ಬೆಂಗಳೂರು: ಸಿಲಿಕಾನ್ ಸಿಟಿಯ ಬಹತೇಕ ಕಡೆ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಆಚರಣೆಯಲ್ಲಿ ತೊಡಗಿದ್ದು, ಪ್ರತಿ ವರ್ಷ ರಂಜಾನ್ ಹಬ್ಬನ್ನ ಆಚರಿಸುತ್ತಿದ್ದ ಪಾದಾರಯನಪುರ, ಶಿವಾಜಿನಗರ ಈದ್ಗಾ ಮೈದಾನಗಳು ಮಾತ್ರ ಖಾಲಿ ಖಾಲಿಯಾಗಿವೆ.
ಪ್ರತಿ ವರ್ಷ ಮುಸ್ಲಿಂ ಬಾಂಧವರು ಶಿವಾಜಿನಗರ ಹಾಗೂ ಪಾದಾರಯನಪುರನಪುರಲ್ಲಿ ರಂಜಾನ್ ಹಬ್ಬವನ್ನ ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆದರೆ ಈ ಎರಡೂ ಪ್ರದೇಶಗಳಲ್ಲೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಜನರ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲದಿರುವುದರಿಂದ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವುದು ಅನಿವಾರ್ಯವಾಗಿದೆ.
ರಂಜಾನ್ ಹಬ್ಬ ಬಂತೆಂದರೆ ಸಾಕು ಮುಸ್ಲಿಂ ಬಾಂಧವರೆಲ್ಲಾ ಹೊಸ ಬಟ್ಟೆ ತೊಟ್ಟು ನಮಾಜ್ ಮಾಡಿ ಪರಸ್ಪರ ಶುಭ ಕೋರಲು ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸೇರುತ್ತಾರೆ. ಆದರೆ ಈ ಬಾರಿ ಈದ್ಗಾ ಮೈದಾನದಲ್ಲಿ ಖಾಕಿ ಬಿಟ್ಟು ಬೇರೆ ಯಾರೂ ಕಾಣಿಸುತ್ತಿಲ್ಲ.