ETV Bharat / city

ಗೋಪಾಲಯ್ಯ ಜೆಡಿಎಸ್ ಕಾರ್ಯಕರ್ತರಿಗೆ ಧಮ್ಕಿ ಹಾಕ್ತಿದ್ದಾರೆ: ಹೆಚ್​ಡಿಕೆ ಆರೋಪ

author img

By

Published : Nov 22, 2019, 5:29 PM IST

ಜೆಡಿಎಸ್ ಪಕ್ಷ ತೊರೆದು, ಇದೀಗ ಬಿಜೆಪಿಯಿಂದ ಉಪ ಚುನಾವಣೆಗೆ ಸ್ಪರ್ಧಿಸುತ್ತಿರುವ ಕೆ. ಗೋಪಾಲಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಕ್​ ಪ್ರಹಾರ ನಡೆಸಿದ್ದಾರೆ.

ಹೆಚ್​ಡಿಕೆ

ಬೆಂಗಳೂರು: ಅನರ್ಹ ಶಾಸಕ ಗೋಪಾಲಯ್ಯ ಪೊಲೀಸರನ್ನೂ ಕೂಡಾ ರೌಡಿಸಂಗೆ ಬಳಸಿಕೊಂಡು, ಕಾರ್ಯಕರ್ತರ ಮನೆಗೆ ಹೋಗಿ ಧಮ್ಕಿ ಹಾಕುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕಾಮಾಕ್ಷಿಪಾಳ್ಯದಲ್ಲಿರುವ ಬಿಜೆಪಿ ಮುಖಂಡ ರಾಜಣ್ಣ ನಿವಾಸದಲ್ಲಿ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷಕ್ಕೆ ಹಾಗೂ ಗಿರೀಶ್ ಕೆ.ನಾಶಿಯವರನ್ನು ಗೆಲ್ಲಿಸಿ ಕೊಡಲು ರಾಜಣ್ಣ ಪಕ್ಷ ಸೇರಿದ್ದಾರೆ ಎಂದರು.

ಕೆ. ಗೋಪಾಲಯ್ಯ ವಿರುದ್ಧ ಮಾಜಿ ಸಿಎಂ ಹೆಚ್​ಡಿಕೆ ಆರೋಪ

ಬಳಿಕ ಗೋಪಾಲಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಗೋಪಾಲಯ್ಯ, ಪೊಲೀಸರನ್ನೂ ಕೂಡಾ ರೌಡಿಸಂಗೆ ಬಳಸಿಕೊಂಡು, ಕಾರ್ಯಕರ್ತರ ಮನೆಗೆ ಹೋಗಿ ಧಮ್ಕಿ ಹಾಕುತ್ತಿದ್ದಾರೆ. ಕಾರ್ಯಕರ್ತರು ಭಯಪಡಬೇಕಾಗಿಲ್ಲ, ಮಧ್ಯರಾತ್ರಿ ಕರೆದ್ರೂ ನಾನು ಬರಲು ಸಿದ್ಧ ಎಂದರು. ಇನ್ನು ಒಟ್ಟು ಇಲ್ಲಿಯವರೆಗೆ 1300 ಕೋಟಿ ರೂ. ಅನುದಾನವನ್ನು ಮಹಾಲಕ್ಷ್ಮಿ ಕ್ಷೇತ್ರಕ್ಕೆ ಕೊಡಲಾಗಿದೆ. ಗೋಪಾಲಯ್ಯ ಯಾವ್ಯಾವ ಗುತ್ತಿಗೆದಾರರನ್ನು ಹೆದರಿಸಿ, ಬಕಾಸುರನ ಹಾಗೆ ದುಡ್ಡು ತಿಂದಿದಾರೆ ಅನ್ನೋದು ಗೊತ್ತಿದೆ. ನಾನೂ 500 ಕೋಟಿ ರೂ. ಅನುದಾನ ಕೊಟ್ಟಿದ್ದೆ ಎಂದು ಹೆಚ್​ಡಿಕೆ ಆರೋಪಿಸಿದರು.

ಅಲ್ಲದೆ ಪಕ್ಷ ತೊರೆದಿರುವ ಕಾರ್ಪೋರೇಟರ್​ಗಳ ವಿರುದ್ಧವೂ ಕಿಡಿಕಾರಿ, ಮಹದೇವ್ ಹೆಬ್ಬೆಟ್ಟು, ಪಾಪ ಅವರಿಗೆ ತೆರಿಗೆ ಮತ್ತು ಸ್ಥಾಯಿ ಸಮಿತಿ ಕೊಟ್ಟೆವು. ಹೇಮಲತಾ ಅವ್ರಿಗೂ ಉಪಮೇಯರ್ ಸ್ಥಾನ ಕೊಟ್ಟೆವು. ಜೆಡಿಎಸ್ ಏನು ಕಡಿಮೆ ಮಾಡಿದೆ ಅವರಿಗೆ ಎಂದು ಪ್ರಶ್ನಿಸಿದರು.

