ETV Bharat / city

ರಾಜಕೀಯ ಅಂಟುರೋಗ, ನಾವು ಬಿಟ್ಟರೂ, ಅದು ನಮ್ಮನ್ನ ಬಿಡಲ್ಲ.. ಖಾತೆ ಬಗೆಗೆ ಕ್ಯಾತೆ ಇಲ್ವಂತಾರೆ ಸಚಿವ ಎಂಟಿಬಿ - ಆನಂದ್ ಸಿಂಗ್ ರಾಜೀನಾಮೆ ನೀಡುವ ವಿಚಾರ

ನನ್ನ ನಿಲುವು ಇದೇ ಖಾತೆಯಲ್ಲಿದ್ದು, ಇದೇ ಪಕ್ಷದಲ್ಲಿ ಮುಂದುವರಿಯುತ್ತೇನೆ. ಯಾವುದೇ ಅಧಿಕಾರ, ಅಂತಸ್ತಿಗೆ ಆಸೆ ಪಟ್ಟು ನಾನು ಪಕ್ಷಕ್ಕೆ ಬಂದವನಲ್ಲ. ಎಲ್ಲಾ ಅಧಿಕಾರ, ಅಂತಸ್ತು ನನ್ನ ಬಳಿ ಇದೆ. ಎಲ್ಲೇ ಇದ್ದರೂ ಪ್ರಾಮಾಣಿಕವಾಗಿ ಜನ ಸೇವೆ ಮಾಡುವುದಷ್ಟೇ ನನ್ನ ಉದ್ದೇಶ ಎಂದರು. ನಾನು ರಾಜಕೀಯ ಸನ್ಯಾಸತ್ವ ತೆಗೆದುಕೊಂಡಿಲ್ಲ. ರಾಜಕೀಯ ಅನ್ನೋದು ಹರಿಯುವ ನೀರು. ರಾಜಕೀಯ ಅನ್ನೋದು ಅಂಟು ರೋಗ. ನಾವು ಬಿಟ್ಟರೂ ರಾಜಕೀಯ ನಮ್ಮನ್ನು ಬಿಡಲ್ಲ..

mtb-nagaraj
mtb-nagaraj
author img

By

Published : Aug 11, 2021, 2:59 PM IST

ಬೆಂಗಳೂರು : ಖಾತೆ ಬದಲಾವಣೆ ಮಾಡುವಂತೆ ಪಟ್ಟು ಹಿಡಿದಿದ್ದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರು ಸಮಾಧಾನಗೊಂಡಿರುವಂತೆ ಕಂಡು ಬಂದಿದೆ. ವಿಕಾಸಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಂಟಿಬಿ ನಾಗರಾಜ್, ನಾನು ಇದೇ ಖಾತೆಯಲ್ಲೇ ಕೆಲಸ ನಿರ್ವಹಣೆ ಮಾಡಿಕೊಂಡು ಹೋಗುತ್ತೇನೆ ಎಂದರು.

ಖಾತೆ ಬದಲಾವಣೆ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತುಕತೆ ನಡೆಸಿದ್ದು, ಅವರು ವರಿಷ್ಠರ ಜೊತೆಗೆ ಮಾತನಾಡುವ ಭರವಸೆ ಕೊಟ್ಟಿದ್ದಾರೆ. ನನ್ನ ಇಲಾಖೆಯ ಸಭೆ ನಡೆಸಿದ್ದೇನೆ. ಎಲ್ಲ ಮಾಹಿತಿ ಪಡೆದುಕೊಂಡಿದ್ದೇನೆ.

ಖಾತೆ ಬದಲಾವಣೆ ವಿಚಾರವಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ಏನು ಭರವಸೆ ಕೊಟ್ಟಿದ್ದಾರೆ ಎಂಬುವುದು ನಮಗಿಬ್ಬರಿಗೆ ಗೊತ್ತು.‌ ಈ ವಿಚಾರವಾಗಿ ಗಡುವು ಕೊಟ್ಟಿದ್ದು ನಿಜ, ಅವರು ವರಿಷ್ಠರಲ್ಲಿ ಮಾತನಾಡುತ್ತೇನೆ ಎಂದಿದ್ದಾರೆ ಎಂದರು.‌ಸಚಿವ ಸ್ಥಾನಕ್ಕೆ ಅಥವಾ ಖಾತೆ ಬದಲಾವಣೆಗಾಗಿ ದೆಹಲಿಗೆ ಹೋಗಿಲ್ಲ, ಹೋಗುವುದು ಇಲ್ಲ.‌

ನಾವು ಬಿಜೆಪಿಗೆ ಬಂದಿದ್ದೇವೆ, ಸಚಿವ ಸ್ಥಾನವೂ ಸಿಕ್ಕಿದೆ. ಸಚಿವ ಆರ್ ಅಶೋಕ್ ಬೆಂಬಲಕ್ಕೆ ಇದ್ದಾರೆ. ಸಿಎಂ ಏನು ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ಒಪ್ಪಿಗೆ ಇದೆ. ಖಾತೆ ಬದಲಾವಣೆ ಆಗದಿದ್ದರೆ ಇದರಲ್ಲಿ ಮುಂದುವರಿಯುತ್ತೇನೆ. ಇದೇ ಪಕ್ಷದಲ್ಲಿ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.

ನನ್ನ ನಿಲುವು ಇದೇ ಖಾತೆಯಲ್ಲಿದ್ದು, ಇದೇ ಪಕ್ಷದಲ್ಲಿ ಮುಂದುವರಿಯುತ್ತೇನೆ. ಯಾವುದೇ ಅಧಿಕಾರ, ಅಂತಸ್ತಿಗೆ ಆಸೆ ಪಟ್ಟು ನಾನು ಪಕ್ಷಕ್ಕೆ ಬಂದವನಲ್ಲ. ಎಲ್ಲಾ ಅಧಿಕಾರ, ಅಂತಸ್ತು ನನ್ನ ಬಳಿ ಇದೆ. ಎಲ್ಲೇ ಇದ್ದರೂ ಪ್ರಾಮಾಣಿಕವಾಗಿ ಜನ ಸೇವೆ ಮಾಡುವುದಷ್ಟೇ ನನ್ನ ಉದ್ದೇಶ ಎಂದರು. ನಾನು ರಾಜಕೀಯ ಸನ್ಯಾಸತ್ವ ತೆಗೆದುಕೊಂಡಿಲ್ಲ. ರಾಜಕೀಯ ಅನ್ನೋದು ಹರಿಯುವ ನೀರು. ರಾಜಕೀಯ ಅನ್ನೋದು ಅಂಟು ರೋಗ. ನಾವು ಬಿಟ್ಟರೂ ರಾಜಕೀಯ ನಮ್ಮನ್ನು ಬಿಡಲ್ಲ ಎಂದು ಹೇಳಿದರು.

ಬಿಜೆಪಿಯಲ್ಲೇ ಮುಂದೆಯೂ ಸ್ಪರ್ಧೆ ಮಾಡ್ತೇನೆ. ನನಗೆ ಬಿಜೆಪಿ ಎಲ್ಲಾ ಕೊಟ್ಟಿದೆ. ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡಿದ್ದಾರೆ. ಮುಖ್ಯಮಂತ್ರಿಗಳು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಲಿ ಎಂದರು. ಇನ್ನು, ಆನಂದ್ ಸಿಂಗ್ ರಾಜೀನಾಮೆ ನೀಡುವ ವಿಚಾರ ಅವರ ವೈಯಕ್ತಿಕ. ಅದರಲ್ಲಿ ನಾನು ಯಾವುದೇ ಸಲಹೆ ಕೊಡೋದಿಲ್ಲ. ನಾನು ಯಾರ ಬೆಂಬಲಕ್ಕೆ ಇಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.