ETV Bharat / city

ಬೆಂಗಳೂರಿನ ಇಂಥ ಸ್ಥಿತಿಯಲ್ಲಿ ದಾವೋಸ್​ಗೆ ಹೋಗಿ ಸಿಎಂ ಹೇಗೆ ಹೂಡಿಕೆದಾರರನ್ನು ಕರೆಯುತ್ತಾರೆ: ಹೆಚ್​ಡಿಕೆ ಪ್ರಶ್ನೆ

ಬೆಂಗಳೂರಿನ ಅಭಿವೃದ್ಧಿ ಹೆಸರಿನಲ್ಲಿ ಕೇವಲ ಲೂಟಿ ಮಾಡಲಾಗಿದೆ. ಇಲ್ಲಿರುವ ಕಂಪನಿಯವರು ಸರ್ಕಾರಕ್ಕೆ ಬೈಯುತ್ತಿದ್ದಾರೆ. ಈ ನಡುವೆ ಯಾವ ಮುಖ‌ ಇಟ್ಟುಕೊಂಡು ಬಂಡವಾಳ ಹೂಡಿಕೆ ಮಾಡಿ ಎಂದು ವಿದೇಶಿ ಕಂಪನಿಗಳನ್ನು ಸಿಎಂ ಕೇಳುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

H D Kumaraswamy reaction about davos
ಬೆಂಗಳೂರಿನ ಇಂಥ ಸ್ಥಿತಿಯಲ್ಲಿ ದಾವೋಸ್​ಗೆ ಹೋಗಿ ಸಿಎಂ ಹೇಗೆ ಹೂಡಿಕೆದಾರರನ್ನು ಕರೆಯುತ್ತಾರೆ
author img

By

Published : May 22, 2022, 4:46 PM IST

ಬೆಂಗಳೂರು: ಅಭಿವೃದ್ಧಿ ಹೆಸರಲ್ಲಿ‌ ಲೂಟಿ ಆಗಿದೆ. ಎಲ್ಲಾ ಕ್ಷೇತ್ರದಲ್ಲಿ ಲೂಟಿ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಬೆಂಗಳೂರು ಕೊಡುಗೆ ಏನು?. ಇಂತಹ ಸ್ಥಿತಿಯಲ್ಲಿ ದಾವೋಸ್​ಗೆ ಹೋಗಿ ಹೇಗೆ ಹೂಡಿಕೆದಾರರನ್ನು ಕರೆಯುತ್ತಾರೆ. ಬದ್ಧತೆ ಇಂದ ಕೆಲಸ ಮಾಡಿದರೆ ಎಲ್ಲವೂ ಸರಿ ಆಗುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಪಂತರಪಾಳ್ಯ, ನಾಯಂಡಹಳ್ಳಿ ಮೆಟ್ರೋ ಲೇಔಟ್ ಮತ್ತಿತರೆ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ನಗರದ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಪ್ಲ್ಯಾಟ್​ಗಳಲ್ಲಿ ನೀರು ತುಂಬಿ ನಿವಾಸಿಗಳು ಹೋಟೆಲ್​ಗಳಲ್ಲಿ ಉಳಿಯುವ ಪರಿಸ್ಥಿತಿ ಇದೆ. ಶಿವಮೊಗ್ಗ ನಗರದಲ್ಲೇ ಸಿಎಂ ಆಗಿದ್ದ ಜಿಲ್ಲೆಯಲ್ಲೇ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ವಲಯವಾರು ಉಸ್ತುವಾರಿ ಕೊಟ್ಟಿದ್ದಾರೆ. ಆದರೆ ಇವತ್ತು ಅವರು ವಿದೇಶ ಪ್ರವಾಸದಲ್ಲಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಈಗಿನ ಶಾಸಕ ಮೂರು ಬಾರಿ ಎಂಎಲ್​ಎ ಆಗಿದ್ದಾರೆ. ಅಶ್ವತ್ಥ ನಾರಾಯಣ ಕ್ಷೇತ್ರಕ್ಕೆ ಅಭಿವೃದ್ಧಿಗಾಗಿ ಎಷ್ಟು ಅನುದಾನ‌ ಹೋಗಿದೆ? ಎಂದು ಪ್ರಶ್ನಿಸಿದರು.

ಎಲ್ಲವೂ ಕಳಪೆ‌ ಕಾಮಗಾರಿ ಮಾಡಲಾಗುತ್ತಿದೆ. ಈಗಾಗಲೇ‌ ಸಿಎಂ ದಾವೋಸ್ ಪ್ರವಾಸದಲ್ಲಿದ್ದಾರೆ. ಯಾವ ಮುಖ‌ ಇಟ್ಟುಕೊಂಡು ಬಂಡವಾಳ ಹೂಡಿಕೆ ಮಾಡಿ ಎಂದು ವಿದೇಶಿ ಕಂಪನಿಗಳನ್ನು ಕೇಳುತ್ತಾರೆ. ಇಲ್ಲಿ ಉದ್ಯಮಿಗಳು ದಿನ ಬೆಳಗಾದರೆ ಸರ್ಕಾರಕ್ಕೆ ಮಂಗಳಾರತಿ ಮಾಡುತ್ತಿದ್ದಾರೆ. ಕಣ್ಣೊರೆಸುವ ತಂತ್ರವನ್ನು ಇವರು ಅನುಸರಿಸುತ್ತಿದ್ದಾರೆ. ವೋಟ್ ಹಾಕಿದವರಿಗೆ ಒಂದು,‌ ವೋಟ್ ಹಾಕದವರಿಗೆ ಮತ್ತೊಂದು ಎಂದು ಕಿಡಿಕಾರಿದರು.

ಯಾವ ಯಾವ ಕ್ಷೇತ್ರಗಳಿಗೆ ಎಷ್ಟು ಅನುದಾನ ಬಿಡುಗಡೆ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಏಳು ಬಾರಿ ದೆಹಲಿಗೆ ದಂಡೆತ್ತಿ ಹೋಗಿದ್ದಾರೆ. ಆದರೆ ಯಾವುದೂ ಕೆಲಸ ಆಗಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾತ್ರೋರಾತ್ರಿ ಕೋಟ್ಯಾಧೀಶನಾದ ಜಮ್ಮು-ಕಾಶ್ಮೀರದ ಯುವಕ.. ಹೇಗೆ ಗೊತ್ತಾ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.