ಸದಾನಂದ ಗೌಡರ ಟೀಕೆಗೂ ಪ್ರತಿಕ್ರಿಯಿಸಿ, ಸದಾನಂದ ಗೌಡರು ನರೇಂದ್ರ ಮೋದಿ ಹೆಸರಲ್ಲಿ ರಾಜಕೀಯ ಮಾಡ್ತಿದಾರೆ. ಸದಾನಂದ ಗೌಡರದ್ದು ನಕಲಿ ಶಾಮನ ಮಾತುಗಳು. ನಾವು ಒಂದೊಂದು ಓಟಿಗೂ, ಬೆವರು ಸುರಿಸಿ ಪಕ್ಷ ಕಟ್ಟಿದ್ದೇವೆ ಎಂದರು. ಚುನಾವಣಾ ಫಲಿತಾಂಶದಲ್ಲಿ ಗೊತ್ತಾಗಲಿದೆ. ಹದಿನೈದೂ ಕ್ಷೇತ್ರದಲ್ಲಿ ಅನರ್ಹರು ಸೋಲಬೇಕು. ಮಹಾರಾಷ್ಟ್ರ, ಗುಜಾರಾತ್​ನಲ್ಲಿ ಪಕ್ಷಾಂತರಿಗಳು ನೆಲಕಚ್ಚಿದಾರೆ. ರಾಜ್ಯದಲ್ಲೂ ಅದೇ ಆಗಲಿದೆ. ಕಾಂಗ್ರೆಸ್-ಬಿಜೆಪಿಗಿಂತ ಸಂಖ್ಯೆಯಲ್ಲಿ ಜೆಡಿಎಸ್ ಹೆಚ್ಚಿರುತ್ತದೆ. ಈ ಬಾರಿ ಅಚ್ಚರಿ ಫಲಿತಾಂಶ ಜನ ನೀಡ್ತಾರೆ ಎಂದರು.

Intro:ಜೆಡಿಎಸ್ ಕಾರ್ಯಕರ್ತರಿಗೆ ಧಮ್ಕಿ ಹಾಕಿ ಕರ್ಕೊಂಡುಹೋಗ್ತಿದಾರೆ- ಗೋಪಾಲಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ಧಾಳಿ

ಬೆಂಗಳೂರು: ಜೆಡಿಎಸ್ ಪಕ್ಷ ತೊರೆದು, ಇದೀಗ ಬಿಜೆಪಿ ಪಕ್ಷದಿಂದ ಉಪಚುನಾವಣೆಗೆ ಸ್ಪರ್ಧಿಸುತ್ತಿರುವ ಕೆ.ಗೋಪಾಲಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಮಾತಿನ ಪ್ರಹಾರ ನಡೆಸಿದರು.
ಕಾಮಾಕ್ಷಿಪಾಳ್ಯದಲ್ಲಿರುವ ಬಿಜೆಪಿಯ ಮುಖಂಡ ರಾಜಣ್ಣ ನಿವಾಸದಲ್ಲಿ, ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಅಲ್ಲದೆ ಜೆಡಿಎಸ್ ಪಕ್ಷಕ್ಕೆ, ಗಿರೀಶ್ ಕೆ.ನಾಶಿಯವರನ್ನು ಗೆಲ್ಲಿಸಿಕೊಡಲು ಬೆಂಬಲ ನೀಡುವ ಸಲುವಾಗಿ, ರಾಜಣ್ಣ ಪಕ್ಷ ಸೇರಿದ್ದಾರೆ ಎಂದ್ರು.
ಬಳಿಕ ಕೆ.ಗೋಪಾಲಯ್ಯ ವಿರುದ್ಧ ಮಾತಿನ ಪ್ರಹಾರ ಆರಂಭಿಸಿದ ಕುಮಾರಸ್ವಾಮಿ, ಪೊಲೀಸರನ್ನೂ ಕೂಡಾ ರೌಡಿಸಂ ಗೆ ಬಳಸಿಕೊಂಡು, ಕಾರ್ಯಕರ್ತರ ಮನೆಗೆ ಹೋಗಿ ಧಮ್ಕಿ ಹಾಕುತ್ತಿದ್ದಾರೆ. ಕಾರ್ಯಕರ್ತರು ಭಯಪಡಬೇಕಾಗಿಲ್ಲ, ಮಧ್ಯರಾತ್ರಿ ಕರೆದ್ರೂ ಬರಲು ಸಿದ್ಧ ಎಂದರು.
ಇನ್ನುಒಟ್ಟು ಇಲ್ಲಿಯವರೆಗೆ 1300 ಕೋಟಿ ರೂ ಅನುದಾನ ಮಹಾಲಕ್ಷ್ಮಿ ಕ್ಷೇತ್ರಕ್ಕೆ ಕೊಡಲಾಗಿದೆ. ಯಾವ್ಯಾವ ಗುತ್ತಿಗೆದಾರರನ್ನು ಹೆದರಿಸಿ, ಬಕಾಸುರನ ಹಾಗೆ ದುಡ್ಡು ತಿಂದಿದಾರೆ ಅನ್ನೋದು ಗೊತ್ತಿದೆ. ನಾನೂ 500 ಕೋಟಿ ರೂ ಅನುದಾನ ಕೊಟ್ಟಿದ್ದೆ ಎಂದರು.
ಅಲ್ಲದೆ ಪಕ್ಷ ತೊರೆದಿರುವ ಕಾರ್ಪೋರೇಟರ್ ಗಳ ವಿರುದ್ಧವೂ, ಕಿಡಿಕಾರಿ, ಮಹಾದೇವ್ ಹೆಬ್ಬೆಟ್ಟು ಪಾಪ. ಅವರಿಗೆ ತೆರಿಗೆ ಮತ್ತು ಸ್ಥಾಯಿ ಸಮಿತಿ ಕೊಟ್ಟೆವು. ಹೆಮಲತಾ ಅವ್ರಿಗೂ ಉಪಮೇಯರ್ ಸ್ಥಾನ ಕೊಟ್ಟೆವು.
ಜೆಡಿಎಸ್ ಏನು ಕಡಿಮೆ ಮಾಡಿದೆ ಅವರಿಗೆ ಎಂದರು.

