ETV Bharat / city

ಕೋವ್ಯಾಕ್ಸಿನ್ ಲಸಿಕೆ ಪಡೆದ ತರಳಬಾಳು ಜಗದ್ಗುರು ಶಿವಾಚಾರ್ಯ ಶ್ರೀ

ವಿಶ್ವದಲ್ಲೆಡೆ ತಲ್ಲಣ ಸೃಷ್ಟಿಸಿದ ಮಹಾಮಾರಿ ಕೊರೊನಾ ಪಿಡುಗನ್ನು ಹೋಗಲಾಡಿಸಲು ಲಸಿಕೆ ಪಡೆಯುವುದೇ ಏಕೈಕ ಮಾರ್ಗವಾಗಿದ್ದು, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಶಿವಾಚಾರ್ಯ ಮಹಾಸ್ವಾಮಿ ಸಂದೇಶ ನೀಡಿದ್ದಾರೆ.

author img

By

Published : Mar 16, 2021, 5:21 PM IST

Jagadguru Shivacharya swamiji
ತರಳಬಾಳು ಜಗದ್ಗುರು ಶಿವಾಚಾರ್ಯ ಶ್ರೀ

ಬೆಂಗಳೂರು: ಇಂದು ಬೆಂಗಳೂರಿನ ವಿಕ್ಟೋರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಕೋವ್ಯಾಕ್ಸಿನ್ ಲಸಿಕೆ ಪಡೆದರು.

ತರಳಬಾಳು ಜಗದ್ಗುರು ಶಿವಾಚಾರ್ಯ ಶ್ರೀ

ಓದಿ: 8 ಸಾವಿರ ಕೋಳಿಗಳ ಸಾವು: ಅನುಮಾನಕ್ಕೆ ಕಾರಣವಾದ ಫಾರಂ ಮಾಲೀಕರ ನಡೆ

ವಿಶ್ವದಲ್ಲೆಡೆ ತಲ್ಲಣ ಸೃಷ್ಟಿಸಿದ ಮಹಾಮಾರಿ ಕೊರೊನಾ ಪಿಡುಗನ್ನು ಹೋಗಲಾಡಿಸಲು ಲಸಿಕೆ ಪಡೆಯುವುದೇ ಏಕೈಕ ಮಾರ್ಗವಾಗಿದ್ದು, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಸಂದೇಶ ನೀಡಿದ್ದಾರೆ. ಲಸಿಕೆ ಪಡೆಯಲು ಯಾರೂ ಭಯ ಪಡಬೇಕಾಗಿಲ್ಲ. ಸೂಜಿ ಚುಚ್ಚುವುದು ಗೊತ್ತೇ ಆಗುವುದಿಲ್ಲ. ಇರುವೆ ಕಚ್ಚಿದಷ್ಟೂ ನೋವು ಆಗುವುದಿಲ್ಲ ಎಂದು ತಮ್ಮ ಅನುಭವವನ್ನು ಹೇಳಿದ ಶ್ರೀಗಳು, ಭಕ್ತಾದಿಗಳು ಮತ್ತು ಸಾರ್ವಜನಿಕರು ಯಾವುದೇ ಭಯವಿಲ್ಲದೆ ವ್ಯಾಕ್ಸಿನ್ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಕರೆ ನೀಡಿದ್ದಾರೆ.

'ಮನೆ ಗೆದ್ದು ಮಾರು ಗೆಲ್ಲು' ಎನ್ನುವಂತೆ ನಮ್ಮ ದೇಶದ ಎಲ್ಲ ಪ್ರಜೆಗಳಿಗೆ ಲಸಿಕೆಯನ್ನು ಕೊಡುವುದಲ್ಲದೆ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆಯನ್ನು ಪೂರೈಕೆ ಮಾಡುತ್ತಿರುವ ಭಾರತದ ಪ್ರಧಾನಿ ಮೋದಿಯವರ ಮಾನವೀಯ ದೃಷ್ಟಿಯನ್ನು ಶ್ಲಾಘಿಸಿದರು.

ಇದು ಸಹಸ್ರಾರು ವರ್ಷಗಳ ಹಿಂದೆ 'ವಸುಧೈವ ಕುಟುಂಬಕಂ' ಎಂದು ಬೋಧಿಸಿದ ಉಪನಿಷತ್ತಿನ ಸೂಕ್ತಿಗೆ ಮತ್ತು 'ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಕೂಡಲಸಂಗನ ಶರಣರೇ ಕುಲಜರು' ಎನ್ನುವ ಬಸವಣ್ಣನವರ ಆಶಯಕ್ಕೆ ಪೂರಕವಾಗಿದೆ. ಮನುಜ ಕುಲವನ್ನು ಸಂರಕ್ಷಿಸಿದ ಮಹಾನ್ ರಾಷ್ಟ್ರ ಭಾರತವಾಗಲಿದೆ ಎಂದು ಬಣ್ಣಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.