ETV Bharat / city

ವಿಕೃತಿ! ಹಸುವಿನೊಂದಿಗೆ ಅಸಹ್ಯ ಕೆಲಸದಲ್ಲಿ ತೊಡಗಿದ್ದ ಕಾಮುಕ ಅರೆಸ್ಟ್

author img

By

Published : Feb 24, 2022, 6:45 AM IST

ಬೆಂಗಳೂರಿನಲ್ಲಿ ರಾತ್ರಿ ವೇಳೆ ಹಸುಗಳ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

man-arrest
ಕಾಮುಕ ಅರೆಸ್ಟ್

ಬೆಂಗಳೂರು: ಹಸುವನ್ನು ತನ್ನ ಲೈಂಗಿಕ ತೃಷೆಗಾಗಿ ಬಳಸಿಕೊಳ್ಳುತ್ತಿದ್ದ ವಿಕೃತ ಕಾಮುಕನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ಮೂಲದ ವೆಂಕಟೇಶ್​ ಕುಮಾರ್​ (22) ಬಂಧಿತ. ಮುಗ್ಧ ಪ್ರಾಣಿಯನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದ ಆರೋಪದ ಮೇಲೆ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಸಿಂಗಾಪುರ ನಿವಾಸಿ ಮುನಿ ಹನುಮಂತಪ್ಪ ಎಂಬುವರು 5 ಹಸು ಹಾಗೂ 6 ಕರುಗಳನ್ನು ಹೊಂದಿದ್ದು ಹಲವು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಇವರು ತಮ್ಮ ಮನೆ‌ಯ ಮುಂದಿನ ಬಿಡಾರದಲ್ಲಿ ಹಸುಗಳನ್ನು‌ ಕಟ್ಟಿಕೊಂಡಿದ್ದರು. ಫೆಬ್ರವರಿ 19ರಂದು ಅಪರಿಚಿತನೊಬ್ಬ ಬಂದು ಹಸುಗಳಿಗೆ ತೊಂದರೆ ನೀಡಿದ್ದ ಬಗ್ಗೆ ನೆರೆಹೊರೆಯವರು ಹನುಮಂತಪ್ಪ ಅವರಿಗೆ ಮಾಹಿತಿ ನೀಡಿದ್ದರು.

ಇದರಿಂದ ಎಚ್ಚೆತ್ತುಕೊಂಡ ಅವರು ಫೆ.20 ರಂದು ಆಗಂತುಕನ ಪತ್ತೆಗೆ ಮುಂದಾಗಿದ್ದರು. ಈ ವೇಳೆ ಮಧ್ಯರಾತ್ರಿ ಬಂದ ವೆಂಕಟೇಶ್​ಕುಮಾರ್​ ಬಟ್ಟೆಬಿಚ್ಚಿ ಹಸುವಿನ ಜೊತೆ ಕೆಟ್ಟದಾಗಿ ವರ್ತಿಸುತ್ತಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್​ 377 ಹಾಗೂ ಪ್ರಾಣಿ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ : ಮತ್ತಿಬ್ಬರು ಆರೋಪಿಗಳು ಅರೆಸ್ಟ್​, ಬಂಧಿತರ ಸಂಖ್ಯೆ 8ಕ್ಕೆ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.