ETV Bharat / city

ನಿಮಗೋಸ್ಕರ ದುಡಿದ ಕಾರ್ಯಕರ್ತರಿಗೆ ಶಿಕಾರಿಪುರದಲ್ಲಿ ಅವಕಾಶ ಕೊಡಿ: ಬಿಎಸ್​ವೈಗೆ ಹಳ್ಳಿಹಕ್ಕಿ ಸಲಹೆ - ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಸಲಹೆ

ಯಡಿಯೂರಪ್ಪ ಬಹಳ ಹಿರಿಯರು, ನನಗೂ ಆತ್ಮೀಯರು- ಸಾಮಾನ್ಯ ಕಾರ್ಯಕರ್ತರಿಗೆ ಕ್ಷೇತ್ರ ಬಿಟ್ಟುಕೊಡುವುದು ಒಳ್ಳೆಯದು- ಬಿಎಸ್​ವೈಗೆ ಹೆಚ್​ ವಿಶ್ವನಾಥ್ ಸಲಹೆ

vishwanath
ವಿಶ್ವನಾಥ್
author img

By

Published : Jul 23, 2022, 1:02 PM IST

Updated : Jul 23, 2022, 2:25 PM IST

ಬೆಂಗಳೂರು: ನಿಮಗೋಸ್ಕರ ದುಡಿದ ಕಾರ್ಯಕರ್ತರು ಇದ್ದಾರೆ. ಅವರಿಗೆ ಅವಕಾಶ ಮಾಡಿಕೋಡಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಸಲಹೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ವಿಚಾರವಾಗಿ ಮಾತನಾಡಿದ ಅವರು, ಚುನಾವಣಾ ರಾಜಕೀಯಕ್ಕೆ ಯಡಿಯೂರಪ್ಪ ನಿವೃತ್ತಿ ಘೋಷಿಸಿದ್ದಾರೆ. ಆದ್ರೆ, ಅವರ ಅನುಭವ ರಾಜ್ಯಕ್ಕೆ ಅವಶ್ಯಕತೆ ಇದೆ. ಮೋದಿ ವಂಶಪಾರಂಪರ್ಯ ರಾಜಕೀಯ ಬೇಡ ಅಂತಾ ಹೇಳಿದ್ದಾರೆ. ಪ್ರಧಾನಿಯವರ ಮಾತನ್ನು ಯಾಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್

ವಂಶಪಾರಂಪರ್ಯ ಆಡಳಿತ ಬೇಡ, ಇದು ಜನತಂತ್ರ ಆಡಳಿತಕ್ಕೆ ಮಾರಕ. ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಎಸ್​ವೈ ಪುತ್ರ ಬಿ.ವೈ. ರಾಘವೇಂದ್ರ ಈಗಾಗಲೇ ರಾಜಕೀಯದಲ್ಲಿ ಇದ್ದಾರೆ. ಶಿಕಾರಿಪುರದಲ್ಲಿ ಬೇರೆಯವರಿಗೆ ಅವಕಾಶ ಕೊಡಲಿ. ಸಾಮಾನ್ಯ ಕಾರ್ಯಕರ್ತರಿಗೆ ಕ್ಷೇತ್ರ ಬಿಟ್ಟುಕೊಡಲಿ ಎಂದು ಹೆಚ್​ ವಿಶ್ವನಾಥ್​ ಮನವಿ ಮಾಡಿದರು.

ಇದನ್ನೂ ಓದಿ: ಬಿಎಸ್‌ವೈ ನಿರಂತರ ಹೋರಾಟಗಾರರು, ಅವರು ನಿವೃತ್ತಿಯಾಗಲ್ಲ: ಸಿಎಂ ಬೊಮ್ಮಾಯಿ‌

Last Updated : Jul 23, 2022, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.