ಬೆಂಗಳೂರು: ಕೋವಿಡ್-19 ಎಫೆಕ್ಟ್ನಿಂದ ಎಲ್ಲ ಕಾರ್ಯಕ್ರಮಗಳಿಗೂ ಬ್ರೇಕ್ ಹಾಕಲಾಗಿದೆ. ಆದರೆ, ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ನಡೆಸಲು ಈಗಾಗಲೇ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹಲವು ಷರತ್ತುಗಳನ್ನು ವಿಧಿಸಿ ಕರಗ ನಡೆಸಲು ಅನುಮತಿ ನೀಡಿದ್ದು, ಪೊಲೀಸರು ಯಾರಿಗೆ ಪಾಸ್ಗಳನ್ನ ನೀಡುತ್ತಾರೋ ಅವರಷ್ಟೇ ಭಾಗಿಯಾಗಬೇಕು ಅಂತ ಸೂಚಿಸಲಾಗಿದೆ.
ಚೈತ್ರ ಹುಣ್ಣುಮೆಯ ದಿನದಂದು ಅಂದರೆ ಏಪ್ರಿಲ್ 8 ರಂದು ಸರ್ಕಾರದ ಆದೇಶದಂತೆ ಗುರುತಿಸಿರುವ ಕೆಲವೇ ಜನರ ಮೂಲಕ ದೇವಸ್ಥಾನದ ಆವರಣದಲ್ಲೇ ಕರಗ ಧಾರ್ಮಿಕ ವಿಧಿ - ವಿಧಾನ ನಡೆಸಲು ತೀರ್ಮಾನಿಸಲಾಗಿದೆ. ದೇವಸ್ಥಾನಕ್ಕೆ, ವಹ್ನಿಕುಲ ಕ್ಷತ್ರಿಯ ಸಮುದಾಯದವ್ರು ಸೇರಿದಂತೆ ಸಾರ್ವಜನಿಕರಿಗೂ ಪ್ರವೇಶವಿರುವುದಿಲ್ಲ. ಹೀಗಾಗಿ ಮನೆಯಲ್ಲೇ ಧಾರ್ಮಿಕ ಆಚರಣೆಯನ್ನು ಸಂಪ್ರದಾಯಿಕವಾಗಿ ಆಚರಿಸಕೊಳ್ಳಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.
ಇನ್ನು ಕರಗದ ಮುಖ್ಯ ಆಚರಣೆಯನ್ನ ದೂರದರ್ಶನ ಚಂದನ ವಾಹಿನಿ ಮೂಲಕ ನೇರ ಪ್ರಸಾರದಲ್ಲಿ ಬಿತ್ತರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ.