ಬೆಂಗಳೂರು: ಮದ್ಯ ಸಾಮ್ರಾಜ್ಯದ ಪ್ರಮುಖ ಕಂಪನಿಯಾದ ಬೆಂಗಳೂರಿನ ಖೋಡೇಸ್ ಗ್ರೂಪ್ ಮೇಲೆ ಐಟಿ ದಾಳಿ ನಡೆದಿದೆ.
ಖೋಡೇಸ್ ಗ್ರೂಪ್ನ 15ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಬೆಳಿಗ್ಗೆ 7 ಗಂಟೆಯಿಂದಲೇ ದಾಳಿ ಪ್ರಾರಂಭವಾಗಿದೆ. ಆನಂದ ರಾವ್ ಸರ್ಕಲ್ನ ಶೇಷಾದ್ರಿ ರಸ್ತೆಯಲ್ಲಿರುವ ಖೋಡೇಸ್ ಗ್ರೂಪ್ ಮಾಲೀಕರ ಎರಡು ಮನೆ, ಖೋಡೇಸ್ ಬ್ರಿವರೇಜಸ್, ಖೋಡೆ ಆರ್ಸಿಎ, ಖೋಡೆ ಇಂಡಿಯಾ ಫ್ಯಾಕ್ಟರಿಗಳು ಮತ್ತು ಕಚೇರಿ ಸೇರಿದಂತೆ ವಿವಿಧೆಡೆ ಸುಮಾರು ಇಪತ್ತಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು, ಶೇಷಾದ್ರಿ ರಸ್ತೆಯಲ್ಲಿರುವ ರಾಮಚಂದ್ರ ಖೋಡೆ, ಹರಿ ಖೋಡೆ ಸಹೋದರರ ಮನೆ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.