ETV Bharat / city

ಆ.28ಕ್ಕೆ 'ಯೋಗಥಾನ್', ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ 5 ಲಕ್ಷ ಜನರಿಂದ ಯೋಗ : ನಾರಾಯಣಗೌಡ - ಗಿನ್ನೀಸ್ ದಾಖಲೆ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಸೇರಿ ಯೋಗ ಮಾಡುವ ಮೂಲಕ ಆಗಸ್ಟ್ 28 ರಂದು ಯೋಗಥಾನ್ ಮಾಡಲಾಗುವುದು ಎಂದು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಹೇಳಿದರು.

Guinness World Records
ನಾರಾಯಣಗೌಡ
author img

By

Published : Jul 11, 2022, 9:12 PM IST

ಬೆಂಗಳೂರು : ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಯೋಗಥಾನ್ ಹಮ್ಮಿಕೊಳ್ಳಲಾಗಿದೆ. ಯೋಗದ ಮಹತ್ವವನ್ನು ವಿಶ್ವಕ್ಕೆ ಸಾರುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ 5 ಲಕ್ಷ ಜನರು ಸೇರಿ ಆಗಸ್ಟ್ 28 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಸೇರಿ 'ಯೋಗಥಾನ್' ನಡೆಸಲಿದ್ದು, ಗಿನ್ನೀಸ್ ದಾಖಲೆಗೆ ಪ್ರಯತ್ನಿಸಲಾಗುವುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಹೇಳಿದರು.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೇತೃತ್ವದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಯೋಗಥಾನ್ ಆಯೋಜಿಸುತ್ತಿದೆ. ಈ ಯೋಗಥಾನ್‌ಗೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ರಾಯಭಾರಿಯಾಗಿದ್ದಾರೆ. ಯೋಗದ ತವರೂರಾದ ಭಾರತ ಅದರಲ್ಲೂ ಕರ್ನಾಟಕದಲ್ಲಿ ಯೋಗವನ್ನು ಮನೆ - ಮನೆಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಆಗಸ್ಟ್ 28 ರಂದು ರಾಜ್ಯದಲ್ಲಿ ಯೋಗಥಾನ್

ನಾನೆಲ್ಲೂ ಕ್ರೀಡೆ ಆಡುತ್ತಿಲ್ಲ: ಮಳೆ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವರು ಭೇಟಿ ನೀಡದ ಬಗ್ಗೆ ಕಾಂಗ್ರೆಸ್ ಆರೋಪ ವಿಚಾರ ಕುರಿತು ಮಾತನಾಡಿದ ಸಚಿವರು, ನಾನೆಲ್ಲೂ ಕ್ರೀಡೆ ಆಡುತ್ತಿಲ್ಲ. ನಾವು‌ ಬರೀ ಕ್ರೀಡೆ ಆಡಿಸುತ್ತಿದ್ದೇವೆ, ಕ್ರೀಡೆಗೂ ಶಕ್ತಿ ತುಂಬುವ ಅವಶ್ಯಕತೆ ಇದೆಯಲ್ಲ, ನಾನು ನನ್ನ ಜಿಲ್ಲೆಗೆ ಹೋಗುತ್ತಿದ್ದೇನೆ. ಪ್ರತಿ ದಿನ ಶಿವಮೊಗ್ಗ ಮಳೆ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ, ಎಂಎಲ್‌ಸಿ ಗೋವಿಂದರಾಜು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಎನ್‌ವೈಕೆ ನಿರ್ದೇಶಕ ನಟರಾಜ್, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಮುಜರಾಯಿ ಇಲಾಖೆ: 5 ವರ್ಷದಲ್ಲಿ ಕಾಂಗ್ರೆಸ್​​ನಿಂದ 1,282 ಕೋಟಿ, ಬಿಜೆಪಿಯಿಂದ ಮೂರೇ ವರ್ಷದಲ್ಲಿ 1781 ಕೋಟಿ ಅನುದಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.