ETV Bharat / city

ಮಂತ್ರಿಮಾಲ್​ನಿಂದ ಸರ್ಕಾರಿ ಜಾಗ ಒತ್ತುವರಿ: ತೆರವುಗೊಳಿಸುವಂತೆ ಬಿಬಿಎಂಪಿಗೆ ಕೋರ್ಟ್​ ಆದೇಶ - ಮಂತ್ರಿಮಾಲ್​ ಬಿಬಿಎಂಪಿ ಸ್ಥಳ ಒತ್ತುವರಿ

ನಗರದಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಿಸಿರುವ ಮಂತ್ರಿ ಮಾಲ್ ಪ್ರದೇಶವನ್ನು ಬಿಬಿಎಂಪಿ ಸ್ವತ್ತು ಎಂದು ಘೋಷಿಸಿರುವ ಕೋರ್ಟ್, ಭೂಮಿಯನ್ನು ಕೂಡಲೇ ತೆರವು ಮಾಡಿ ಸುಪರ್ದಿಗೆ ತೆಗೆದುಕೊಳ್ಳುವಂತೆ ಪಾಲಿಕೆಗೆ ಆದೇಶಿಸಿದೆ.

court order
ಬಿಬಿಎಂಪಿಗೆ ಕೋರ್ಟ್​ ಆದೇಶ
author img

By

Published : Feb 7, 2020, 9:38 PM IST

Updated : Feb 8, 2020, 9:55 AM IST

ಬೆಂಗಳೂರು : ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಿಸಿರುವ ಮಂತ್ರಿ ಮಾಲ್ ಪ್ರದೇಶವನ್ನು ಬಿಬಿಎಂಪಿ ಸ್ವತ್ತು ಎಂದು ಘೋಷಿಸಿರುವ ಕೋರ್ಟ್, ಭೂಮಿಯನ್ನು ಕೂಡಲೇ ತೆರವು ಮಾಡಿ ಸುಪರ್ದಿಗೆ ತೆಗೆದುಕೊಳ್ಳುವಂತೆ ಪಾಲಿಕೆಗೆ ಆದೇಶಿಸಿದೆ.

ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿ ನಿರ್ಮಿಸಿರುವ ಮಂತ್ರಿ ಸ್ಕ್ವೇರ್ ಜಾಗದಲ್ಲಿ 4.28 ಎಕರೆ ಭೂಮಿ ಸರ್ಕಾರಕ್ಕೆ ಸೇರಿದ್ದು, ಅದನ್ನು ತೆರವುಗೊಳಿಸಲು ಆದೇಶಿಸುವಂತೆ ಕೋರಿ ಬಿಬಿಎಂಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಸಕ್ಷಮ ಪ್ರಾಧಿಕಾರಿಯವರ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ದಕ್ಷ ಮತ್ತು ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತಾ ಅವರಿದ್ದ ಅರೆ ನ್ಯಾಯಿಕ ಪ್ರಾಧಿಕಾರ ಕಳೆದ ಡಿ. 24ರಂದು ಈ ಆದೇಶ ಹೊರಡಿಸಿದ್ದು, ಕೋರ್ಟ್ ತಹಶೀಲ್ದಾರ್ ಅವರು ಕಳೆದ ಜ. 30ರಂದು ಆದೇಶದ ಪ್ರತಿಯನ್ನು ಬಿಬಿಎಂಪಿ ಮತ್ತು ಪ್ರತಿವಾದಿಗಳಾದ ಮಂತ್ರಿಸ್ಕೇರ್ ಮಾಲಿಕತ್ವ ಹೊಂದಿರುವ ಹಮಾರಾ ಶೆಲ್ಟರ್​ಗೆ ತಲುಪಿಸಿದ್ದಾರೆ. ಅರೆನ್ಯಾಯಿಕ ಪ್ರಾಧಿಕಾರದ ಆದೇಶದಂತೆ ಇದೀಗ ಬಿಬಿಎಂಪಿಯು ಮಂತ್ರಿ ಸ್ಕ್ವೇರ್ ಮತ್ತು ಮಂತ್ರಿ ಗ್ರೀನ್ ವಸತಿ ಸಮುಚ್ಚಯ ಇರುವ 4.28 ಎಕರೆ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಬೇಕಿದೆ.

ಕೋರ್ಟ್ ತನ್ನ ಆದೇಶದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 67ರ ಪ್ರಕಾರ ರಸ್ತೆ, ಕೆರೆ ಮತ್ತಿತರ ಸ್ವತ್ತುಗಳು ಸರ್ಕಾರಕ್ಕೆ ಸೇರಿದ್ದಾಗಿರುತ್ತವೆ. ಅದರಂತೆ, ಮಂತ್ರಿಮಾಲ್ ಮತ್ತು ಮಂತ್ರಿ ಗ್ರೀನ್ ಇರುವ ಜಕ್ಕರಾಯನ ಕೆರೆಯ ಸರ್ವೆ ನಂಬರ್ 56ರಲ್ಲಿನ 37 ಗುಂಟೆ ಹಾಗು ಹನುಮಂತಪುರ ಗ್ರಾಮ ರಸ್ತೆಯ 3.31 ಎಕರೆ ಪ್ರದೇಶವು ಬಿಬಿಎಂಪಿಗೆ ಸೇರಿದ ಸ್ವತ್ತು. ಹೀಗಾಗಿ ಈ ಒತ್ತುವರಿ ಸ್ವತ್ತುಗಳನ್ನು ನಿಯಮಾನುಸಾರ ತೆರವು ಮಾಡಿ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಆದೇಶಿಸಿದೆ.

2015ರಲ್ಲಿ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್, ಮಂತ್ರಿಮಾಲ್ ಮತ್ತು ಮಂತ್ರಿಗ್ರೀನ್ ವಸತಿ ಸಮುಚ್ಚಯಗಳನ್ನು ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದರು. ಜೊತೆಗೆ ಸಾವಿರಾರು ಪುಟಗಳ ದಾಖಲೆ ಬಿಡುಗಡೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಎಸಿಬಿ, ಬಿಎಂಟಿಎಫ್​ಗಳಿಗೆ ದೂರು ನೀಡಿದ್ದರು. ಬಳಿಕ ಎಚ್ಚೆತ್ತ ಪಾಲಿಕೆ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ಹಮಾರಾ ಶೆಲ್ಟರ್ ವಿರುದ್ದ ದಾವೆ ಹೂಡಿತ್ತು.

ಇದೀಗ ನ್ಯಾಯಾಲಯ ಒತ್ತುವರಿ ಮಾಡಿರುವುದನ್ನು ಖಚಿತಪಡಿಸಿದ್ದು, ತೆರವಿಗೆ ಆದೇಶಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಎನ್‌.ಆರ್.ರಮೇಶ್, ಕಾನೂನು ಹೋರಾಟದ ಮೂಲಕ 400 ಕೋಟಿ ರುಪಾಯಿಗೂ ಅಧಿಕ ಮೌಲ್ಯದ ಆಸ್ತಿ ರಕ್ಷಿಸಿದ್ದೇವೆ. ಇದೇ ರೀತಿ ನಗರದಲ್ಲಿ ಇನ್ನೂ ಹಲವು ಒತ್ತುವರಿ ಪ್ರಕರಣಗಳಿದ್ದು, ಮುಂದಿನ ದಿನಗಳಲ್ಲಿ ನ್ಯಾಯ ಸಿಗಲಿದೆ ಎಂದಿದ್ದಾರೆ.

Last Updated : Feb 8, 2020, 9:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.