ETV Bharat / city

ವ್ಯಕ್ತಿಗೆ ಡ್ರ್ಯಾಗರ್​ನಿಂದ ಇರಿದು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ‌ ಸೇರಿಸಿದ್ದ ಆರೋಪಿ ಅರೆಸ್ಟ್ - ಬೆಂಗಳೂರಿನಲ್ಲಿ ಕೊಲೆ ಯತ್ನ

ವ್ಯಕ್ತಿಗೆ ಡ್ರ್ಯಾಗರ್​ನಿಂದ ಇರಿದು ನಂತರ ಆತನನ್ನು ತನ್ನ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ‌ ಸೇರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Man attempted to murder a man
ಬೆಂಗಳೂರಿನಲ್ಲಿ ವ್ಯಕ್ತಿಯ ಕೊಲೆ ಯತ್ನ
author img

By

Published : Apr 21, 2022, 3:29 PM IST

ಬೆಂಗಳೂರು: ತನ್ನನ್ನು ಗುರಾಯಿಸಿದ ಎಂಬ ಕಾರಣಕ್ಕೆ ಡ್ರ್ಯಾಗರ್​ನಿಂದ ಇರಿದು ನಂತರ ಆತನನ್ನು ತನ್ನ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ‌ ಸೇರಿಸಿದ್ದ ಆರೋಪಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಮುನಿ ಬಂಧಿತ ಆರೋಪಿ. ಏ.18 ರಂದು ನಡೆದ ಘಟನೆಯಿದು.

ವ್ಯಕ್ತಿಯ ಮೆಲೆ ಹಲ್ಲೆ ಮಾಡಿ ನಂತರ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತೀವ್ರ ಹಲ್ಲೆಗೊಳಗಾಗಿದ್ದ ಸೂರಿ ಎಂಬಾತನನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಬೀದಿನಾಯಿ ಮೇಲೆ‌ ಕಾರು ಹತ್ತಿಸಿ ವಿಕೃತಿ ಮೆರೆದ ಚಾಲಕ

ಪ್ರಕರಣದ ಮತ್ತಷ್ಟು ವಿವರ: ಇದೇ ತಿಂಗಳ 18ರಂದು ಸೂರಿ ಹಾಗೂ ನಟರಾಜ್ ಎಂಬುವವರು ಮುನಿ(ಆರೋಪಿ) ಎಂಬುವನನ್ನು ಹೆಗ್ಗನಹಳ್ಳಿ ಬಳಿ ಗುರಾಯಿಸಿದ್ದರಂತೆ. ತನ್ನ ಮೇಲೆ ಅಟ್ಯಾಕ್ ಮಾಡಲು ಬಂದಿದ್ದಾರೆ ಎಂದು ಭಾವಿಸಿ ಅವರ ಬಳಿ ಇದ್ದ ಡ್ರ್ಯಾಗರ್ ಅನ್ನೇ ಕಿತ್ತುಕೊಂಡು ಸೂರಿ ಮೇಲೆ ಮುನಿ ಹಲ್ಲೆ ನಡೆಸಿದ್ದಾನೆ. ಡ್ರ್ಯಾಗರ್​ನಿಂದ ಹೊಟ್ಟೆಗೆ ಇರಿದಿದ್ದ. ಬಳಿಕ ತೀವ್ರ ಗಾಯಗೊಂಡು ಬಳಲುತ್ತಿದ್ದ ಸೂರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದ. ಆರೋಪಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.