ಬೆಂಗಳೂರು: ವೇತನ ಪರಿಷ್ಕರಣೆಗೆ ಆಗ್ರಹಿಸಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ಉದ್ಯೋಗಿಗಳು ಕೆಲ ಕಾಲ ಪ್ರತಿಭಟನೆ ನಡೆಸಿದರು.
3,500 ಉದ್ಯೋಗಿಗಳನ್ನು ಹೊಂದಿರುವ ನಾಶಿಕ್ನ ಓಝಾರ್ ಘಟಕ ಹಾಗೂ 9,000 ಉದ್ಯೋಗಿಗಳನ್ನು ಹೊಂದಿರುವ ಬೆಂಗಳೂರಿನ ಘಟಕದ ಉದ್ಯೋಗಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಮಗೆ ಸಮರ್ಪಕವಾದ ಹಾಗೂ ಶೀಘ್ರವೇ ವೇತನ ಪರಿಷ್ಕರಣೆಯಾಗಬೇಕು. ಕಾರ್ಮಿಕರ ಒಟ್ಟು ವೇತನದಲ್ಲಿ ಶೇ. 8ಕ್ಕಿಂತ ಹೆಚ್ಚು ಹೈಕ್ ನೀಡಲು ಆಡಳಿತ ಮಂಡಳಿ ಒಪ್ಪುತ್ತಿಲ್ಲ. ಎಲ್ಲಾರಿಗೂ ಸರಿಯಾದ ರೀತಿಯಲ್ಲಿ 35% ಹೈಕ್ ಮಾಡಬೇಕು ಎಂದು ಕಾರ್ಮಿಕರು ಆಗ್ರಹಿಸಿದರು.
ಪ್ರತಿಭಟನೆ ಮಾಡುವಾಗ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.