ETV Bharat / city

ಆಸ್ತಿ ಹಂಚಿಕೆ ವಿವಾದ; ಅಣ್ಣ,ತಂಗಿಗೆ ಹೈಕೋರ್ಟ್‌ನ ಬುದ್ಧಿ ಮಾತುಗಳಿವು...

author img

By

Published : Nov 18, 2021, 2:07 AM IST

ತಂದೆ-ತಾಯಿಯ ಆಸ್ತಿಯನ್ನು ಹಂಚಿಕೊಳ್ಳುವ ವಿಚಾರದಲ್ಲಿ ಅಣ್ಣ-ತಂಗಿಗೆ ಹೈಕೋರ್ಟ್‌ ಬುದ್ದಿಮಾತುಗಳನ್ನು ಹೇಳಿದ್ದು, ಆಸ್ತಿಗಾಗಿ ಇಳಿವಯಸ್ಸಿನಲ್ಲಿರುವ ತಂದೆ–ತಾಯಿಗಳ ಮನಸ್ಸನ್ನು ನೋಯಿಸುವುದು ಸರಿಯೇ ಎಂದು ಪ್ರಶ್ನಿಸಿದೆ.

High Court Hearing Property dispute cases in Bangalore
ಆಸ್ತಿ ಹಂಚಿಕೆ ವಿವಾದ; ಅಣ್ಣ,ತಂಗಿಗೆ ಬುದ್ದಿ ಹೇಳಿದ ಹೈಕೋರ್ಟ್

ಬೆಂಗಳೂರು: ಅಪ್ಪನ ಆಸ್ತಿ ಹಂಚಿಕೆ ಮಾಡಿಕೊಳ್ಳುವ ವಿಚಾರವಾಗಿ ಕೋರ್ಟ್‌ ಮೆಟ್ಟಿಲೇರಿದ್ದ ಅಣ್ಣ-ತಂಗಿಗೆ ಹೈಕೋರ್ಟ್‌ ಬುದ್ಧಿ ಮಾತು ಹೇಳಿದೆ. ಅಲೆಕ್ಸಾಂಡರನ ಸಾಮ್ರಾಜ್ಯವೇ ಉಳಿಯಲಿಲ್ಲ ಎಂದಾಗ ಸಾವಿನ ಹಾದಿಯಲ್ಲಿ ಸದಾ ದಾಪುಗಾಲಿಕ್ಕುವ ನಾವುಗಳು ಅದರಲ್ಲೂ, ಒಡಹುಟ್ಟಿದ ಅಣ್ಣ–ತಂಗಿಯರು ಆಸ್ತಿಗಾಗಿ ಇಳಿವಯಸ್ಸಿನಲ್ಲಿರುವ ತಂದೆ–ತಾಯಿಗಳ ಮನಸ್ಸನ್ನು ನೋಯಿಸುವುದು ಸರಿಯೇ ಎಂದು ಕೋರ್ಟ್‌ ಪ್ರಶ್ನಿಸಿದೆ.

ತಂದೆಯ ಆಸ್ತಿ ಹಂಚಿಕೆ ಪ್ರಕರಣದಲ್ಲಿ ಕೋರ್ಟ್‌ಗೆ ಖುದ್ದು ಹಾಜರಾಗಿದ್ದ ಅಣ್ಣ–ತಂಗಿ ಹಾಗೂ ವೃದ್ಧ ತಂದೆ–ತಾಯಿಗಳ ಅಹವಾಲನ್ನು ತಾಳ್ಮೆಯಿಂದ ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ, ಕೋರ್ಟ್‌ನಿಂದ ಹೊರಗೆ ಹೋಗುವಾಗ ಯಾವುದಾದರೂ ಮರದ ಟೊಂಗೆ ನಮ್ಮ ಮೇಲೆ ಬಿದ್ದರೆ ಕಥೆ ಮುಗಿಯಿತು. ಹೊರಗೆ ಬಂದವರು ಸುರಕ್ಷಿತವಾಗಿ ಮರಳಿ ಮನೆ ಸೇರುತ್ತೇವೆ ಎಂಬುದೇ ಖಾತ್ರಿ ಇಲ್ಲದಿರುವಾಗ ಆಸ್ತಿ ಹಂಚಿಕೆಗಾಗಿ ಹೆತ್ತ ತಂದೆ–ತಾಯಿಯನ್ನು ಅದೂ ಅವರ ಜೀವನದ ಸಂಧ್ಯಾಕಾಲದಲ್ಲಿ ಯಾಕೆ ನೋಯಿಸುತ್ತೀರಿ’ ಎಂದು ಪ್ರಶ್ನಿಸಿತು.

