ಬೆಂಗಳೂರು: ರಾಜ್ಯದಲ್ಲಿಂದು 30,718 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಅದರಲ್ಲಿ 173 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,44,605 ಕ್ಕೆ ಏರಿಕೆ ಆಗಿದೆ. ಒಟ್ಟಾರೆ ಪಾಸಿಟಿವ್ ದರ ಶೇ.0.56 ರಷ್ಟು ಮಾತ್ರ ಇದೆ.
ಇತ್ತ 153 ಸೋಂಕಿತರು ಗುಣಮುಖರಾಗಿದ್ದು, ಈತನಕ 39,02,497 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 2031 ಇವೆ. ಇಂದು ಸೋಂಕಿಗೆ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,035 ಏರಿಕೆ ಕಂಡಿದೆ. ಡೆತ್ ರೇಟ್ 1.15% ರಷ್ಟಿದೆ.
ಬೆಂಗಳೂರಿನಲ್ಲಿ 138 ಸೋಂಕು ತಗುಲಿದ್ದು 17,80,916 ಕ್ಕೆ ಏರಿಕೆ ಆಗಿದೆ. 110 ಮಂದಿ ಡಿಸ್ಚಾರ್ಜ್ ಆಗಿದ್ದು ಈ ತನಕ 17,62,224 ಏರಿಕೆ ಕಂಡಿದೆ. ಒಬ್ಬ ಸೋಂಕಿತ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,950 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,741ರಷ್ಟಿದೆ.
ವೈರಸ್ ಅಪ್ಡೇಟ್ಸ್..
ಅಲ್ಪಾ- 156
ಬೀಟಾ-08
ಡೆಲ್ಟಾ ಸಬ್ ಲೈನೇಜ್- 4619
ಇತರೆ- 286
ಒಮಿಕ್ರಾನ್-2,743
BAI.1.529- 813
BA1- 97
BA2- 1833
ಓದಿ: ಒಂದಲ್ಲ, ಎರಡಲ್ಲ; ಬರೋಬ್ಬರಿ 500 ಸಲ ವ್ಯಕ್ತಿಗೆ ಕಚ್ಚಿವೆಯಂತೆ ಹಾವುಗಳು!