ETV Bharat / city

ಕೊನೆ ಕ್ಷಣದಲ್ಲಿ ಕೈಕೊಟ್ಟ ಡ್ರಿಲಿಂಗ್ ಮಷಿನ್​...ಗೋಲ್ಡ್​ಲೋನ್ ಶಾಪ್ ದರೋಡೆ ಪ್ರಯತ್ನ ವಿಫಲ - ಬೆಂಗಳೂರು ಸುದ್ದಿ

ಬ್ಯಾಡರಹಳ್ಳಿ‌‌ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಗೊಲ್ಲರಹಟ್ಟಿ ಬಳಿಯ ಮಣಪುರಂ ಗೋಲ್ಡ್ ಲೋನ್ ಶಾಪ್ ಕಳ್ಳತನ ಮಾಡುವ ದರೋಡೆಕೋರರ ಪ್ರಯತ್ನ ವಿಫಲವಾಗಿದೆ.

Gold loan shop robbery attempt unsuccessful
ಕೊನೆ ಕ್ಷಣದಲ್ಲಿ ಕೈಕೊಟ್ಟ ಡ್ರಿಲಿಂಗ್ ಮಷಿನ್​...ಗೋಲ್ಡ್​ಲೋನ್ ಶಾಪ್ ದರೋಡೆ ಪ್ರಯತ್ನ ವಿಫಲ
author img

By

Published : Aug 5, 2020, 10:38 PM IST

ಬೆಂಗಳೂರು: ಹಲವು ಅಡ್ಡಿ, ಆತಂಕದ ನಡುವೆ ಕಳ್ಳತನ‌ಕ್ಕೆ ಮುಂದಾಗಿದ್ದ ದರೋಡೆಕೋರರಿಗೆ ಕೊನೆ ಕ್ಷಣದಲ್ಲಿ ಡ್ರಿಲಿಂಗ್ ಮಷಿನ್​ ಕೈಕೊಟ್ಟ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದಿಯುವ ಪ್ರಯತ್ನ ವಿಫಲವಾಗಿದೆ.

ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಗೊಲ್ಲರಹಟ್ಟಿ ಬಳಿಯ ಮಣಪುರಂ ಗೋಲ್ಡ್ ಲೋನ್ ಶಾಪ್ ಕಳ್ಳತನ ಮಾಡಲು ಖದೀಮರು ಯೋಜನೆ ರೂಪಿಸಿಕೊಂಡಿದ್ದರು. ಮೊದಲ ಮಹಡಿಯಲ್ಲಿದ್ದ ಗೋಲ್ಡ್ ಶಾಪ್​ನಲ್ಲಿರುವ ಚಿನ್ನಾಭರಣ ಕದಿಯಲು ಎರಡನೇ ಮಹಡಿಯಲ್ಲಿರುವ ಎಸ್.ಆರ್.ಕಂಪ್ಯೂಟರ್ ಅಂಗಡಿ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲು ವ್ಯವಸ್ಥಿತ ಸಂಚು ರೂಪಿಸಿಕೊಂಡು ಆಗಸ್ಟ್ 2ರ ರಾತ್ರಿ ಬೈಕ್​ನಲ್ಲಿ ಅಂಗಡಿ ಬಳಿ ಬಂದಿದ್ದಾರೆ. ಸುತ್ತಮುತ್ತ ಯಾರು ಇಲ್ಲದಿರುವುದನ್ನು ಕಂಡು‌ ನೇರವಾಗಿ ಎರಡನೇ ಮಹಡಿಗೆ ತೆರಳಿದಿದ್ದಾರೆ. ಅಂಗಡಿ ಶೆಟರ್ ತೆಗೆಯುವಲ್ಲಿ ವಿಫಲಗೊಂಡ ಹಿನ್ನೆಲೆ, ಶಾಪ್​ಗೆ ಹೊಂದಿಕೊಂಡಂತಿರುವ ಎಡಭಾಗದ ಬಾಗಿಲನ್ನು ಆಯುಧದಿಂದ ಮುರಿದು ಒಳಪ್ರವೇಶಿಸಿದ್ದಾರೆ..

ಚಿನ್ನಕ್ಕಾಗಿ‌ ನೆಲ ಅಗೆಯುವ ಪ್ರಯತ್ನ ವಿಫಲ: ವ್ಯವಸ್ಥಿತ ಸಂಚಿನಂತೆ ಕಳ್ಳತನ ಯಶಸ್ವಿಯಾಗಲು ಡ್ರಿಲಿಂಗ್ ಯಂತ್ರ ಸೇರಿದಂತೆ ಎಲ್ಲಾ ರೀತಿಯ ಉಪಕರಣಗಳನ್ನು ತಂದಿದ್ದ ಖದೀಮರು, ತಮ್ಮ ದರೋಡೆ ಕೆಲಸ ಆರಂಭಿಸಿದ್ದಾರೆ. ಮೊದಲಮಹಡಿಯಲ್ಲಿರುವ ಮಣಪುರಂ ಶಾಪ್​ನ ಸುರಕ್ಷಾ ಕೊಠಡಿ ಸಂಪರ್ಕ ಕಲ್ಪಿಸುವ, ಅದೇ ಜಾಗದ ಎರಡನೇ ಮಹಡಿಯ‌ ನೆಲ ಅಗೆಯಲು ಮುಂದಾಗಿದ್ದಾರೆ. ಇನ್ನೇನು ನೆಲ ಕೊರೆಯುವ ಯಶಸ್ವಿ ಹಂತದಲ್ಲಿರುವಾಗ ಒತ್ತಡ ಹೆಚ್ಚಾಗಿ ಯಂತ್ರದ ಮೊಳೆ (ಬೀಟ್) ನೆಲದಲ್ಲೇ ಸಿಲುಕಿಕೊಂಡಿದೆ.‌ ಸತತ ಪ್ರಯತ್ನ ನಡೆಸಿದರೂ ಮೊಳೆ ಬಾರದ ಪರಿಣಾಮ ಚಿನ್ನಾಭರಣ ಕಳ್ಳತನ‌ ಆಸೆ ಕೈಬಿಟ್ಟಿದ್ದಾರೆ.

ಕೊನೆ ಕ್ಷಣದಲ್ಲಿ ಕಳ್ಳತನ ಯೋಜನೆ ಸಾಕಾರಗೊಳ್ಳದ ಪರಿಣಾಮ ಕಂಪ್ಯೂಟರ್ ಶಾಪ್​ನಲ್ಲಿದ್ದ ಎರಡು ಸಾವಿರ ಹಣ, ಸಿಸಿಟಿವಿ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ. ಆಗಸ್ಟ್​ 3ರಂದು ಎಂದಿನಂತೆ ಕಂಪ್ಯೂಟರ್ ತರಬೇತಿ‌ ಕೇಂದ್ರಕ್ಕೆ ಬಂದ ಮಾಲೀಕ ರಮೇಶ್, ಶಾಪ್​ ತೆರೆದು ನೋಡಿದಾಗ ಕಳ್ಳತನದ ಕೃತ್ಯ ಬಯಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕಾಮಿಸಿದ ಬ್ಯಾಡರಹಳ್ಳಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ಮುಂದಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.