ಬೆಂಗಳೂರಿನ ಶ್ರೀಮಂತ ಕುಟುಂಬವೊಂದರ ಆಸ್ತಿ ಹಂಚಿಕೆ ವಿವಾದವನ್ನು ನಿನ್ನೆ ವಿಚಾರಣೆ ನಡೆಸಿದ ಪೀಠ, ಮಗ ಎಷ್ಟೇ ಆಗಲಿ ಮಗ. ಅವನ ಉದ್ಧಟತನ, ಒರಟುತನಗಳನ್ನು ನಾವು ಕ್ಷಮಿಸಬೇಕು. ಮಗನೂ ತನ್ನ ತಂದೆ-ತಾಯಿಯ ಯೋಗ ಕ್ಷೇಮವನ್ನು ಹೊರಬೇಕು. ಮಗಳ ಮನೆಯಲ್ಲಿ ಅಳಿಯನೊಟ್ಟಿಗೆ ಇರಬೇಕು ಎಂದರೆ ಹೆತ್ತ ತಂದೆ–ತಾಯಿಗೆ ಎಷ್ಟೊಂದು ಮುಜುಗುರವಾಗಬೇಡ ಎಂದು ಅರ್ಜಿದಾರರನ್ನು ಪ್ರಶ್ನಿಸಿತು.

'ತಂಗಿಯ ಸ್ಮಾರ್ಟ್‌ನೆಸ್‌ನಿಂದ ಕುಟುಂಬ ಹಾಳಾಗಿದೆ':

ಇದಕ್ಕೆ ಉತ್ತರಿಸಿದ ಅರ್ಜಿದಾರ ಪುತ್ರ, ತಂಗಿಯ ಕಡೆ ಕೈತೋರಿಸುತ್ತಾ ಸ್ವಾಮಿ, ಈಕೆ ತನ್ನ ಸ್ಮಾರ್ಟ್‌ನೆಸ್‌ನಿಂದ ನಮ್ಮ ಕುಟುಂಬವನ್ನೇ ಹಾಳುಗೆಡವಿದ್ದಾಳೆ. ತಂದೆ–ತಾಯಿಯನ್ನು ಆಕೆ ಮನೆಯಲ್ಲಿ ಇಟ್ಟುಕೊಂಡು ಸಾಕುತ್ತಿದ್ದರೂ ಬರುವ ಮೂರೂವರೆ ಲಕ್ಷ ಬಾಡಿಗೆಯಲ್ಲಿ ಬಹುಪಾಲು ಹಣವನ್ನು ಪೊಲೀಸರಿಗೇ ಸುರಿದು ನನಗೆ ಹಿಂಸೆ ಕೊಡುತ್ತಿದ್ದಾಳೆ. ಸಿವಿಲ್‌ ವ್ಯಾಜ್ಯಗಳಲ್ಲಿ ನನ್ನ ಸ್ವಯಾರ್ಜಿತ ಸ್ಥಿರಾಸ್ತಿಯನ್ನೂ ಪಾಲು ಮಾಡಿಕೊಡುವಂತೆ ಕೇಳುತ್ತಿದ್ದಾಳೆ. ಇದ್ಯಾವ ನ್ಯಾಯ ಸ್ವಾಮಿ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ತಂಗಿ, ಸ್ವಾಮಿ ನನಗೇನೂ ಅವನ ಆಸ್ತಿಯ ಮೇಲೆ ಆಸೆಯಿಲ್ಲ. ನನ್ನ ಮಗ ಅಮೆರಿಕಾದಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದಾನೆ. ನಾನೂ ಸ್ಥಿತಿವಂತಳಿದ್ದೇನೆ. ಆದರೆ ಕೊನೆಗಾಲದಲ್ಲಿ ತಂದೆ–ತಾಯಿಯನ್ನು ನೋಡಿಕೊಳ್ಳುವುದಕ್ಕೆ ಆಸ್ತಿ ಪಾಲು ಮಾಡಿಕೊಡದೆ ಹೋದರೆ ಮುಂದೇನು ಗತಿ ಎಂಬ ಮುಂದಾಲೋಚನೆಯಿಂದ ಈ ರೀತಿ ದಾವೆ ಹೂಡಿದ್ದೇನೆ. ಬೇಕಾದರೆ ವಾಪಸು ತೆಗೆದುಕೊಳ್ಳುತ್ತೇನೆ ಎಂದರು.

ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿದ ಪೀಠ, ಪ್ರಕರಣ ಕುಟುಂಬದ ವ್ಯಾಜ್ಯವಾಗಿರುವ ಕಾರಣ ವಿಚಾರಣೆಯನ್ನು ತೆರೆದ ನ್ಯಾಯಾಲಯದಲ್ಲಿ ನಡೆಸುವುದು ಬೇಡ. ಇನ್‌ ಕ್ಯಾಮೆರಾ ವಿಚಾರಣೆ ನಡೆಯಲಿ ಎಂದ ಆದೇಶಿಸಿ, ವಿಚಾರಣೆಯನ್ನು ನ. 29ಕ್ಕೆ ಮುಂದೂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.