ಬೆಂಗಳೂರು: ಪಂಜಾಬ್ನಲ್ಲಿ ಒಬ್ಬ ಸಿದ್ದು, ರಾಜ್ಯದಲ್ಲಿ ಒಬ್ಬ ಸಿದ್ದು ಇದ್ದಾರೆ. ಪಂಜಾಬ್ ಸಿಧುರಿಂದ ಅಲ್ಲಿ ಕಾಂಗ್ರೆಸ್ ನಾಶವಾಗಿದೆ. ಇಲ್ಲಿನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ರಿಂದ ಕಾಂಗ್ರೆಸ್ಗೆ ಇತಿಶ್ರೀ ಬೀಳಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಟಾಂಗ್ ನೀಡಿದರು.
ವಿಧಾನಸೌಧದಲ್ಲಿ ಪಂಚ ರಾಜ್ಯಗಳ ಫಲಿತಾಂಶ ಬಗ್ಗೆ ಮಾತನಾಡಿದ ಅವರು, ನಾವು ನಿರೀಕ್ಷಿಸಿದಂತೆ ಫಲಿತಾಂಶ ಬಂದಿದೆ. ಚುನಾವಣಾ ಸಮೀಕ್ಷೆ ಕೂಡ ನಿಜವಾಗಿದೆ. ಉತ್ತರಾಖಂಡ್ನಲ್ಲಿ ಅಭೂತಪೂರ್ವ ಫಲಿತಾಂಶ ಬಂದಿದೆ. 4 ರಾಜ್ಯಗಳ ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನೆಗಳು. ಈ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ಹಾಗೂ ಭಾರತದ ಭವಿಷ್ಯಕ್ಕೆ ಪೂರಕವಾಗಲಿದೆ ಎಂದರು.
100 ವರ್ಷಗಳ ಕಾಂಗ್ರೆಸ್ಗೆ ನಾಯಕತ್ವದ ಕೊರತೆ ಇದೆ. ಒಂದೇ ಕುಟುಂಬದ ಮೇಲೆ ಅವಲಂಬಿತವಾಗಿರುವುದರಿಂದ ಪಕ್ಷ ನಾಶವಾಗಲಿದೆ. ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತವಾದ ಪಕ್ಷ ಅಲ್ಲ. ಇದು ಕಾರ್ಯಕರ್ತರ ಪಕ್ಷ. ಪ್ರತಿಯೊಂದು ರಾಜ್ಯದಲ್ಲೂ ಕಾಂಗ್ರೆಸ್ ಮುಕ್ತ ಆಗಲಿದೆ, ನಮ್ಮ ರಾಜ್ಯದಲ್ಲೂ ಕಾಂಗ್ರೆಸ್ ಮುಕ್ತ ಆಗಲಿದೆ. ಕಾಂಗ್ರೆಸ್ ಪಾದಯಾತ್ರೆ ಹೈಡ್ರಾಮ, ಯಾರೂ ನಂಬಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ರಾಮನಗರದ ಆ ಪ್ರಭಾವಿ ನಾಯಕನಾದರೂ ಯಾರು?: ಯತ್ನಾಳ್ ಪ್ರಶ್ನೆಗೆ ಹೆಚ್ಡಿಕೆ ಹೇಳಿದ್ದೇನು?