇಶ್ಕುಮಾರ್ ಪತ್ನಿ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವವರು ದೇವತೆಗಳು: ಕೋವಿಡ್ -19 ಕಾರಣ ಸಚಿವರು ಮನೆಯಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿದ್ದಾರೆ. ಈ ವೇಳೆ ಸಚಿವರ ಪತ್ನಿ ಸಾವಿತ್ರಿಯವರು ಪಿಪಿಇ ಕಿಟ್ ಧರಿಸಿ ಕೊಠಡಿಯನ್ನು ಸ್ವಚ್ಛಗೊಳಿಸಿದ ರೀತಿಯ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸುಮಾರು 35-40 ನಿಮಿಷಗಳ ಕಾಲ ಪಿಪಿಇ ಕಿಟ್ ಧರಿಸಿ ಸ್ವಚ್ಛಗೊಳಿಸಿದ ಪತ್ನಿ ಅನುಭವದ ಬಗ್ಗೆಯೂ ತಿಳಿಸಿದ್ದಾರೆ. ಜೊತೆಗೆ ಈ ಪಿಪಿಇ ಕಿಟ್ನ್ನು ಆರೆಂಟು ಗಂಟೆಗಳ ಕಾಲ ಧರಿಸಿ ಕೆಲಸ ಮಾಡುವ ವೈದ್ಯರು-ದಾದಿಯರು ದೇವತೆಗಳೇ ಸರಿ ಎಂದಿದ್ದಾರೆ.