ETV Bharat / city

ಹೈಟೆನ್ಶನ್ ವಿದ್ಯುತ್ ತಂತಿ ಕೆಳಗೆ ಅನಧಿಕೃತ ಕಟ್ಟಡಗಳ ತೆರವಿಗೆ ಆಯುಕ್ತರ ಸೂಚನೆ - ಬಿಬಿಎಂಪಿ ಆಯುಕ್ತ

ಅನಧಿಕೃತ ಓಎಫ್ಸಿ ಕೇಬಲ್​ಗಳನ್ನು ಪಾಲಿಕೆಯ ಎಲ್ಲಾ ವಾರ್ಡ್​ಗಳಲ್ಲಿ ಗುರುತಿಸಿ, ಒಂದು ದಿನವನ್ನು ನಿಗದಿಪಡಿಸಿ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಲು ಸೂಕ್ತ ಕ್ರಮವಹಿಸಬೇಕು. ಅನುಮತಿ ಪಡೆದಿದ್ದರೆ ಅನುಮತಿ ಪಡೆದಿರುವ ಪತ್ರ ಪರಿಶೀಲಿಸಿ ನಿಯಮಾನುಸಾರ ಕೇಬಲ್‌ಗಳನ್ನು ಅಳವಡಿಸಿಕೊಳ್ಳಲು ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚನೆ ನೀಡಬೇಕು ಎಂದರು.

ಹೈಟೆನ್ಶನ್ ವಿದ್ಯುತ್ ತಂತಿ ಕೆಳಗೆ ಅನಧಿಕೃತ ಕಟ್ಟಡಗಳ ತೆರವಿಗೆ ಆಯುಕ್ತರ ಸೂಚನೆ

author img

By

Published : Feb 18, 2021, 5:53 AM IST

ಬೆಂಗಳೂರು: ಹೈಟೆನ್ಶನ್ ವಿದ್ಯುತ್ ತಂತಿ, ಅಡಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾದ ಕಟ್ಟಡಗಳನ್ನು ತೆರವುಗೊಳಿಸಬೇಕು. ಟಿವಿ ಕೇಬಲ್, ಇಂಟರ್ನೆಟ್ ಕೇಬಲ್​ಗಳನ್ನು ಅನಧಿಕೃತವಾಗಿ ಮರಗಳ ಮೇಲೆ, ಪಾದಾಚಾರಿ ರಸ್ತೆಗಳ ಮೇಲೆ ಹಾಕಿದ್ದರೆ ತೆರವುಗೊಳಿಸಬೇಕೆಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದರು.

ಹೈ ಟೆನ್ಷನ್ ಲೈನ್ ಕೆಳಗೆ ಅನಧಿಕೃತವಾಗಿ ಕಟ್ಟಡ, ಶೆಡ್‌ಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಈ ಸಂಬಂಧ ಅನಧಿಕೃತವಾಗಿ ಕಟ್ಟಡ ನಿರ್ಮಿಸಿಕೊಂಡಿರುವವರಿಗೆ ಬೆಸ್ಕಾಂನಿಂದ ನೋಟಿಸ್ ನೀಡಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, 15 ದಿನಗಳ ಒಳಗಾಗಿ ಸ್ವತಃ ತೆರವಾಗಲು ಸೂಚನೆ ನೀಡಬೇಕು. ತೆರವಾಗದಿದ್ದರೆ ಪೊಲೀಸ್ ಭದ್ರತೆಯೊಂದಿಗೆ ಕಟ್ಟಡವನ್ನು ತೆರವುಗೊಳಿಸಿ. ಅದರ ವೆಚ್ಚವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೈಟೆನ್ಶನ್ ವಿದ್ಯುತ್ ತಂತಿ ಕೆಳಗೆ ಅನಧಿಕೃತ ಕಟ್ಟಡಗಳ ತೆರವಿಗೆ ಆಯುಕ್ತರ ಸೂಚನೆ
ಹೈಟೆನ್ಶನ್ ವಿದ್ಯುತ್ ತಂತಿ ಕೆಳಗೆ ಅನಧಿಕೃತ ಕಟ್ಟಡಗಳ ತೆರವಿಗೆ ಆಯುಕ್ತರ ಸೂಚನೆ

ಅನಧಿಕೃತ ಓಎಫ್ಸಿ ಕೇಬಲ್​ಗಳನ್ನು ಪಾಲಿಕೆಯ ಎಲ್ಲಾ ವಾರ್ಡ್​ಗಳಲ್ಲಿ ಗುರುತಿಸಿ, ಒಂದು ದಿನವನ್ನು ನಿಗದಿಪಡಿಸಿ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಲು ಸೂಕ್ತ ಕ್ರಮವಹಿಸಬೇಕು. ಅನುಮತಿ ಪಡೆದಿದ್ದರೆ ಅನುಮತಿ ಪಡೆದಿರುವ ಪತ್ರ ಪರಿಶೀಲಿಸಿ ನಿಯಮಾನುಸಾರ ಕೇಬಲ್‌ಗಳನ್ನು ಅಳವಡಿಸಿಕೊಳ್ಳಲು ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚನೆ ನೀಡಬೇಕು ಎಂದರು.

ಈ ವೇಳೆ ಕೆ.ಪಿ.ಟಿ.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಮಂಜುಳಾ, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮುರುಗನ್, ಕಾನೂನುಕೋಶ ವಿಭಾಗದ ಮುಖ್ಯಸ್ಥರಾದ ದೇಶಪಾಂಡೆ ಮತ್ತಿತರರು ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.