ETV Bharat / city

750 ಆಮ್ಲಜನಕ ಸಾಂದ್ರಕ ನೀಡಿದ ಗಿವ್‌ ಇಂಡಿಯಾ; ಕುದುರೆಮುಖ ಕಂಪನಿಯಿಂದ 25 ಲಕ್ಷ ದೇಣಿಗೆ - 750 oxygen cylinder

ಬಳ್ಳಾರಿ, ಬೀದರ್‌, ರಾಯಚೂರು, ಕಲಬುರಗಿ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಗಿವ್‌ ಇಂಡಿಯಾ ನೀಡಿದ ಆಮ್ಲಜನಕ ಸಾಂದ್ರಕಗಳನ್ನು ಕಳಿಸಿಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

   750 ಆಮ್ಲಜನಕ ಸಾಂದ್ರಕ ನೀಡಿದ ಗಿವ್‌ ಇಂಡಿಯಾ,25 ಲಕ್ಷ ದೇಣಿಗೆ ನೀಡಿದ ಕುದುರೆಮುಖ ಕಂಪನಿ!

author img

By

Published : Jul 5, 2021, 8:14 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ಎದುರಿಸುವ ಉದ್ದೇಶಕ್ಕಾಗಿ ಗಿವ್‌ ಇಂಡಿಯಾ ಸಂಸ್ಥೆಯು 750 ಆಮ್ಲಜನ ಸಾಂದ್ರಕಗಳನ್ನು, ಕುದುರೆಮುಖ ಐರನ್ ಓರ್ ಕಂಪನಿ ವತಿಯಿಂದ ಇಂದು 25 ಲಕ್ಷ ರೂ.ಗಳ ದೇಣಿಗೆಯ ಚೆಕ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡಲಾಯಿತು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಗಿವ್ ಇಂಡಿಯಾ ಫೌಂಡೇಶನ್ ಸಿಇಒ ಅತುಲ್ ಸತೀಜಾ, ಫೌಂಡೇಶನ್​ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ವಿನೋದ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರಿಗೆ ಸಾಂದ್ರಕಗಳನ್ನು ಹಸ್ತಾಂತರ ಮಾಡಿದರು.

   750 ಆಮ್ಲಜನಕ ಸಾಂದ್ರಕ ನೀಡಿದ ಗಿವ್‌ ಇಂಡಿಯಾ,25 ಲಕ್ಷ ದೇಣಿಗೆ ನೀಡಿದ ಕುದುರೆಮುಖ ಕಂಪನಿ!
750 ಆಮ್ಲಜನಕ ಸಾಂದ್ರಕ ನೀಡಿದ ಗಿವ್‌ ಇಂಡಿಯಾ,25 ಲಕ್ಷ ದೇಣಿಗೆ ನೀಡಿದ ಕುದುರೆಮುಖ ಕಂಪನಿ!

ಹಸ್ತಾಂತರದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ, ಈ ಸಾಂದ್ರಕಗಳನ್ನು ಡಿ.ಎಂ.ನಂಜುಂಡಪ್ಪ ಅವರ ವರದಿಯಲ್ಲಿ ಪಟ್ಟಿ ಮಾಡಿರುವ ಅತ್ಯಂತ ಹಿಂದುಳಿದ 114 ತಾಲೂಕು ಆಸ್ಪತ್ರೆಗಳಿಗೆ ನೀಡಲಾಗುವುದು. ಬಳ್ಳಾರಿ, ಬೀದರ್‌, ರಾಯಚೂರು, ಕಲಬುರಗಿ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಗಿವ್‌ ಇಂಡಿಯಾ ನೀಡಿದ ಆಮ್ಲಜನಕ ಸಾಂದ್ರಕಗಳನ್ನು ಕಳಿಸಿಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಗಿವ್‌ ಇಂಡಿಯಾ ನೆರವು ನೀಡುತ್ತಿದ್ದು, ಈ ಮೊದಲು ಉತ್ತರಹಳ್ಳಿ, ಅಂಜನಾಪುರ, ಕಲ್ಯಾಣನಗರದಲ್ಲಿ ಸ್ಥಾಪನೆ ಮಾಡಲಾಗಿರುವ ಕೋವಿಡ್‌ ಕೇರ್‌ಗಳಿಗೆ ವೈದ್ಯರು, ಸಿಬ್ಬಂದಿ ಜತೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿತ್ತು. ಇದುವರೆಗೂ 47 ಕೋಟಿಗೂ ಹೆಚ್ಚು ಮೊತ್ತದ ಸಾಂದ್ರಕಗಳನ್ನು ನೀಡಿದ್ದಾರೆ. ಗಿವ್‌ ಇಂಡಿಯಾ ದೇಶಾದ್ಯಂತ ಕೋವಿಡ್‌ ಎದುರಿಸಲು ನೆರವು ನೀಡುತ್ತಿದೆ. ಈಗ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಆಮ್ಲಜನಕ ಸಾಂದ್ರಕಗಳನ್ನು ದೇಣಿಗೆಯಾಗಿ ನೀಡಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.