ETV Bharat / city

ವಿಧಾನಪರಿಷತ್ತಿನಲ್ಲಿ ಸಭಾಪತಿ ಆದೇಶ ಉಲ್ಲಂಘಿಸಿ ಪ್ರತಿಭಟನೆ..ದಿನದ ಮಟ್ಟಿಗೆ 14 ಕಾಂಗ್ರೆಸ್​ ಸದಸ್ಯರ ಅಮಾನತು

author img

By

Published : Dec 15, 2021, 4:51 PM IST

Updated : Dec 15, 2021, 5:27 PM IST

ಸಚಿವ ಬೈರತಿ ಬಸವರಾಜ ವಿರುದ್ಧ ಎಫ್​ಐಆರ್ ದಾಖಲು ಆದೇಶ ವಿಚಾರ ನಿಲುವಳಿ ಸೂಚನೆ ಮಂಡನೆಗೆ ಸಭಾಪತಿ ಅವಕಾಶ ನೀಡದ ಹಿನ್ನೆಲೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ 14 ಕಾಂಗ್ರೆಸ್​ ಸದಸ್ಯರನ್ನು ಅಮಾನತು ಮಾಡಿ ಸಭಾಪತಿ ಬಸವರಾಜ ಹೊರಟ್ಟಿ ಆದೇಶಿಸಿದ್ದಾರೆ.

congress mlc dismiss
ಕಾಂಗ್ರೆಸ್​ ಸದಸ್ಯರ ಅಮಾನತು

ಬೆಳಗಾವಿ: ಸಚಿವ ಬೈರತಿ ಬಸವರಾಜ ವಿರುದ್ಧ ಎಫ್​ಐಆರ್ ದಾಖಲು ಆದೇಶ ವಿಚಾರವಾಗಿ ನಿಲುವಳಿ ಸೂಚನೆ ಮಂಡನೆಗೆ ಸಭಾಪತಿ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ 14 ಕಾಂಗ್ರೆಸ್​ ಸದಸ್ಯರನ್ನು ಅಮಾನತು ಮಾಡಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಆದೇಶಿಸಿದ್ದಾರೆ.

ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂದು ಕೂಗುತ್ತಾ ಭಿತ್ತಿಪತ್ರ ಹಿಡಿದು ಕಾಂಗ್ರೆಸ್​ ಸದಸ್ಯರು ಪ್ರತಿಭಟನೆ ನಡೆಸಿದರು. ವೇಳೆ ಮಧ್ಯಪ್ರವೇಶಿಸಿದ ಸಚಿವ ವಿ‌.ಸೋಮಣ್ಣ ಸಭಾಪತಿ ಈಗಾಗಲೇ ರೂಲಿಂಗ್ ನೀಡಿದ್ದಾರೆ. ಸದನ ಉತ್ತಮವಾಗಿ ನಡೆಸಬೇಕು. ಕೋರ್ಟ್​ನಲ್ಲಿರುವ ಪ್ರಕರಣ ಇಲ್ಲಿ ಚರ್ಚೆ ಮಾಡಲಿಕ್ಕೆ ಸಾಧ್ಯವಿಲ್ಲ. ಹೀಗಾಗಿ ಸದನ ನಡೆಯಲು ಅವಕಾಶ ನೀಡಿವಂತೆ ಮನವಿ ಮಾಡಿದರು.

ದಿನದ ಮಟ್ಟಿಗೆ 14 ಕಾಂಗ್ರೆಸ್​ ಸದಸ್ಯರ ಅಮಾನತು

ಕಾಂಗ್ರೆಸ್ ಬಿಜೆಪಿ ಸದಸ್ಯರಿಂದ ಸದನದಲ್ಲಿ ಗದ್ದಲ ನಡೆದಾಗ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಭೈರತಿ ಬಸವರಾಜ ರಾಜೀನಾಮೆಗೆ ಆಗ್ರಹಿಸಿದರು. ಪೀಠದ ಆದೇಶ ನೀಡಿದ ಮೇಲೆ ಅದನ್ನ ಪಾಲನೆ ಮಾಡಬೇಕು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಶ್ನಿಸಲಾಗಿದೆ. ಹೀಗಾಗಿ ಚರ್ಚೆಗೆ ಅವಕಾಶ ನೀಡಬಾರದು ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಸಭಾಪತಿ ಬಸವರಾಜ ಹೊರಟ್ಟಿ ಆದೇಶ

