ETV Bharat / city

600 ವಿದ್ಯಾರ್ಥಿಗಳಿಂದ ಅನಾವರಣಗೊಂಡ  ಹತ್ಯಾಕಾಂಡ ದೃಶ್ಯರೂಪಕ

ಸ್ವಾತಂತ್ರ್ಯ ದಿನದ ಪ್ರಯುಕ್ತ ಮಾಣಿಕ್​ ಷಾ ಪರೇಡ್​ ಮೈದಾನದಲ್ಲಿ ರಾಜಧಾನಿಯ ಹಲವು ಶಾಲೆಗಳ ಮಕ್ಕಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನ ಗಳಿಸಿದ ಶಾಲಾ ವಿದ್ಯಾರ್ಥಿಗಳು ಸಂಭ್ರಮಿಸಿದರು.

Independence day celebration in Bangalore
author img

By

Published : Aug 15, 2019, 1:50 PM IST

ಬೆಂಗಳೂರು: ಪಂಜಾಬ್​ ನ ಅಮೃತಸರದ ಜಲಿಯನ್‌ ವಾಲಾಬಾಗ್ ಉದ್ಯಾನದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಸಮಾವೇಶ ಸ್ಥಳಕ್ಕೆ ನುಗ್ಗಿದ ಬ್ರಿಟಿಷ್ ಸೈನ್ಯ ಜನರ ಮೇಲೆ ಗುಂಡು ಹಾರಿಸಿತ್ತು. ಭಾರತೀಯರ ಮೇಲೆ ಗುಂಡು ಹಾರಿಸುವಂತೆ ಆದೇಶ ನೀಡಿದ್ದು ಬ್ರಿಟಿಷ್ ಸೇನಾಧಿಕಾರಿ ಜನರಲ್ ಡಯರ್. ಈ ದಾಳಿಯಲ್ಲಿ ಸಾವಿರಾರು ಭಾರತೀಯರು ಅಸುನೀಗಿದರು.

ಸ್ವಾತಂತ್ರ್ಯ ದಿನದ ನಿಮಿತ್ತ ನಗರದ ಮಾಣಿಕ್​ ಷಾ ಪರೇಡ್​ ಮೈದಾನದಲ್ಲಿ ಹೆರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 600 ವಿದ್ಯಾರ್ಥಿಗಳು ನೃತ್ಯದ ಮೂಲಕ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದೃಶ್ಯವನ್ನು ಕಣ್ಣೆದುರು ತಂದರು.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದುರಂತದ ದೃಶ್ಯರೂಪಕ

ಶತಮಾನದ ಇತಿಹಾಸ ಹೊಂದಿರುವ ಈ ದುರಂತವನ್ನು ದೃಶ್ಯರೂಪಕದ ಮೂಲಕ ಪ್ರಸ್ತುತ ಪಡಿಸಿ ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಬಡಿದೆಬ್ಬಿಸುವಂತೆ ಮಾಡಿತು. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಪ್ರದರ್ಶನ ನೀಡಿದ ತಂಡ ಮೊದಲ ಪ್ರಶಸ್ತಿ ಪಡೆದುಕೊಂಡಿತು.

ಈ ಬಾರಿ ಸ್ವಾತಂತ್ರ್ಯ ದಿನವನ್ನು ಸರಳವಾಗಿ ಆಚರಿಸಲಾಯಿತು. ಪ್ರತಿ ವರ್ಷದಂತೆ ಸೇನಾ ಕವಾಯತು, ಸಾಹಸ ಪ್ರದರ್ಶನಗಳು ಈ ಬಾರಿ ನಡೆಯಲಿಲ್ಲ.‌ ಬದಲಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕರ್ನಾಟಕ‌ ಪಬ್ಲಿಕ್ ಸ್ಕೂಲ್​​ನಿಂದ 'ಭಾರತಾಂಬೆಯ ಮಡಿಲಿನ‌ ಮಕ್ಕಳ' ಗೀತೆಗೆ 650 ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.

ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್​ನ 26 ಸದಸ್ಯರಿಂದ ಜಿಮ್ನಾಸ್ಟಿಕ್​ ಮಾಡಲಾಯಿತು. ಮದ್ರಾಸ್ ರೆಜಿಮೆಂಟಲ್ ಸೆಂಟರ್​ನ 13 ಸದಸ್ಯರು ಕಲರಿಪಯಟ್ಟು ಪ್ರರ್ದಶಿಸಿದರು. ದೇಶಾಭಿಮಾನ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನ ಕಣ್ಣು ಮಿಟುಕಿಸದಂತೆ ನೋಡುತ್ತಿದ್ದ ದೃಶ್ಯ ಕಂಡು ಬಂತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳಿಗೆ ಸಾರ್ವಜನಿಕರು ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು.

ಇನ್ನು ಕಾರ್ಯಕ್ರಮದ ಕೊನೆಯಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಮೂರು ವರ್ಷಗಳಿಂದ ಸತತ ಪರೇಡ್ ಮುನ್ನಡೆಸುತ್ತಿರುವ ಕಮಾಂಡರ್ ಯೋಗೇಶ್ ಅವರಿಗೆ ಮೊದಲ ಬಹುಮಾನ ವಿತರಿಸಲಾಯಿತು. ಭದ್ರತಾ ವಿಭಾಗದಲ್ಲಿ ಕೆಎಸ್​ಆರ್​ ಮೊದಲ ಪ್ರಶಸ್ತಿ ಗಳಿಸಿತು.

Intro:ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಅನಾವರಣಗೊಂಡ ಜಲಿಯನ್ ವಾಲಾಬಾಗ್ ಹತ್ಯಾಕಾಂಡ..

