ಬೆಂಗಳೂರು: ಜ್ಞಾನ ಪೀಠ ಪ್ರಶಸ್ತಿ ವಿಜೇತರಾದ ಚಂದ್ರಶೇಖರ್ ಕಂಬಾರ ಅವರ ಕತ್ರಿಗುಪ್ಪೆ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಭೇಟಿ ನೀಡಿದ್ರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಚಂದ್ರಶೇಖರ ಕಂಬಾರ, ನಾನು ಭಾಷೆಯ ವಿಚಾರವಾಗಿ ನಡ್ಡಾ ಅವರ ಜೊತೆ ಚರ್ಚಿಸಿದೆ. ಭಾರತದಲ್ಲಿ 2000 ಭಾಷೆಗಳಿವೆ. ಅವುಗಳಲ್ಲಿ ಕೇವಲ 24 ಭಾಷೆಗಳನ್ನು ಅಧಿಕೃತಗೊಳಿಸಿದ್ದಾರೆ. ಇನ್ನುಳಿದ ಭಾಷೆಗಳನ್ನು ಕೇಂದ್ರ ಸರ್ಕಾರ ಅಧಿಕೃತಗೊಳಿಸಬೇಕು ಎಂದರು. ಸದ್ಯ ದೇಶದಲ್ಲಿ ದೊಡ್ಡ ಸಮಸ್ಯೆ ಎಂದರೆ ಇಂಗ್ಲೀಷ್. ಇದರ ಪ್ರಭಾವದಿಂದ ಬಹಳ ತೊಂದರೆಯಾಗುತ್ತಿದೆ. ಇದನ್ನು ಸರ್ಕಾರ ನಿವಾರಿಸಬೇಕು.
ಅಲ್ಲದೆ, ಜೆಪಿ ನಡ್ಡಾ ಅವರು, ಕಾಶ್ಮೀರದಲ್ಲಿ 370 ವಿಧಿಯನ್ನು ಯಾಕೆ ರದ್ದತಿ ಮಾಡಿದ್ರು ಅನ್ನೋದರ ಬಗ್ಗೆ ನನಗೆ ವಿವರಿಸಿದರು. ಕಾಶ್ಮೀರದಲ್ಲಿ ಏನು ಆಗುತ್ತಿದೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿದೆ ಎನ್ನುವುದರ ಬಗ್ಗೆ ನನಗೆ ಮಾಹಿತಿ ನೀಡಿದ್ರು ಎಂದರು. ಇನ್ನು, ಜೆಪಿ ನಡ್ಡಾ ಚಂದ್ರಶೇಖರ್ ಕಂಬಾರ ಅವರನ್ನು ಭೇಟಿ ಮಾಡಿದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ, ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿಯಾದ ಮುರಳೀಧರ ರಾವ್ ಉಪಸ್ಥಿತರಿದ್ದರು.