ETV Bharat / city

ಕೇಂದ್ರ ಬಜೆಟ್ ನಿರೀಕ್ಷೆ: ಸಾರಿಗೆ ವಲಯದ ಬಗ್ಗೆ ಪರಿಣಿತರು ಹೇಳುವುದೇನು? - ಬೆಂಗಳೂರಿನಲ್ಲಿ ಸಂಚಾರ ಸಾರಿಗೆಯ ಸರ್ಕಾರದ ಸಲಹೆಗಾರ ಪ್ರೊ.ಶ್ರೀಹರಿ ಪ್ರತಿಕ್ರಿಯೆ

ಫೆಬ್ರವರಿ 1ರಂದು ಮಂಡನೆಯಾಗುವ ಕೇಂದ್ರದ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದರಲ್ಲಿಯೂ ರಾಜ್ಯಕ್ಕೆ ಮೆಟ್ರೋ, ರೈಲು ಯೋಜನೆ ಕುರಿತು ಕುತೂಹಲ ಹೆಚ್ಚಿದೆ.‌ ಈ ಕುರಿತು ಸಂಚಾರ ಸಾರಿಗೆಯ ಸರ್ಕಾರದ ಸಲಹೆಗಾರ ಪ್ರೋ. ಶ್ರೀಹರಿ ಪ್ರತಿಕ್ರಿಯಿಸಿದ್ದಾರೆ.

Prof. Srihari
ಸಂಚಾರ ಸಾರಿಗೆಯ ಸರ್ಕಾರದ ಸಲಹೆಗಾರ ಪ್ರೊ.ಶ್ರೀಹರಿ
author img

By

Published : Jan 30, 2022, 7:58 AM IST

Updated : Jan 30, 2022, 9:26 AM IST

ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ ಎರಡು ದಿನ ಮಾತ್ರ ಬಾಕಿ ಇದೆ. ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೋವಿಡ್​​ ನಂತರದ 2ನೇ ಬಜೆಟ್ ಮಂಡಿಸಲಿದ್ದಾರೆ‌.

ಸಂಚಾರ ಸಾರಿಗೆಯ ಸರ್ಕಾರದ ಸಲಹೆಗಾರ ಪ್ರೊ.ಶ್ರೀಹರಿ ಪ್ರತಿಕ್ರಿಯೆ

ಈ ಬಾರಿಯ ಬಜೆಟ್​​ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದರಲ್ಲಿಯೂ ರಾಜ್ಯಕ್ಕೆ ಮೆಟ್ರೋ, ರೈಲು ಯೋಜನೆ ಕುರಿತು ಕುತೂಹಲ ಹೆಚ್ಚಿದೆ.‌ ಈ ಕುರಿತು ಸಂಚಾರ ಸಾರಿಗೆಯ ಸರ್ಕಾರದ ಸಲಹೆಗಾರ ಹಾಗೂ ಟ್ರಾನ್ಸ್​​ಪೋರ್ಟ್ ಎಕ್ಸ್​​ಪರ್ಟ್ ಪ್ರೋ. ಶ್ರೀಹರಿ ಪ್ರತಿಕ್ರಿಯಿಸಿದ್ದಾರೆ. ಈ ಪ್ರತಿಕ್ರಿಯೆಯ ಸಾರಾಂಶ ಇಲ್ಲಿದೆ.

ಕೇಂದ್ರ ಸರ್ಕಾರ ಆಯವ್ಯಯ ಮಂಡಿಸಲಿದ್ದು, ಇದರಲ್ಲಿ ಬೆಂಗಳೂರಿಗೆ ಹಾಗೂ ನಗರ ಸಾರಿಗೆಗೆ ಯಾವ ರೀತಿ ಅನುಕೂಲ ಆಗಲಿದೆ ಎಂಬುದನ್ನು ನೋಡಬೇಕಿದೆ. ಸಾರಿಗೆ ಸಮಸ್ಯೆ ಬಗೆಹರಿಸಬೇಕಾದರೆ ಮುಖ್ಯವಾಗಿ ಬೇಕಾಗಿರುವುದು ಮೆಟ್ರೋಗೆ ಆಗುವಂತಹ ಖರ್ಚು ವೆಚ್ಚಗಳು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈಗಾಗಲೇ ಬೆಂಗಳೂರು ಟು ಏರ್​​ಪೋರ್ಟ್, ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್ ಮಾರ್ಗಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇದೆಲ್ಲವೂ ತ್ವರತಗತಿಯಲ್ಲಿ ನಡೆಯಬೇಕಾದರೆ ಇದಕ್ಕೆ ಹೆಚ್ಚುವರಿ ಬಜೆಟ್ ನಿಗದಿ ಮಾಡಬೇಕಿದೆ. ಮೆಟ್ರೋಗೆ ಪೂರಕವಾಗಿ ಉಪನಗರ ರೈಲು ಕೆಲಸ ಮಾಡಲಿದ್ದು, ಇದರಿಂದಲ್ಲೂ ಆರ್ಥಿಕ ಚೇತರಿಕೆ ಸಾಧ್ಯವಾಗುವದರಿಂದ ಹೆಚ್ಚು ಗಮನ ಕೊಡಬೇಕಿದೆ ಎಂದರು.

