ETV Bharat / city

'ವಿಡಿಯೋದಲ್ಲಿರುವುದು ನಾನಲ್ಲ, ವಿರೋಧಿಗಳು ನಿಷ್ಪಕ್ಷಪಾತ ವ್ಯಕ್ತಿತ್ವ ಹಾಳು ಮಾಡಲು ಇದನ್ನು ನಿರ್ಮಿಸಿದ್ದಾರೆ': ಡಿವಿಎಸ್ - Bangalore latest update news

'ನಾನು ಈಗಾಗಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ನನಗೆ ನಂಬಿಕೆ ಇದೆ. ಅಪರಾಧಿಗಳನ್ನು ಶೀಘ್ರವೇ ಬಂಧಿಸಲಾಗುವುದು' ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

DV Sadananda Gowda
ಡಿ.ವಿ ಸದಾನಂದ ಗೌಡ
author img

By

Published : Sep 19, 2021, 8:19 PM IST

ಬೆಂಗಳೂರು: 'ನನ್ನ ಮಾರ್ಫ್ ಮಾಡಿದ (ನಕಲಿ) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಇರುವುದು ನಾನಲ್ಲ. ನನ್ನ ವಿರೋಧಿಗಳು ನನ್ನ ನಿಷ್ಪಕ್ಷಪಾತ ವ್ಯಕ್ತಿತ್ವವನ್ನು ಹಾಳುಮಾಡಲು ಇದನ್ನು ನಿರ್ಮಿಸಿದ್ದಾರೆ' ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಸ್ಪಷ್ಟೀಕರಣ ನೀಡಿದ್ದಾರೆ.

  • ಆತ್ಮೀಯ ಹಿತೈಷಿಗಳೇ,

    ನನ್ನ ಮಾರ್ಫ್ ಮಾಡಿದ (ನಕಲಿ) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವೀಡಿಯೊದಲ್ಲಿ ಇರುವುದು ನಾನಲ್ಲ, ನನ್ನ ವಿರೋಧಿಗಳು ನನ್ನ ನಿಷ್ಪಕ್ಷಪಾತ ವ್ಯಕ್ತಿತ್ವವನ್ನು ಹಾಳುಮಾಡಲು ಇದನ್ನು ನಿರ್ಮಿಸಿದ್ದಾರೆ ಎಂದು ತಿಳಿಸಲು ಇಚ್ಚಿಸುತ್ತೇನೆ.‌ 1/3

    — Sadananda Gowda (@DVSadanandGowda) September 19, 2021 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾನು ಈಗಾಗಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ನನಗೆ ನಂಬಿಕೆ ಇದೆ. ಅಪರಾಧಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಅಲ್ಲದೇ, ನ್ಯಾಯಾಲಯದ ತಡೆಯಾಜ್ಞೆಯ ಪ್ರಕಾರ, ವಿಷಯವನ್ನು ಫಾರ್ವರ್ಡ್ ಮಾಡುವ/ಅಪ್‌ಲೋಡ್ ಮಾಡುವ ಯಾರಾದರೂ ಕಾನೂನಿನ ಸಂಬಂಧಿತ ವಿಭಾಗಗಳ ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ರೀತಿ ಮಾಡುವ ಯಾರಾದರೂ ನಿಮಗೆ ತಿಳಿದಿದ್ದರೆ ದಯವಿಟ್ಟು ನನಗೆ ಇನ್‌ಬಾಕ್ಸ್ ಮಾಡಿ ಎಂದು ಸದಾನಂದ ಗೌಡ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮಾನಹಾನಿಕಾರಕ ವರದಿ ಪ್ರಕಟಿಸದಂತೆ ತಡೆಯಾಜ್ಞೆ ತರಲು ಕಾರಣ ಬಹಿರಂಗಪಡಿಸಿದ ಡಿವಿಎಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.