ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ದೇಶಾದ್ಯಂತ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಆದರೆ ಹಲವರಿಗೆ ಬೂಸ್ಟರ್ ಡೋಸ್ ಯಾವಾಗ ಪಡೆಯಬೇಕು ಎಂಬುವ ಗೊಂದಲವಿದೆ. ಹಾಗಾದರೆ ಬೂಸ್ಟರ್ ಡೋಸ್ ಯಾವಾಗ ಪಡೆದುಕೊಳ್ಳಬೇಕು?, ಎಷ್ಟು ದಿನ ಬಾಕಿ ಉಳಿದಿದೆ? ಎಂಬುದನ್ನು ಕೇವಲ ಮೊಬೈಲ್ ನಂಬರ್ ನಮೂದಿಸುವ ಮೂಲಕ ತಿಳಿದುಕೊಳ್ಳಬಹುದು.
ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಎಲ್ಲೆಡೆ ಆವರಿಸಿದ್ದು, ಆರ್ಭಟ ಮುಂದುವರೆಸಿದೆ. ನಿತ್ಯ ಎರಡು ನೂರು ಅಥವಾ ಮೂರು ನೂರು ಕಂಡು ಬರುತ್ತಿದ್ದ ಸೋಂಕಿತರ ಸಂಖ್ಯೆ ಇದೀಗ 10 ಪಟ್ಟು ಹೆಚ್ಚಾಗಿದೆ. ಹೀಗಾಗಿ ತಜ್ಞರು ಬೂಸ್ಟರ್ ಡೋಸ್ ಅಗತ್ಯದ ಕುರಿತು ಮುನ್ನೆಚ್ಚರಿಕೆ ನೀಡಿದ್ದಾರೆ.
ಈ ನಿಟ್ಟಿನಲ್ಲಿ ಈಗಾಗಲೇ ಫ್ರಂಟ್ ಲೈನ್ ವಾರಿಯರ್ಸ್ಗಳಿಗೆ, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಬೂಸ್ಟರ್ ಡೋಸ್ನ ದಿನವನ್ನು ತಿಳಿಯಲು, ನಿಮ್ಮ ಆ್ಯಂಡ್ರಾಯ್ಡ್ ಫೋನ್ ಮೂಲಕ https://selfregistration.cowin.gov.in/ ಈ ಲಿಂಕ್ ಓಪನ್ ಮಾಡಿ, ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ OTP ಬರಲಿದೆ. ನಂತರ ಒಟಿಪಿ ನಂಬರ್ ಹಾಕಿದರೆ, ಬೂಸ್ಟರ್ ಡೋಸ್ ಯಾವಾಗ ತೆಗೆದುಕೊಳ್ಳಬಹುದು ಎಂಬ ಸಂಪೂರ್ಣ ಮಾಹಿತಿ ಸಿಗಲಿದೆ..
ಇದನ್ನೂ ಓದಿ: India Covid: ದೇಶದಲ್ಲಿ ಹೊಸದಾಗಿ 1.94 ಲಕ್ಷ ಮಂದಿಗೆ ಕೋವಿಡ್.. 24 ಗಂಟೆಯಲ್ಲಿ 442 ಮಂದಿ ಸಾವು