ETV Bharat / city

ಅಂದು ಕೊರೊನಾ, ಇಂದು ಅದರ 2ನೇ ಅಲೆ: ಯುಗಾದಿಗೂ ಕಹಿಯಾದ ಮಹಾಮಾರಿ - ಕೊರೊನಾ ಪರಿಣಾಮಗಳು

ಕಳೆದ ವರ್ಷ ಕೋವಿಡ್-19 ಲಾಕ್‌ಡೌನ್ ಘೋಷಣೆಯಾಗಿದ್ದ ಕಾರಣ ಸಿಲಿಕಾನ್​ ಸಿಟಿಯಲ್ಲಿದ್ದ ಜನ ತಮ್ಮ ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗಲಿಲ್ಲ. ಅವರೆಲ್ಲ ಬಹುಶ: ಮೊದಲ ಬಾರಿ ಸಾಮೂಹಿಕವಾಗಿ ತಮ್ಮೂರಿಗೆ ತೆರಳಿ ಹಬ್ಬ ಆಚರಿಸುವುದರಿಂದ ದೂರ ಉಳಿಯಬೇಕಾಯಿತು. ಸದ್ಯ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಇದರ ಜೊತೆಗೆ ಕೊರೊನಾ ತಜ್ಞರ ಸಮಿತಿ ಹಬ್ಬಕ್ಕೆಂದು ಹಳ್ಳಿಗಳಿಗೆ ತೆರಳಿ ಎರಡನೇ ಅಲೆಯನ್ನು ಹಳ್ಳಿಗಳಿಗೆ ಕೊಂಡೊಯ್ಯದಿರಿ ಎನ್ನುವ ಎಚ್ಚರಿಕೆ ನೀಡಿದೆ. ಇದರಿಂದಾಗಿ ಕೆಲವರು ತಮ್ಮೂರಿಗೆ ತೆರಳುವ ಆಸೆ ಕೈಬಿಟ್ಟಿದ್ದಾರೆ.

ಯುಗಾದಿ ಹಬ್ಬ
ಯುಗಾದಿ ಹಬ್ಬ
author img

By

Published : Apr 11, 2021, 6:05 PM IST

ಬೆಂಗಳೂರು: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎನ್ನುವ ನಾಣ್ಣುಡಿಯಂತೆ ಪ್ರತಿ ವರ್ಷ ಬೇವು ಬೆಲ್ಲದ ಸವಿದು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದ ಜನರಿಗೆ ಕೊರೊನಾ ಮುಳ್ಳಾಗಿದ್ದು, ಸತತ ಎರಡನೇ ವರ್ಷವೂ ಹಬ್ಬದ ಸಂಭ್ರಮಕ್ಕೆ ಮಹಾಮಾರಿ ಕೋವಿಡ್​​​ ತಣ್ಣೀರೆರಚಿದೆ.

ಉದ್ಯೊಗ ಅರಸಿ ಲಕ್ಷಾಂತರ ಜನರು ಹಳ್ಳಿಗಳಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಹಬ್ಬಗಳಂದು ಬಹುತೇಕ ನಗರವಾಸಿಗಳು ತಮ್ಮೂರು, ಹಳ್ಳಿಗಳಿಗೆ ತೆರಳಿ ಹಬ್ಬಾಚರಿಸುತ್ತಾರೆ. ವಿಶೇಷವಾಗಿ ಯುಗಾದಿಗೆ ಇಡೀ ಕುಟುಂಬ ಒಟ್ಟಿಗೆ ಸೇರಿ ಪರಸ್ಪರ ಬೇವು ಬೆಲ್ಲ ಹಂಚಿಕೊಂಡು ಸಂಭ್ರಮಿಸುತ್ತಾರೆ. ಆದರೆ ಈ ಬಾರಿಯ ಯುಗಾದಿ ಸಂಭ್ರಮಕ್ಕೂ ಕೊರೊನಾ ಅಡ್ಡಿಯಾಗಿದೆ. ಕಳೆದ ವರ್ಷ ಕೊರೊನಾ, ಈ ಬಾರಿ ಎರಡನೇ ಅಲೆ ಯುಗಾದಿ ಆಚರಣೆಗೆ ಕಹಿಯಾಗಿ ಪರಿಣಮಿಸಿದೆ.

