ಬೆಂಗಳೂರು: ಪ್ರತಿ ಬಾರಿಯಂತೆ ಈ ಬಾರಿಯೂ ಕೂಡಾ ಕೆಲವೊಂದು ಜಿಲ್ಲೆಗಳು ಸಚಿವ ಸ್ಥಾನದಿಂದ ವಂಚಿತವಾಗಿವೆ. ಈ ಬಾರಿ ಸಚಿವ ಸಂಪುಟದಲ್ಲಿ ಸುಮಾರು 12 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಆರು ಜಿಲ್ಲೆಗಳಿಂದ ತಲಾ ಇಬ್ಬರು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲೂ 11 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿರಲಿಲ್ಲ. ಮತ್ತೆ ಈ ಸಂಪುಟದಲ್ಲೂ ಅದೇ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಆ ಜಿಲ್ಲೆಗಳೆಂದರೆ..
- ಮೈಸೂರು
- ಕಲಬುರಗಿ
- ರಾಮನಗರ
- ಕೊಡಗು
- ರಾಯಚೂರು
- ಹಾಸನ
- ವಿಜಯಪುರ
- ಬಳ್ಳಾರಿ
- ದಾವಣಗೆರೆ
- ಕೋಲಾರ
- ಯಾದಗಿರಿ
- ಚಿಕ್ಕಮಗಳೂರು
ಸಚಿವ ಸ್ಥಾನಕ್ಕಾಗಿ ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದ ಕೆಲವರಿಗೆ ಭಾರಿ ನಿರಾಸೆಯಾಗಿದೆ. ಬಿಎಸ್ವೈ ಸಂಪುಟದಲ್ಲಿ ಸಚಿವರಾಗಿದ್ದ ಸುರೇಶ್ ಕುಮಾರ್ ಸೇರಿ 6 ಮಂದಿಗೆ ಸಚಿವ ಸ್ಥಾನ ನಿರಾಕರಿಸಲಾಗಿದೆ. ಜಗದೀಶ್ ಶೆಟ್ಟರ್ ಸ್ವಇಚ್ಛೆಯಿಂದಲೇ ಸಂಪುಟ ಸೇರ್ಪಡೆಯಾಗಲು ನಿರಾಕರಿಸಿದ್ದಾರೆ.
- ಎಸ್. ಸುರೇಶ್ ಕುಮಾರ್
- ಅರವಿಂದ ಲಿಂಬಾವಳಿ
- ಲಕ್ಷ್ಮಣ ಸವದಿ
- ಸಿ.ಪಿ.ಯೋಗೇಶ್ವರ್
- ಆರ್.ಶಂಕರ್
- ಶ್ರೀಮಂತ ಪಾಟೀಲ್