ETV Bharat / city

ಸಚಿವ ಈಶ್ವರಪ್ಪ ಹೇಳಿಕೆ ಭಾರತ ಮಾತೆಗೆ ಮಾಡಿದ ದ್ರೋಹ : ಯು ಟಿ ಖಾದರ್ - ಈಶ್ವರಪ್ಪ ಹೇಳಿಕೆ ಬಗ್ಗೆ ಯುಟಿ ಖಾದರ್​ ಪ್ರತಿಕ್ರಿಯೆ

ಅಲ್ಪಸಂಖ್ಯಾತರು ಸಿಎಂ ಅವರನ್ನು ಭೇಟಿ ಮಾಡಿದ್ದೇವೆ. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಇಡುವುದಕ್ಕೆ ಒತ್ತಾಯಿಸಿದ್ದೇವೆ. ಶಿಕ್ಷಣ, ಉದ್ಯೋಗಕ್ಕೆ ಹೆಚ್ಚಿನ ಮನ್ನಣೆ ನೀಡಬೇಕು. ಹಿಜಾಬ್ ವಿಚಾರದಲ್ಲಿ ಸರಿಯಾದ ನಿರ್ಣಯಕ್ಕೆ ಒತ್ತಾಯಿಸಿದ್ದೇವೆ‌. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ..

minister-u-t-khadar
ಯು ಟಿ ಖಾದರ್ ಟೀಕೆ
author img

By

Published : Feb 15, 2022, 2:50 PM IST

Updated : Feb 15, 2022, 3:19 PM IST

ಬೆಂಗಳೂರು : ತ್ರಿವರ್ಣ ಧ್ವಜದ ಜಾಗದಲ್ಲಿ ಭಗವಾ ಧ್ವಜ ಹಾರಲಿದೆ ಎಂಬ ಸಚಿವ ಕೆ ಎಸ್‌ ಈಶ್ವರಪ್ಪ ಅವರ ಹೇಳಿಕೆ ಭಾರತ ಮಾತೆಗೆ ಮಾಡಿದ ದ್ರೋಹ ಎಂದು ಮಾಜಿ ಸಚಿವ ಯು ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರ ಮಾತನ್ನ ಎಲ್ಲರೂ ಖಂಡಿಸುತ್ತಾರೆ. ಒಬ್ಬ ಹಿರಿಯ ನಾಯಕರಿಗೆ ಇದು ಶೋಭೆ ತರುವುದಿಲ್ಲ. ರಾಷ್ಟ್ರಧ್ವಜ ಈ ದೇಶದ ಮಣ್ಣಿನ ತ್ಯಾಗ. ಅದರ ಹಿಂದೆ ಹಲವು ಧ್ಯೇಯೋದ್ದೇಶಗಳಿವೆ.

ಸಚಿವ ಈಶ್ವರಪ್ಪ ಹೇಳಿಕೆ ಭಾರತ ಮಾತೆಗೆ ಮಾಡಿದ ದ್ರೋಹ : ಯು ಟಿ ಖಾದರ್

ಇದು ಭಾರತಮಾತೆಗೆ ಮಾಡುವ ದ್ರೋಹ. ಈಶ್ವರಪ್ಪ ಹಿರಿಯರಾಗಿ‌ ಮಾತನಾಡಿರಬಹುದು. ಆದರೆ, ಬಿಜೆಪಿ ನಾಯಕರು‌ ಅದಕ್ಕೆ ಸಮ್ಮತಿಸಿದ್ದಾರೆ. ನಿಜವಾದ ದೇಶಪ್ರೇಮ ಇದ್ದರೆ ಎಲ್ಲರೂ ಖಂಡಿಸಬೇಕು ಎಂದು ಆಗ್ರಹಿಸಿದರು.

ಹಿಜಾಬ್ ಬಗ್ಗೆ ಕಾಂಗ್ರೆಸ್ ನಿರ್ಧಾರ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿ, ಸಮಸ್ಯೆಯನ್ನು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಲ್ಲೇ ಬಗೆಹರಿಸಬೇಕು. ಹೊರಗಿನವರು ಮಧ್ಯಪ್ರವೇಶ ಮಾಡಬಾರದು. ಪೋಷಕರು, ಆಡಳಿತ ಮಂಡಳಿ ಬಗೆಹರಿಸಬೇಕು. ಹೆತ್ತವರು ಸರಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು‌.

ಸಿಎಂ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಅಲ್ಪಸಂಖ್ಯಾತರು ಸಿಎಂ ಅವರನ್ನು ಭೇಟಿ ಮಾಡಿದ್ದೇವೆ. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಇಡುವುದಕ್ಕೆ ಒತ್ತಾಯಿಸಿದ್ದೇವೆ. ಶಿಕ್ಷಣ, ಉದ್ಯೋಗಕ್ಕೆ ಹೆಚ್ಚಿನ ಮನ್ನಣೆ ನೀಡಬೇಕು. ಹಿಜಾಬ್ ವಿಚಾರದಲ್ಲಿ ಸರಿಯಾದ ನಿರ್ಣಯಕ್ಕೆ ಒತ್ತಾಯಿಸಿದ್ದೇವೆ‌. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಓದಿ: ಟೀಚರ್ ಗಳೂ ಹಿಜಾಬ್ ಹಾಕುವಂತಿಲ್ಲ, ಮಕ್ಕಳಿಗೆ ಇರುವುದು ಟೀಚರ್‌ಗೂ ಅನ್ವಯ : ರಘುಪತಿ ಭಟ್

Last Updated : Feb 15, 2022, 3:19 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.