ಬೆಂಗಳೂರು: ಟೋಯಿಂಗ್ ಸಿಬ್ಬಂದಿ ಮೇಲೆ ಮೂವರು ವಾಹನ ಸವಾರರು ಹೆಲ್ಮೆಟ್‌ನಿಂದ ಹಲ್ಲೆ ಮಾಡಿರುವ ಘಟನೆ ಯಲಹಂಕ ನ್ಯೂಟೌನ್ ಬಳಿ ನಡೆದಿದೆ.
ಯಲಹಂಕ ನ್ಯೂ ಟೌನ್ ಬಳಿ ಸುತ್ತಾಡುತ್ತಿದ್ದ ಸಂಚಾರ ಪೊಲೀಸರು, ರಸ್ತೆ ಅಕ್ಕ- ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಟೋಯಿಂಗ್ ಮಾಡಲಾರಂಭಿಸಿದ್ದರು. ಈ ವೇಳೆ, ನೋ ಪಾರ್ಕಿಂಗ್ ಬೋರ್ಡ್ ಇಲ್ಲದ ಹಿನ್ನೆಲೆ ಕೆಲವರು ವಾಹನ ನಿಲ್ಲಿಸಿದ್ದರು. ಫಲಕವಿಲ್ಲದ ಜಾಗದಿಂದ ವಾಹನ ಟೋಯಿಂಗ್ ಮಾಡದಂತೆ ಸಾರ್ವಜನಿಕರು ಹೇಳಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸರು ಹಾಗೂ ಸಿಬ್ಬಂದಿ, ವಾಹನಗಳನ್ನು ಎಳೆದುಕೊಂಡು ಟೋಯಿಂಗ್ ವಾಹನದಲ್ಲಿ ಇರಿಸಲು ಮುಂದಾಗಿದ್ದಾರೆ.
ಈ ವೇಳೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಗಲಾಟೆ ನಡೆದಿದೆ. ಆಕ್ರೋಶಗೊಂಡ ಮೂವರು ವಾಹನ ಸವಾರರು ಹೆಲ್ಮೆಟ್‌ನಿಂದ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಹಲ್ಲೆ ನಡೆಸಿದ ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.