ಬೆಂಗಳೂರು: ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಘಟನೆ ನಡೆದು 100 ವರ್ಷಗಳು ಉರುಳಿವೆ.. ಆದರೂ ಜಲಿಯನ್ ವಾಲಾಬಾಗ್ ಎನ್ನುವ ಹೆಸರೇ ಪ್ರತೀ ಭಾರತೀಯರ ದೇಶಭಕ್ತಿಯನ್ನು ಬಡಿದೆಬ್ಬಿಸುತ್ತದೆ.. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಡೆದು ಹೋದ ಆ ಭೀಕರ ದುರಂತ, ಕಳೆದುಹೋದ ನೆನಪನ್ನು ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತದೆ.. ಪಂಜಾಬಿನ ಅಮೃತಸರದ ಜಲಿಯನ್‌ ವಾಲಾಬಾಗ್ ಉದ್ಯಾನ ವನದಲ್ಲಿ ಸಾರ್ವಜನಿಕ ಸಭೆ ಶಾಂತಿಯುತವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಎಲ್ಲರ ಮೇಲೆ ಬ್ರಿಟಿಷ್ ಅಧಿಕಾರಿ ಡಯರ್ ಸಾಮೂಹಿಕ ಗುಂಡಿನ ಮಳೆಗರಿಸಿದ..‌ಇದರ ಪರಿಣಾಮವಾಗಿ ಸಾವಿರಾರು ಮುಗ್ಧ ಭಾರತೀಯರು ಪ್ರಾಣ ತೆರಬೇಕಾಯಿತು.. ಈ ಘಟನೆ ನಡೆದು ಈ ವರ್ಷಕ್ಕೆ 100 ವರ್ಷಗಳೇ ಸಂದಿವೆ...

ಈ ಘಟನೆಯ ದೃಶ್ಯರೂಪಕದ ಮೂಲಕ ಹೆರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತ ಪಡೆಸಿದರು.ನೃತ್ಯದಲ್ಲಿ 600 ಮಕ್ಕಳು ಭಾಗಿಯಾಗಿ ಜಲಿಯನ್ ವಾಲಾಬಾಗ್ ದೃಶ್ಯ ಕಣ್ಣೇದರು ತಂದರು..

ಫ್ಲೋ....

ಈ ಬಾರಿ ಮಾಣಿಕಾ ಷಾ ಪರೇಡ್ ಮೈದಾನದಲ್ಲಿ
ಸ್ವಾತಂತ್ರ್ಯ ದಿನಾಚರಣೆಯನ್ನ‌ ಬಹಳ ಸರಳವಾಗಿ ಆಚರಿಸಲಾಯಿತು.. ಪ್ರತಿ ವರ್ಷದಂತೆ ನಡೆಯುತ್ತಿದ್ದ ಸೇನಾ ಕವಾಯತು, ಸಾಹಸೀ ಪ್ರದರ್ಶನ ಗಳು ಈ ಬಾರಿ ಇರಲಿಲ್ಲ.‌ ಬದಲಾಗಿ ಕೇವಲ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.. ಕರ್ನಾಟಕ‌ ಪಬ್ಲಿಕ್ ಸ್ಕೂಲ್ ನಿಂದ ಭಾರತಾಂಬೆಯ ಮಡಿಲಿನ‌ ಮಕ್ಕಳ ಗೀತೆಗೆ 650 ಮಕ್ಕಳಿಂದ ನೃತ್ಯ ಮತ್ತು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್ ನ 26 ಸದಸ್ಯರಿಂದ ಜಿಮ್ನಾಸ್ಟಿಕ್ಸ್ ಮಾಡಲಾಯಿತು.. ಮದ್ರಾಸ್ ರೆಜಿಮೆಂಟಲ್ ಸೆಂಟರ್ 13 ಸದಸ್ಯರಿಂದ ಕಲರಿಪಯಟ್ಟು ಪ್ರರ್ದಶಿಸಲಾಯಿತು..

ದೇಶಭಕ್ತಿಯನ್ನು ಬಡಿದೆಬ್ಬಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜನರು ಕಣ್ಣು ಮಿಟುಕಿಸದಂತೆ ನೋಡುತ್ತುದ್ದ ದೃಶ್ಯ ಕಂಡು ಬಂತು.. ಚಪ್ಪಾಳೆಯ ಮೂಲಕ ಪ್ರೋತ್ಸಾಹಿಸಿದರು..

ಇನ್ನು ಕಾರ್ಯಕ್ರಮದ ಕೊನೆಯಲ್ಲಿ ಸಿಎಂ ಯಡಿಯೂರಪ್ಪ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.. ಮೂರು ವರ್ಷಗಳಿಂದ ಸತತ ಪರೇಡ್ ಮುನ್ನಡೆ ಸುತ್ತಿರುವ ಪರೇಡ್ ಕಮಾಂಡರ್ ಯೋಗೇಶ್ ಅವರಿಗೆ ಮೊದಲ ಬಹುಮಾನ ನೀಡಲಾಯಿತು.. ಕೆಎಸ್ ಆರ್ ಟಿಸಿಯ ಭದ್ರತಾ ವಿಭಾಗದಲ್ಲಿ ಮೊದಲ ಪ್ರಶಸ್ತಿ ಗಳಿಸಿತು.. ಇನ್ನು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಪ್ರದರ್ಶನ ನೀಡಿದವರಿಗೆ ಮೊದಲ ಪ್ರಶಸ್ತಿಗೆ ಭಾಜನರಾದರು..

KN_BNG_01_MANIKAPARADE_JALIYANWALABAG

ಬ್ಯಾಕ್ ಪ್ಯಾಕ್ ಮೂಲಕ‌ವಿಡಿಯೋ ಬಂದಿವೆ..
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.