ಬೆಂಗಳೂರು: ನಗರದ ಬಂಟರ ಸಂಘದ ವತಿಯಿಂದ ಕೋವಿಡ್ ಆರೈಕೆಗಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ ಪೂರೈಕೆಯ ಉಚಿತ ಅಭಿಯಾನವನ್ನು ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿದ ಡಿಸಿಎಂ, ಬಂಟರ ಸಂಘದಿಂದ 20 ಆ್ಯಕ್ಸಿಜನ್ ಕಾನ್ಸಂಟ್ರೇಟರ್ ತೆರೆಯಲಾಗಿದೆ. ಹೋಮ್ ಐಸೋಲೇಷನ್ ಇದ್ದವರಿಗೆ ಆಕ್ಸಿಜನ್ ಪೂರೈಕೆಗೆ ಬಂಟರ ಸಂಘ ನೆರವಾಗುತ್ತಿದೆ. ಆ್ಯಕ್ಸಿಜನ್ ಪೂರೈಕೆಗಾಗಿ ವಿಶೇಷ ತಂಡ ರಚನೆಯಾಗಿದ್ದು, ಸಾಕಷ್ಟು ನಾಗರಿಕರಿಗೆ ಸಹಾಯವಾಗಲಿದೆ. ನಮ್ಮ ರಾಜಧಾನಿಯಲ್ಲಿ ಆ್ಯಕ್ಸಿಜನ್ ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆ ತಲೆದೋರಿತ್ತು. ಇದೀಗ ಅದು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿದೆ ಎಂದರು.
ಬೆಂಗಳೂರು ಬಂಟರ ಸಂಘದ ಸದಸ್ಯರು, ಸಮುದಾಯದವರು, ಆರ್.ಎನ್.ಎಸ್ ವಿದ್ಯಾ ಸಂಸ್ಥೆಯ ಶಾಲಾ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸುಮಾರು ಎಂಟು ಸಾವಿರ ಪೋಷಕರು ಈ ಉಚಿತ ಆಕ್ಸಿಜನ್ ಅಭಿಯಾನದ ನೆರವನ್ನು ಪಡೆದುಕೊಳ್ಳಬಹುದಾಗಿದೆ.
ಓದಿ: ವಾಹನ ತಪಾಸಣೆ ವೇಳೆ ವಕೀಲ-ಪೊಲೀಸರ ನಡುವೆ ವಾಗ್ವಾದ.. ರಕ್ಷಕರ ತಾಳ್ಮೆ ಪರೀಕ್ಷೆ