ಬೆಂಗಳೂರು: ರಾಜ್ಯದಲ್ಲಿಂದು 1,14,559 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 405 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 30,03,969 ಕ್ಕೆ ಏರಿಕೆ ಆಗಿದೆ. ಇನ್ನು 267 ಮಂದಿ ಗುಣಮುಖರಾಗಿದ್ದು, ಈವರೆಗೆ 29,58,384 ಡಿಸ್ಚಾರ್ಜ್ ಆಗಿದ್ದಾರೆ.
ಇಂದು ನಾಲ್ವರು ಸೋಂಕಿತರು ಮೃತಪಟ್ಟಿದ್ದು, 38,305ಕ್ಕೆ ಸಾವಿನ ಸಂಖ್ಯೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 7,251 ಕ್ಕೆ ಏರಿಕೆ ಕಂಡಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ 0.35 ರಷ್ಟು ಇದ್ದು, ಸಾವಿನ ಪ್ರಮಾಣ ಶೇ.0.98 ರಷ್ಟಿದೆ. ವಿಮಾನ ನಿಲ್ದಾಣದಲ್ಲಿ 1,636 ಪ್ರಯಾಣಿಕರು ತಪಾಸಣೆಗೊಳಪಟ್ಟಿದ್ದು, ಹೈರಿಸ್ಕ್ ದೇಶಗಳಿಂದ 117 ಪ್ರಯಾಣಿಕರು ಆಗಮಿಸಿದ್ದಾರೆ.
ಬೆಂಗಳೂರು ವರದಿ:
ರಾಜಧಾನಿ ಬೆಂಗಳೂರಲ್ಲಿಂದು 254 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,61,156 ಕ್ಕೆ ಏರಿದೆ. 128 ಜನರು ಡಿಸ್ಚಾರ್ಜ್ ಆಗಿದ್ದು, 12,38,908 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,381ಕ್ಕೆ ಹೆಚ್ಚಿದೆ. ಸದ್ಯ ಸಕ್ರಿಯ ಪ್ರಕರಣಗಳು 5,866 ರಷ್ಟಿವೆ.
ರೂಪಾಂತರಿ ಅಪ್ಡೇಟ್ಸ್:
ಅಲ್ಪಾ - 155
ಬೇಟಾ - 08
ಡೆಲ್ಟಾ - 2,569
ಡೆಲ್ಟಾ ಸಬ್ ಲೈನ್ ಏಜ್ - 949
ಕಪ್ಪಾ - 160
ಈಟಾ - 01
ಒಮಿಕ್ರಾನ್ - 31