ETV Bharat / city

ವಾಂತಿ ಮಾಡುವ ಡ್ರಾಮಾ ಮಾಡಿ ಬಸ್​ನಲ್ಲೇ 50 ಸಾವಿರ ಎಗರಿಸಿದ ಭೂಪ

ಸಹ ಪ್ರಯಾಣಿಕನೊಬ್ಬ ಕುಳಿತು ವಾಂತಿ ಮಾಡುವಂತೆ ನಟಿಸಿದ್ದಾನೆ. ನಿಜವಾಗಿಯೂ ಸಮಸ್ಯೆ ಆಗಿರಬಹುದು ಎಂದುಕೊಂಡು ಚಂದ್ರಮೋಹನ್ ಎಂಬುವರು ಸೀಟಿನಿಂದ ಎದ್ದು ನಿಂತುಕೊಂಡಿದ್ದಾರೆ.ಇದನ್ನೇ ಕಾಯುತ್ತಿದ್ದ ಕಳ್ಳ ಅವರ ಜೇಬಲ್ಲಿದ್ದ ಹಣವನ್ನು ಎಗರಿಸಿದ್ದಾನೆ.

 A man theft 50 thousand on bus
A man theft 50 thousand on bus
author img

By

Published : Jul 10, 2021, 1:50 AM IST

ಬೆಂಗಳೂರು: ಪ್ರಯಾಣಿಕರೊಬ್ಬರ ಮೇಲೆ ವಾಂತಿ ಮಾಡುವಂತೆ ನಟಿಸಿದ ಕಳ್ಳನೊಬ್ಬ 50 ಸಾವಿರ ರೂ. ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆಂಗೇರಿ ನಿವಾಸಿ ಚಂದ್ರಮೋಹನ್ (50) ಹಣ ಕಳೆದುಕೊಂಡಿರುವವರು ಎನ್ನುವ ಮಾಹಿತಿ ದೊರೆತಿದೆ.

ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರಮೋಹನ್ ಜುಲೈ 6ರಂದು ವಸಂತನಗರದಲ್ಲಿರುವ ಕೆನರಾ ಬ್ಯಾಂಕ್‌ಗೆ ಹೋಗಲು ನಾಯಂಡಹಳ್ಳಿ ಮೆಟ್ರೋ ಸ್ಟೇಷನ್‌ಗೆ ಬಂದಿದ್ದರು.ಇವರು ಯಲಹಂಕಕ್ಕೆ ತೆರಳುವ ಬಿಎಂಟಿಸಿ ಬಸ್ ಹತ್ತಿ ಸೀಟ್‌ನಲ್ಲಿ ಕುಳಿತುಕೊಂಡಿದ್ದರು. ಆ ವೇಳೆ ಸಹ ಪ್ರಯಾಣಿಕನೊಬ್ಬ ಕುಳಿತು ವಾಂತಿ ಮಾಡುವಂತೆ ನಟಿಸಿದ್ದಾನೆ. ನಿಜವಾಗಿಯೂ ಸಮಸ್ಯೆ ಆಗಿರಬಹುದು ಎಂದುಕೊಂಡು ಚಂದ್ರಮೋಹನ್ ಸೀಟಿನಿಂದ ಎದ್ದು ನಿಂತುಕೊಂಡಿದ್ದಾರೆ.

ಆ ವೇಳೆ ಚಂದ್ರಮೋಹನ್ ಗಮನಕ್ಕೆ ಬಾರದಂತೆ ಪ್ಯಾಂಟ್ ಜೇಬಿನಲ್ಲಿದ್ದ 50 ಸಾವಿರ ರೂ ಕಳವು ಮಾಡಲಾಗಿದೆ. ಕಳ್ಳತನ ಮಾಡಿದವ ಬಸ್ ಬಿ.ಎಚ್‌.ಇ.ಎಲ್ ಕಡೆ ಬರುತ್ತಿರುವ ವೇಳೆ ಇಳಿದಿದ್ದಾನೆ. ಇದಾದ ಕೆಲ ಹೊತ್ತಲ್ಲೇ ಚಂದ್ರಮೋಹನ್ ಜೇಬನ್ನು ಪರಿಶೀಲಿಸಿದಾಗ 50 ಸಾವಿರ ರೂ ಕಳ್ಳತನ ಆಗಿರುವುದು ತಿಳಿದುಬಂದಿದೆ.

ಕೂಡಲೇ ಬಸ್‌ನಿಂದ ಇಳಿದು ಅಪರಿಚಿತ ವ್ಯಕ್ತಿಗಾಗಿ ಹುಡುಕಾಟ ನಡೆಸಿದರೂ ಆತ ಸಿಗಲಿಲ್ಲ. ಈ ಬಗ್ಗೆ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಕಳ್ಳನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.