ದೊಡ್ಡಬಳ್ಳಾಪುರ: ಬಿಬಿಎಂಪಿ ವ್ಯಾಪ್ತಿಯಿಂದ ತಾಲೂಕಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಕಸ ತಂದು ಸುರಿಯುವುದನ್ನು ಬಂದ್ ಮಾಡುವಂತೆ ಆಗ್ರಹಿಸಿ ಶುಕ್ರವಾರ ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ.
ತಾಲೂಕಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಕಸ ತಂದು ಸುರಿಯುವುದನ್ನು ನಿಲ್ಲಿಸುವಂತೆ ಮತ್ತು ಗುಂಡ್ಲಹಳ್ಳಿಯ ಟೆರ್ರಾಫರ್ಮಾ ಕಸ ವಿಲೇವಾರಿ ಘಟಕವನ್ನು ಮತ್ತೆ ಆರಂಭಿಸದಂತೆ ಆಗ್ರಹಿಸಿ ಬಿಬಿಎಂಪಿ ತ್ಯಾಜ್ಯ ಸಂಗ್ರಹಣಾ ಘಟಕ ವಿರೋಧಿ ಹೋರಾಟ ಸಮಿತಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಅಹೋರಾತ್ರಿ ಪ್ರತಿಭಟನೆ ಮುಂದುವರೆದಿದೆ.
ಅಹೋರಾತ್ರಿ ವೇದಿಕೆಯ ಮೇಲೆ ಪ್ರತಿಭಟನಾಕಾರರು ಕುರುಕ್ಷೇತ್ರ ನಾಟಕದ ಅಭ್ಯಾಸ ಮಾಡಲಾರಂಭಿಸಿದ್ದಾರೆ. ಬಿಬಿಎಂಪಿ ಧೋರಣೆ ವಿರುದ್ಧ ಬೆಳಗ್ಗಿನಿಂದ ತಮ್ಮ ಅಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರಾತ್ರಿಯೆಲ್ಲಾ ಕುರುಕ್ಷೇತ್ರ ನಾಟಕ ಅಭ್ಯಾಸ ಮಾಡುವ ಮೂಲಕ ತಮ್ಮ ಕಲೆಯ ಅನಾವರಣ ಮಾಡಿದರು.