ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಕೊರೊನಾ ನಿಯಂತ್ರಿಸಲು ನಾನಾ ತಂತ್ರಗಳನ್ನ ಮಾಡಲಾಗುತ್ತಿದೆ. ಲಾಕ್ಡೌನ್ ಜಾರಿಯಲ್ಲಿದ್ದರೂ ಕೊರೊನಾ ಸೋಂಕು ಹರಡುವಿಕೆಯೇನು ಕಡಿಮೆ ಆಗ್ತಿಲ್ಲ. ಈ ನಡುವೆ ಬೆಂಗಳೂರಿನ ಕೊರೊನಾ ಹಾಟ್ಸ್ಪಾಟ್ಗಳಾಗಿರುವ ಮನೆ-ಮನೆ ಸೀಲ್ಡೌನ್ ಶುರುವಾಗಿದೆ.
ಈ ಹಿಂದೆ ಕೊರೊನಾ ಬಂದರೆ ಇಡೀ ಏರಿಯಾವನ್ನ ಸೀಲ್ಡೌನ್ ಮಾಡಲಾಗ್ತಿತ್ತು. ಇದೀಗ ಮನೆ ಮನೆಗೆ ಅಧಿಕಾರಿಗಳು ತೆರಳಿ ರೆಡ್ ಟೇಪ್ ಹಾಕಿ ಬರ್ತಿದ್ದಾರೆ. ಈ ಮೂಲಕ ಬೆಂಗಳೂರಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಶುರುವಾಗಿದೆ.
ಬಿಟಿಎಂ ಲೇಔಟ್ನಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಪ್ರಕ್ರಿಯೆ ಅರಂಭವಾಗಿದ್ದು, ಮನೆಯಲ್ಲಿ ಒಂದು ಕೇಸ್ ಬಂದರೂ ಇಡೀ ಕಟ್ಟಡ ಸೀಲ್ಡೌನ್ ಮಾಡಲಾಗುತ್ತಿದೆ. 14 ದಿನಗಳ ಕಾಲ ಎಲ್ಲವೂ ಬಂದ್ ಆಗಲಿದ್ದು, ಆ ಮನೆಯಿಂದ ಯಾರು ಹೊರಗೆ ಬರುವಂತಿಲ್ಲ.
ಇದನ್ನೂ ಓದಿ: ಆಕ್ಸಿಜನ್ ಸರಿಯಾಗಿ ಪೂರೈಕೆಯಾಗದೆ ಸೋಂಕಿತೆ ಸಾವು? ವಿಡಿಯೋ ವೈರಲ್