ಸಭಾಪತಿ ಬಸವರಾಜ ಹೊರಟ್ಟಿ ಸದನ ಬಾವಿಯಲ್ಲಿರುವ ಸದಸ್ಯರನ್ನ ಒಂದು ದಿನ ಮಟ್ಟಿಗೆ ಅಮಾನತು ಮಾಡಿ ಆದೇಶ ಮಾಡಿದರು. ಕಾಂಗ್ರೆಸ್​ನ ಬಹುತೇಕ ಸದಸ್ಯರು ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸುವುದರ ಜತೆಗೆ, ಸಭಾಪತಿಗಳ ರೂಲಿಂಗ್ ಪ್ರಶ್ನಿಸಿದ್ದಕ್ಕೆ ಒಂದು ದಿನದ ಮಟ್ಟಿಗೆ ಅಮಾನತು ಮಾಡಿದ ಸಭಾಪತಿ ಹೊರಟ್ಟಿ ಸದನವನ್ನು ನಿಯಂತ್ರಣಕ್ಕೆ ಪಡೆಯುವ ಯತ್ನ ಮಾಡಿದರು.

ಸದನದಿಂದ ಸಭಾಪತಿ ನಿರ್ಗಮನ

ರೂಲಿಂಗ್ ನೀಡಿದ ಬಳಿಕ ಕಾಂಗ್ರೆಸ್​ ಸದಸ್ಯರನ್ನು ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಫಲ ಸಿಗದ ಹಿನ್ನೆಲೆ ಬಸವರಾಜ ಹೊರಟ್ಟಿ ಸದನದಿಂದ ತೆರಳಿದರು. ಸಭಾಪತಿ ಪೀಠದಲ್ಲಿದ್ದ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಪ್ರತಿಭಟನೆ ನಿರತ ಸದಸ್ಯರ‌ ಮನವೊಲಿಸಲು ಪ್ರಯತ್ನ ಮಾಡಿದರು.

ಒಂದು ಸಂದರ್ಭದಲ್ಲಿ ರೂಲಿಂಗ್ ವಾಪಸ್ ಪಡೆಯುವ ಸಾಧ್ಯತೆಯೂ ಗೋಚರಿಸಿತು. ಆದರೆ ಕೈ ಸದಸ್ಯರ ಆಕ್ರೋಶ, ಪ್ರತಿಭಟನೆ ಮುಂದುವರಿದಾಗ 14 ಸದಸ್ಯರನ್ನು ಸದನದಿಂದ ಹೊರ ಹಾಕುವಂತೆ ಮಾರ್ಷಲ್​​​ಗಳಿಗೆ ಆದೇಶಿಸಿದರು.

ಅಮಾನತಾದ ಸದಸ್ಯರ ವಿವರ

ಸದಸ್ಯರಾದ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್, ಕಾಂಗ್ರೆಸ್ ಸಚೇತಕ ಎನ್ ನಾರಾಯಣಸ್ವಾಮಿ, ಪಿ ಆರ್ ರಮೇಶ್, ಬಿ.ಕೆ. ಹರಿಪ್ರಸಾದ್, ಪ್ರತಾಪ್ ಚಂದ್ರ ಶೆಟ್ಟಿ, ಯು ಬಿ ವೆಂಕಟೇಶ, ವೀಣಾ ಅಚ್ಚಯ್ಯ, ಸಿ.ಎಂ. ಇಬ್ರಾಹಿಂ, ಹರೀಶ್ ಕುಮಾರ್, ನಜೀರ್ ಅಹ್ಮದ್, ಆರ್.ಬಿ. ತಿಮ್ಮಾಪೂರ್, ಬಸವರಾಜ್ ಪಾಟೀಲ್ ಇಟಗಿ, ವಿ.ಆರ್. ರಮೇಶ್, ಗೋಪಾಲಸ್ವಾಮಿ ಅವರನ್ನು ಒಂದು ದಿನದ ಅವಧಿಗೆ ಅಮಾನತುಗೊಳಿಸಲಾಯಿತು.

ಇದನ್ನೂ ಓದಿ: ಸಚಿವರ ವಿರುದ್ಧ ಕೋರ್ಟಿನಲ್ಲಿನ ಕೇಸ್ ಚರ್ಚೆಗೆ ಪಟ್ಟು : ಕಾಂಗ್ರೆಸ್ ನಿಲುವಳಿ ಸೂಚನೆ ತಿರಸ್ಕರಿಸಿದ ಸಭಾಪತಿ ಹೊರಟ್ಟಿ

Last Updated : Dec 15, 2021, 5:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.