ETV Bharat / city

ಪೊಲೀಸ್ ಇಲಾಖೆಯಲ್ಲಿ ಆಂತರಿಕ ಲೆಕ್ಕ ಪರಿಶೋಧನೆ, ಅಕ್ರಮವೆಸಗಿದವರ ವಿರುದ್ಧ ಕ್ರಿಮಿನಲ್ ಕೇಸ್; ಸಚಿವ ಆರಗ ಜ್ಞಾನೇಂದ್ರ - Bangalore

ಮೈಸೂರಿನ ಪೊಲೀಸ್ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಪರಿಷತ್ ಕಲಾಪದಲ್ಲಿ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಪೊಲೀಸ್ ಇಲಾಖೆಯಲ್ಲಿ ಆಂತರಿಕ ಲೆಕ್ಕ ಪರಿಶೋಧನೆ ನಡೆಸಿ ಅವ್ಯವಹಾರ ಕಂಡುಬಂದಿಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

Araga Jnanendra talking in Council Session
ಪೊಲೀಸ್ ಇಲಾಖೆಯಲ್ಲಿ ಆಂತರಿಕ ಲೆಕ್ಕ ಪರಿಶೋಧನೆ, ಅಕ್ರಮವೆಸಗಿದವರ ವಿರುದ್ಧ ಕ್ರಿಮಿನಲ್ ಕೇಸ್; ಸಚಿವ ಆರಗ ಜ್ಞಾನೇಂದ್ರ
author img

By

Published : Sep 23, 2021, 2:54 PM IST

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಆಂತರಿಕ ಲೆಕ್ಕ ಪರಿಶೋಧನೆ ನಡೆಸಿ ಅವ್ಯವಹಾರ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮವೆಸಗಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಆಂತರಿಕ ಲೆಕ್ಕ ಪರಿಶೋಧನೆ, ಅಕ್ರಮವೆಸಗಿದವರ ವಿರುದ್ಧ ಕ್ರಿಮಿನಲ್ ಕೇಸ್; ಸಚಿವ ಆರಗ ಜ್ಞಾನೇಂದ್ರ

ಪ್ರಶ್ನೋತ್ತರ ಕಲಾಪದ ವೇಳೆ ಮೈಸೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆಗುತ್ತಿದೆ. ಸಂಚಾರಿ ಪೊಲೀಸರು ದಂಡ ವಸೂಲಿ ಮಾಡ್ತಾರೆ. ಆದರೆ ಅದನ್ನ ಸರ್ಕಾರಕ್ಕೆ ಕಟ್ಟುತ್ತಿಲ್ಲ. ಕೆಎಸ್‌ಆರ್‌ಪಿಲ್ಲೂ ಹಣ ದುರುಪಯೋಗ ಆಗುತ್ತಿದೆ. ಆಂತರಿಕ ಲೆಕ್ಕ ಪರಿಶೋಧನೆಯಲ್ಲಿ ಅಕ್ರಮ ಕಂಡುಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಆರಗ ಜ್ಞಾನೇಂದ್ರ, ವಿಶ್ವನಾಥ್ ಅವರು ನನ್ನ ಕಣ್ಣು ತೆರೆಸಿದ್ದಾರೆ. ನಾವು ಬರೀ ಕ್ತೈಂ ಬಗ್ಗೆ ಪರಿಶೀಲನೆ ಮಾಡುತ್ತಿರುತ್ತೇವೆ. ಆಂತರಿಕ ಲೆಕ್ಕ ಪರಿಶೋಧನೆ ಬಗ್ಗೆ ಪರಿಶೀಲನೆ ನಡೆಸುವುದೇ ಇಲ್ಲ,‌ 27 ಲಕ್ಷ ರೂಪಾಯಿ ದುರುಪಯೋಗ ಆಗಿದೆ ಎಂದು ಆಂತರಿಕ‌ ವರದಿ ಬಂದಿದೆ. ಈಗಾಗಲೇ ಸಂಬಂಧಿಸಿದವರನ್ನು ಅಮಾನತು ಮಾಡಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುತ್ತೇವೆ. ಕ್ರೈಮ್ ತಡೆಗಟ್ಟುವವರೇ ಕ್ರೈಮ್‌ನಲ್ಲಿ ತೊಡಗಿದ್ರೆ ಹೇಗೆ? ಇವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಇಲಾಖೆ ಸರಿ ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕೊರೊನಾ ಕಾರಣದಿಂದ ಅನುದಾನ ಕಡಿತ:

ಕೊರೊನಾ ಕಾರಣದಿಂದಾಗಿ ಎಲ್ಲಾ ವಲಯಗಳಿಗೂ ಅನುದಾನ ಕಡಿತ ಮಾಡಲಾಗಿದ್ದು, ಅದರಂತೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೂ ಅನುದಾನ ಕಡಿತಗೊಳಿಸಲಾಗಿದೆ. ಇದರ ಹಿಂದೆ ಯಾವುದೇ ತಾರತಮ್ಯದ ಉದ್ದೇಶವಿಲ್ಲ. ಆರ್ಥಿಕ ಸ್ಥಿತಿಗತಿ ಉತ್ತಮವಾಗುತ್ತಿದ್ದಂತೆ ಅನುದಾನ ಹೆಚ್ಚಿಸಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ಪ್ರಶ್ಬೋತ್ತರ ಕಲಾಪದಲ್ಲಿ ಸದಸ್ಯರಾದ ಬಿ.ಎಂ. ಫಾರೂಕ್ ಮತ್ತು ನಸೀರ್ ಅಹ್ಮದ್ ಪ್ರಶ್ನೆಗೆ ಸಿಎಂ ಬದಲು ಉತ್ತರಿಸಿದ ಸಚಿವ ಮಾಧುಸ್ವಾಮಿ, ಈ ಸಾಲಿನಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಗಳ ಅನುದಾನ ಕಡಿತ ಮಾಡಿದ್ದು ನಿಜ. ಎಲ್ಲಾ ವಲಯದಲ್ಲೂ ಕಡಿತ ಮಾಡಬೇಕಾದ ಸ್ಥಿತಿ ಬಂತು, ಎಲ್ಲಾ ನಿಗಮಗಳಲ್ಲಿಯೂ ಕಡಿತ ಮಾಡಿದ್ದೇವೆ. ಅಲ್ಪಸಂಖ್ಯಾತರಿಗೆ ತಾರತಮ್ಯ ಮಾಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಕಾಲಕಾಲಕ್ಕೆ ಮಂಡಳಿ ಸಭೆ ಕರೆಯಲಾಗುತ್ತದೆ. ಹುದ್ದೆ ಭರ್ತಿಗೆ ಕೇಳಿದ್ದಾರೆ, ಅದನ್ನು ಮಾಡಲಿದ್ದೇವೆ. ಹಣಕಾಸು ಹೆಚ್ಚು ಮಾಡುವಂತೆ ಕೇಳಿದ್ದಾರೆ. ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾದಾಗ ಹೆಚ್ಚು ಅನುದಾನ ಕೊಡಲಾಗುತ್ತದೆ. ಸರ್ಕಾರದ ಸ್ಥಿತಿಗತಿ ನೋಡಿ ಅನುದಾನ ಕೊಡುತ್ತಾ ಹೋಗಲಿದ್ದೇವೆ ಎಂದರು.

ಮೀಸಲು ವರ್ಗದ ಅಭ್ಯರ್ಥಿ ಸಿಗದಿದ್ದಲ್ಲಿ ಬೇರೆ ವರ್ಗಕ್ಕೆ ಅವಕಾಶ:

ಮೀಸಲಾತಿ ಅನ್ವಯ ಹುದ್ದೆಗಳ ಭರ್ತಿ ವೇಳೆ ಮೀಸಲಿದ್ದ ವರ್ಗದ ಅಭ್ಯರ್ಥಿಗಳು ಸಿಗದೇ ಇದ್ದಾಗ ಬೇರೆ ವರ್ಗಕ್ಕೆ ಹುದ್ದೆ ನೀಡಲು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅಗತ್ಯ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ‌ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಅರುಣ್ ಶಹಾಪುರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೀಸಲಾತಿ ಅನ್ವಯ ಹುದ್ದೆಗಳ ಭರ್ತಿ ಮಾಡಲಾಗುತ್ತದೆ. ಅಭ್ಯರ್ಥಿಗಳು ಸಿಗದೇ ಇದ್ದಾಗ ಏನು ಮಾಡಬೇಕು ಎನ್ನುವ ಕುರಿತು ಸಮಿತಿ ಮಾಡಬೇಕಾ? ಮೀಸಲಾತಿ ಇದ್ದ ವರ್ಗದ ಹುದ್ದೆ ಭರ್ತಿಯಲ್ಲಿ ಆ ವರ್ಗದ ಅಭ್ಯರ್ಥಿ ಸಿಗದೇ ಇದ್ದಲ್ಲಿ ಬೇರೆಯವರಿಗೆ ಕೊಡುವ ಕುರಿತು ಸಭೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ರು.

ನಕಲಿ ಡಾಕ್ಟರೇಟ್ ಕೊಡುವವರ ವಿರುದ್ಧ ಕ್ರಮ:

ನಕಲಿ ಡಾಕ್ಟರೇಟ್ ಕೊಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ನಿಯಮವನ್ನ ಮಾಡಲಾಗಿದೆ. ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ರಾಜ್ಯದಲ್ಲಿ ನಕಲಿ ಡಾಕ್ಟರೇಟ್ ನೀಡುವುದು ಹೆಚ್ಚಾಗಿದೆ. ಯಾರ್ಯಾರಿಗೋ ಡಾಕ್ಟರೇಟ್ ನೀಡಲಾಗುತ್ತಿದೆ. ಗೌರವ ಡಾಕ್ಟರೇಟ್ ಮೌಲ್ಯ ಕಡಿಮೆ ಆಗ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಪ್ರಶ್ನೆಗೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ, ರಾಜ್ಯದಲ್ಲಿ 1,856 ಮಂದಿಗೆ ಸಾರ್ವಜನಿಕ ವಲಯದಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದೆ. 23 ಮಂದಿಗೆ ಖಾಸಗಿ ವಲಯದಲ್ಲಿ ನೀಡಲಾಗಿದೆ. ಯಾವುದೇ ನಕಲಿ ಡಾಕ್ಟರೇಟ್ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ನಿಯಮವನ್ನ ಮಾಡಲಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.