ETV Bharat / city

ಬೆಂಗಳೂರು : ರಾಮಮಂದಿರ‌ ಆಟದ ಮೈದಾನದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ - Man deadbody found in a playground at bangalore

ಇಂದು ಬೆಳ್ಳಂಬೆಳಗ್ಗೆ ರಾಮಮಂದಿರ‌ ಆಟದ ಮೈದಾನದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮುಂದುವರೆಸಿದ್ದಾರೆ..

ಬೆಂಗಳೂರು:
ಬೆಂಗಳೂರು:
author img

By

Published : Feb 21, 2022, 1:22 PM IST

ಬೆಂಗಳೂರು : ರಾಜಾಜಿನಗರದ ರಾಮಮಂದಿರ ಬಳಿಯ ಆಟದ ಮೈದಾನವೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಮೃತನನ್ನು ಇಮ್ರಾನ್ ಖಾನ್ ಎಂದು ಗುರುತಿಸಲಾಗಿದ್ದು, ಬಿಎಂಟಿಸಿ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.‌ ಇಂದು ಬೆಳ್ಳಂಬೆಳಗ್ಗೆ ರಾಮಮಂದಿರ‌ ಆಟದ ಮೈದಾನದಲ್ಲಿ ಅನುಮಾನಾಸ್ಪದವಾಗಿ ಶವ ಬಿದ್ದಿರುವುದನ್ನ ಕಂಡ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು, ಮೃತನ‌ ಜೇಬಿನಲ್ಲಿ ಮದ್ಯದ ಬಾಟೆಲ್ ಇರುವುದನ್ನ ಪತ್ತೆ ಹಚ್ಚಿದ್ದಾರೆ. ಮತ್ತೊಂದೆಡೆ, ಹೃದಯಘಾತದಿಂದ ನಿಧನವಾಗಿರುವ ಬಗ್ಗೆ ಅನುಮಾನ ವ್ಯಕ್ಯವಾಗಿದೆ.

ಸದ್ಯಕ್ಕೆ ಮೃತದೇಹವನ್ನ ಮರಣೋತ್ತರ‌ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.