ETV Bharat / city

ವಿಶ್ವ ರಕ್ತದಾನಿಗಳ ದಿನ: ರಕ್ತದಾನ ಮಾಡಿ ಜೀವ ಉಳಿಸಿ ಎಂದ ಸಚಿವ ಸುಧಾಕರ್ - ಆರೋಗ್ಯ ಸಚಿವ ಸುಧಾಕರ್

ಸಾಂಕ್ರಾಮಿಕ ರೋಗ ಹರಡುತ್ತಿರುವ ಇಂತಹ ಸಂದರ್ಭಗಳಲ್ಲಿ ರಕ್ತದಾನ ಮಾಡುವುದು ಅತ್ಯಂತ ಮುಖ್ಯ. ರೋಗ ಹರಡುವ ಭೀತಿಗೆ ಜನರು ರಕ್ತದಾನ ಮಾಡಲು ಮುಂದೆ ಬರ್ತಿಲ್ಲ. ಆಸ್ಪತ್ರೆಗಳಿಗೆ, ಬ್ಲಡ್ ಬ್ಯಾಂಕ್​ಗಳಿಗೆ ಹೋಗಲು ಭಯ ಪಡುತ್ತಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಿ, ಜೀವ ಉಳಿಸುವ ಕೆಲಸ ಮಾಡಿ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

Bangalore
ರಕ್ತದಾನ ಮಾಡಿ ಜೀವ ಉಳಿಸಿ ಎಂದ ಸಚಿವ ಸುಧಾಕರ್
author img

By

Published : Jun 14, 2021, 12:07 PM IST

ಬೆಂಗಳೂರು: ರಕ್ತದಾನ ಶ್ರೇಷ್ಠ ದಾನ ಅಂತ ಹೇಳ್ತಾರೆ. ಆದರೆ, ಕೊರೊನಾ ಮೊದಲ ಅಲೆ ಹಾಗೂ ಎರಡನೇ ಅಲೆಯಲ್ಲಿ ರಕ್ತದಾನಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಕೋವಿಡ್ ಲಸಿಕೆ ಪಡೆದಿದ್ದರೆ ಕನಿಷ್ಠ 28 ದಿನಗಳವರೆಗೆ ರಕ್ತದಾನ ಮಾಡುವಂತಿಲ್ಲ. 28 ದಿನಗಳು ಕಳೆದ ನಂತರ ದಯವಿಟ್ಟು ಸ್ಥಳೀಯ ಬ್ಲಡ್ ಬ್ಯಾಂಕ್, ಶಿಬಿರಗಳಿಗೆ ಹೋಗಿ ರಕ್ತದಾನ ಮಾಡಿ ಅಂತ ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.

ವಿಶ್ವರಕ್ತದಾನಿಗಳ ದಿನದ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸುಧಾಕರ್, ಆಕಾಶದೆತ್ತರಕ್ಕೆ ಕಟ್ಟಡ ನಿರ್ಮಾಣ ಮಾಡಬಲ್ಲ, ಮೋಡಕ್ಕಿಂತ ಮೇಲೆ ಹಾರಬಲ್ಲ, ಚಂದ್ರನ ಮೇಲೂ ಇಳಿಯೋ ಸಾಮರ್ಥ್ಯ ಮನುಷ್ಯನಿಗೆ ಇದೆ. ಆದರೆ ಇಂದಿಗೂ ಯಾರಿಗೂ ಕೂಡ ರಕ್ತ ಉತ್ಪಾದನೆ ಮಾಡಲು ಆಗಿಲ್ಲ, ಬದಲಿಗೆ ಮನುಷ್ಯನ ರಕ್ತವನ್ನ ಅವಲಂಬಿಸಬೇಕಿದೆ. ರಕ್ತ ಎಂಬುದು ನೀವೂ ಕೊಡಬಹುದಾದ ಅತ್ಯುತ್ತಮ ಉಡುಗೊರೆ. ರಕ್ತದಾನ ಮಾಡುವುದು ಸರಳ ಕೆಲಸವಾಗಿದ್ದು, ಯಾವುದೇ ಅಡ್ಡಪರಿಣಾಮ ಇರೋದಿಲ್ಲ. ತೆಗೆದ ರಕ್ತ ಮತ್ತೆ ದೇಹದಲ್ಲಿ ಉತ್ಪಾದನೆ ಆಗಲು 4 ರಿಂದ 8 ವಾರಗಳು ಸಾಕಾಗುತ್ತೆ. ದೈನಂದಿನ ಜೀವನ ನಡೆಸಬಹುದು ಎಂದರು.

ಸಾಂಕ್ರಾಮಿಕ ರೋಗ ಹರಡುತ್ತಿರುವ ಇಂತಹ ಸಂದರ್ಭಗಳಲ್ಲಿ ರಕ್ತದಾನ ಮಾಡುವುದು ಅತ್ಯಂತ ಮುಖ್ಯ. ರೋಗ ಹರಡುವ ಭೀತಿಗೆ ಜನರು ರಕ್ತದಾನ ಮಾಡಲು ಮುಂದೆ ಬರ್ತಿಲ್ಲ. ಆಸ್ಪತ್ರೆಗಳಿಗೆ, ಬ್ಲಡ್ ಬ್ಯಾಂಕ್​ಗಳಿಗೆ ಹೋಗಲು ಭಯ ಪಡುತ್ತಿದ್ದಾರೆ. ನಿಮ್ಮ ರಕ್ತ ಅಪರೂಪದ ಗುಂಪಾಗಿದ್ದರೆ, ಯಾರದ್ದೋ ಜೀವ ಉಳಿಸುವ ಸಾಧನವಾಗಬಹುದು. ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಿ, ಎಷ್ಟೋ ಜೀವ ಉಳಿಸುವ ಕೆಲಸ ಮಾಡಿ ಎಂದರು..‌

ಇದನ್ನೂ ಓದಿ: ಕೌನ್‌ ಬನೇಗಾ ಸಿಎಂ? ಎಲೆಕ್ಷನ್‌ಗೆ 2 ವರ್ಷವಿರುವಾಗ್ಲೇ ಕುರ್ಚಿಗಾಗಿ ಕೈ ಪಕ್ಷದೊಳಗೆ ತೆರೆಮರೆಯ ಪೈಪೋಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.