ಅಲ್ಲದೆ ಕುಟುಂಬದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ನಾನು ಸಂಪೂರ್ಣ ಬೆಂಬಲ ಕೊಟ್ಟಿಲ್ಲ ಅಂತ ಈ ಅಭ್ಯರ್ಥಿ ನನ್ನಿಂದ ದೂರ ಹೋದ್ರು ಎಂದರು.

ಸದಾನಂದಗೌಡರ ಟೀಕೆಗೂ ಪ್ರತಿಕ್ರಿಯಿಸಿ,
ಸದಾನಂದಗೌಡರು ನರೇಂದ್ರ ಮೋದಿ ಹೆಸರಲ್ಲಿ ರಾಜಕೀಯ ಮಾಡ್ತಿದಾರೆ. ಸದಾನಂದಗೌಡರದ್ದು ನಕಲಿ ಶಾಮನ ಮಾತುಗಳು. ನಾವು ಒಂದೊಂದು ಓಟಿಗಾಗಿ ಜೆಡಿಎಸ್ ಪಕ್ಷ ಬೆವರು ಸುರಿಸಿ ಪಕ್ಷ ಕಟ್ಟಿದ್ದೇವೆ.
ಚುನಾವಣಾ ಫಲಿತಾಂಶದಲ್ಲಿ ಗೊತ್ತಾಗಲಿದೆ. ಹದಿನೈದೂ ಕ್ಷೇತ್ರದಲ್ಲಿ ಅನರ್ಹರು ಸೋಲಬೇಕು. ಮಹಾರಾಷ್ಟ್ರ, ಗುಜಾರಾತ್ ನಲ್ಲಿ ಪಕ್ಷಾಂತರಿಗಳು ನೆಲಕಚ್ಚಿದಾರೆ.
ರಾಜ್ಯದಲ್ಲೂ ಅದೇ ಆಗಲಿದೆ. ಕಾಂಗ್ರೆಸ್-ಬಿಜೆಪಿಗಿಂತ ಸಂಖ್ಯೆಯಲ್ಲಿ ಜೆಡಿಎಸ್ ಹೆಚ್ಚಿರುತ್ತದೆ.
ಈ ಬಾರಿ ಅಚ್ಚರಿ ಫಲಿತಾಂಶ ಜನ ನೀಡ್ತಾರೆ ಎಂದರು.

ಇನ್ನು ಆರ್ ಅಶೋಕ್ ಟೀಕೆಗೆ ಪ್ರತಿಕ್ರೊಯಿಸಿ,
ಜೆಡಿಎಸ್ ಪಕ್ಷಕ್ಕೆ ಹೋಟಲು ತಿಂಡಿ ಮೆನು ಅಂತ ಅಶೋಕ್ ಚಕ್ರವರ್ತಿಗಳು ಹೇಳಿದಾರೆ. ಆದ್ರೆ ಮುಳ್ಳನ್ನು ಮುಳ್ಳಿಂದಲೇ ತೆಗೀತೇವೆ. ನನ್ನದೇ ಆದ ಸ್ಟಾಟರ್ಜಿ ಇದೆ.
ಕಂದಾಯ ಮಂತ್ರಿಯಾಗಿ ಜನರ ಕಷ್ಟ ಸುಖ ಕೇಳ್ಳಿಕ್ಕೆ ಒಂದು ದಿನಾನೂ ಹೋಗಿಲ್ಲ ಎಂದರು.

ಸೌಮ್ಯಶ್ರೀ
Kn_bng_06_Kumaraswamy_byte_script_7202707

Body:...Conclusion:..

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.