ಬೆಂಗಳೂರು: ರಾಜ್ಯದಲ್ಲಿ ಕೇವಲ ಹತ್ತೇ ದಿನದಲ್ಲಿ ಪರಿಸ್ಥಿತಿಯೇ ಬದಲಾಗಿದ್ದು, ಐಸಿಯು ಗಂಡಾಂತರ ಬಿಗಾಡಾಯಿಸಿದೆ. ನಿನ್ನೇ ಒಂದೇ ದಿನ 1,128 ಮಂದಿ ಐಸಿಯು ಸೇರಿದ್ದಾರೆ.
ಕರ್ನಾಟಕಕ್ಕೆ ಐಸಿಯು ಗಂಡಾಂತರ:
ಕೊರೊನಾ ಎರಡನೇ ಅಲೆ ಅಟ್ಟಹಾಸ ಮುಂದುವರೆದಿದ್ದು, ಈಗಾಗಲೇ ಐಸಿಯು ಹಾಗೂ ವೆಂಟಿಲೇಟರ್ ಭರ್ತಿ ಆಗಿದೆ. ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಏರಿಕೆ ಆಗ್ತಿದ್ದು, ಇದರೊಂದಿಗೆ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಏರಿಕೆ ಆಗ್ತಿದೆ. ಈ ಮೂಲಕ ಕರ್ನಾಟಕಕ್ಕೆ ಐಸಿಯು ಗಂಡಾಂತರ ಫಿಕ್ಸ್ ಆಗಲಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದೊಂದು ವಾರದಿಂದ ಐಸಿಯುಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಏರಿಕೆ ಆಗ್ತಿದೆ. ರಾಜ್ಯದಲ್ಲಿ ಕೇವಲ 10 ದಿನದಲ್ಲಿ ಐಸಿಯುಗೆ ದಾಖಲಾಗಿರುವ ಸೋಂಕಿತರ ಸಂಖ್ಯೆ ಡಬಲ್ ಆಗಿದ್ದು, ಇದು ಹೀಗೆಯೇ ಮುಂದುವರೆದರೆ ಮೇ ತಿಂಗಳಲ್ಲಿ ಪರಿಸ್ಥಿತಿ ಊಹಿಸಲೂ ಅಸಾಧ್ಯವಾಗಿ ಬಿಡುತ್ತೆ.
ಐಸಿಯು ಬೆಡ್ ಸಿಗದೇ ಇರುವ ಕಾರಣ ಸಾವಿನ ಸಂಖ್ಯೆ ಹೆಚ್ಚಳವಾಗ್ತಿದೆ. ಮುಂದೆ ಇನ್ನಷ್ಟು ಭೀಕರ ಪರಿಸ್ಥಿತಿ ಎದುರಾದರೂ ಅಚ್ಚರಿ ಪಡೆಬೇಕಿಲ್ಲ. ಹಾಗೇ ಐಸಿಯು ಒದಗಿಸುವುದು ಮುಂದೆ ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಲಿದೆ.
ದಿನಾಂಕ- ಐಸಿಯು ದಾಖಲಾತಿ:
ಏಪ್ರಿಲ್ 14- 506
ಏಪ್ರಿಲ್ 15- 555
ಏಪ್ರಿಲ್ 16- 577
ಏಪ್ರಿಲ್ 17- 589
ಏಪ್ರಿಲ್ 18- 620
ಏಪ್ರಿಲ್ 19- 721
ಏಪ್ರಿಲ್ 20- 751
ಏಪ್ರಿಲ್ 21- 904
ಏಪ್ರಿಲ್ 22- 985
ಏಪ್ರಿಲ್ 23- 1128
ಇನ್ನು ಸರ್ಕಾರಿ ವೈದ್ಯಕೀಯ ಕಾಲೇಜು, ಸರ್ಕಾರಿ ಆಸ್ಪತ್ರೆ, ಖಾಸಗಿ ವೈದ್ಯಕೀಯ ಕಾಲೇಜು, ಖಾಸಗಿ ಆಸ್ಪತ್ರೆಯಲ್ಲಿ ಈಗಾಗಲೇ ಎಲ್ಲ ರೀತಿಯ ಬೆಡ್ಗಳು ಪೂರ್ಣಗೊಂಡಿವೆ.
- ಸಾಮಾನ್ಯ ಬೆಡ್- ಶೇ. 72.60ರಷ್ಟು ಪೂರ್ಣ
- ಹೆಚ್ಡಿಯು ಬೆಡ್- ಶೇ. 95.38ರಷ್ಟು ಪೂರ್ಣ
- ಐಸಿಯು- 97.86 % ರಷ್ಟು ಪೂರ್ಣ
- ಐಸಿಯು-ವಿ- 98.92% ರಷ್ಟು ಪೂರ್ಣ
ಒಟ್ಟಾರೆ ಶೇ. 84.05ರಷ್ಟು ಇಡೀ ಆಸ್ಪತ್ರೆಯ ಹಾಸಿಗೆಗಳು ಪೂರ್ಣವಾಗಿವೆ. ಹೀಗಾಗಿ ಜನರು ಕೋವಿಡ್ ಮಾರ್ಗಸೂಚಿಯನ್ನ ಪಾಲನೆ ಮಾಡುವುದು ಒಳಿತು. ಹಣ ಕೊಟ್ಟರೂ ಬೆಡ್ ಸಿಗದ ಪರಿಸ್ಥಿತಿ ಉಂಟಾಗಿದ್ದು, ಸದ್ಯ ಕೋವಿಡ್ ಚಿಕಿತ್ಸೆಯ ಹಾಸಿಗೆ ಸಿಗುವುದು ಅನುಮಾನ.