ರೈಲ್ವೆ ಟಿಕೆಟ್ ದರ ಹೆಚ್ಚಾಗುತ್ತಾ?: ಕಳೆದ 2 ವರ್ಷಗಳಿಂದ ಕೊರೊನಾ ಸೋಂಕಿನಿಂದಾಗಿ ರೈಲ್ವೆ ಇಲಾಖೆ ಸಾಕಷ್ಟು ನಷ್ಟ ಅನುಭವಿಸಿದೆ. ಲಾಕ್​​ಡೌನ್ ಸಂದರ್ಭದಲ್ಲಿ ರೈಲು ಓಡಾಟವನ್ನೇ ಸ್ಥಗಿತಗೊಳಿಸಲಾಗಿತ್ತು‌‌. ಅನ್​​ಲಾಕ್ ಆದ ಬಳಿಕವೂ ರೈಲು ಓಡಾಟ ಕಡಿಮೆಯಾದ ಹಿನ್ನೆಲೆ ನಷ್ಟ ಅನುಭವಿಸಿತ್ತು.

ಈ ನಷ್ಟದ ಕಾರಣದಿಂದಾಗಿ ರೈಲ್ವೆ ಪ್ರಯಾಣ ದರದಲ್ಲಿ ಏರಿಕೆ ಮಾಡುವ ಲೆಕ್ಕಾಚಾರ ಹೊಂದಿತ್ತು. ಆದರೆ ಕೊರೊನಾದಿಂದ ಸಂಕಷ್ಟದಲ್ಲಿ ಇರುವ ಜನರಿಗೆ ದರ ಹೊರೆಯಾಗುವ ಕಾರಣಕ್ಕೆ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ. ‌ಇದರ ಬದಲಿಗೆ ಸರಕು-ಸಾಗಣೆಯೊಂದಿಗೆ ಬೇರೆ ಮಾರ್ಗಗಳ ಮೂಲಕ ಆದಾಯ ಸಂಗ್ರಹಕ್ಕೆ ಬಜೆಟ್​​ನಲ್ಲಿ ಒತ್ತು ನೀಡುವ ಸಾಧ್ಯತೆ ಇದೆ.

ವಿದ್ಯುದೀಕರಣಕ್ಕೆ ಒತ್ತು: ಇನ್ನು ರೈಲ್ವೆ ವೆಚ್ಚ ತಗ್ಗಿಸಲು ಈ ಬಾರಿ ಹೊಸ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ. ಡೀಸೆಲ್ ಬಳಕೆ ಕಡಿಮೆ ಮಾಡಿ ವಿದ್ಯುದೀಕರಣಕ್ಕೆ ಒತ್ತು ನೀಡಲು, ಇದಕ್ಕೆ ಸಹಕಾರಿಯಾಗುವ ಉಪಕ್ರಮಗಳ ಘೋಷಣೆಯ ನಿರೀಕ್ಷೆ ಇದೆ. ಸೌರ ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆಗೂ ಹೆಚ್ಚು ಗಮನಹರಿಸಲಿದ್ದಾರೆ. ಇದರ ಜತೆಗೆ ಬುಲೆಟ್ ರೈಲು ಯೋಜನೆಯು ಘೋಷಣೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: Mann ki Baat: ಪ್ರಧಾನಿ ಮೋದಿಯಿಂದ ಇಂದು ಈ ವರ್ಷದ ಮೊದಲ ಮನ್ ಕಿ ಬಾತ್

Last Updated : Jan 30, 2022, 9:26 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.