ಕಳೆದ ಬಾರಿ ಕೋವಿಡ್-19 ಲಾಕ್ ಡೌನ್ ಘೋಷಣೆಯಾಗಿದ್ದ ಕಾರಣ ಸಿಲಿಕಾನ್​ ಸಿಟಿಯಲ್ಲಿದ್ದ ಜನ ತಮ್ಮ ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗಲಿಲ್ಲ. ಅವರೆಲ್ಲ ಬಹುಶ: ಮೊದಲ ಬಾರಿ ಸಾಮೂಹಿಕವಾಗಿ ತಮ್ಮೂರಿಗೆ ತೆರಳಿ ಹಬ್ಬವನ್ನು ಆಚರಿಸುವುದರಿಂದ ದೂರ ಉಳಿಯಬೇಕಾಯಿತು. ಮನೆ ಮಂದಿಯೆಲ್ಲಾ ಕೂಡಿಕೊಂಡು ಬೇವು, ಮಾವಿನ ಎಲೆಗಳಿಂದ ಮನೆಯನ್ನು ಅಲಂಕರಿಸಿ ಬೇವು ಬೆಲ್ಲವನ್ನು ಹಂಚುತ್ತಾ ಊರು ಸುತ್ತಾಡುವ ಅವಕಾಶವನ್ನು ಕಳೆದುಕೊಂಡರು. ಕೊರೊನಾಗೆ ಹಿಡಿಶಾಪ ಹಾಕುತ್ತಾ ಬೆಂಗಳೂರಿನಲ್ಲೇ ಉಳಿದುಕೊಂಡರು.

ಈ ಬಾರಿಯ ವರ್ಷಾರಂಭದ ವಾತಾವರಣ ಕೊರೊನಾ ಸೋಂಕನ್ನು ಮರೆಸುವ ರೀತಿಯಲ್ಲಿತ್ತು. ಜೊತೆಗೆ ವ್ಯಾಕ್ಸಿನ್ ಕೂಡ ಲಭ್ಯವಿತ್ತು. ಹಾಗಾಗಿ ಈ ಬಾರಿಯ ಯುಗಾದಿ ಹಬ್ಬವನ್ನು ತಮ್ಮೂರುಗಳಲ್ಲಿ ಆಚರಿಸುವ ನಿರೀಕ್ಷೆ ಹೊತ್ತ ಬೆಂಗಳೂರಿಗರು ತಮ್ಮ ತಮ್ಮ ಹಳ್ಳಿಗಳಿಗೆ ತೆರಳುವ ತವಕದಲ್ಲಿದ್ದರು. ಆದರೆ ಈ ಬಾರಿಯೂ ಕೊರೊನಾ‌ ಎರಡನೇ ಅಲೆ ಎದುರಾಗಿ ಹೊಸ ಆತಂಕ ಸೃಷ್ಟಿಸಿದೆ.

ಸಾರಿಗೆ ಮುಷ್ಕರವೂ ಒಂದು ಕಾರಣ

ರಾಜ್ಯದಲ್ಲಿ ಕಳೆದ ನಾಲ್ಕು ದಿನದಿಂದ ಸಾರಿಗೆ ಮುಷ್ಕರ ನಡೆಯುತ್ತಿದೆ. ಸರ್ಕಾರಿ ಬಸ್​ಗಳ ಸೇವೆ ಬಹುತೇಕ ಸ್ಥಗಿತವಾಗಿದೆ. ಖಾಸಗಿ ಬಸ್ಸುಗಳಲ್ಲಿ ದುಬಾರಿ ಪ್ರಯಾಣ ದರ ಹಾಗು ಕೊರೊನಾ ಸುರಕ್ಷತಾ ಕ್ರಮವಾಗಿ ಹಳ್ಳಿಗಳಿಗೆ ತೆರಳುವ ಯೋಚನೆ ಕೈಬಿಟ್ಟಿದ್ದಾರೆ.

ಸ್ವಂತ ವಾಹನ ಬಳಕೆ

ಇಷ್ಟಾದರೂ ಸ್ವಂತ ವಾಹನವುಳ್ಳ ಕೆಲವರು ತಮ್ಮ ತಮ್ಮ ವಾಹನಗಳಲ್ಲೇ ಹಳ್ಳಿಗಳತ್ತಾ ತೆರಳುತ್ತಿದ್ದಾರೆ. ಆದರೆ ಇದರ ಪ್ರಮಾಣ ಕೊರೊನಾ ಬರುವುದಕ್ಕೆ ಮೊದಲಿಗೆ ಹೋಲಿಕೆ ಮಾಡಿದರೆ ತೀರಾ ಕಡಿಮೆ ಇದೆ. ಹಾಗಾಗಿ ಸತತ ಎರಡನೇ ವರ್ಷವೂ ಕೊರೊನಾ ಕಾರಣ ಹಾಗು‌ ಸಾರಿಗೆ ಮುಷ್ಕರದ ಕಾರಣದಿಂದ ಜನರು ಹಳ್ಳಿಗಳಿಗೆ ತೆರಳಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುವ ಅವಕಾಶದಿಂದ ವಂಚಿತರಾಗಿದ್ದಾರೆ.

ಹಬ್ಬದ ಸಂಭ್ರಮಕ್ಕೂ ಅಡ್ಡಿ

ಯುಗಾದಿ ಹಬ್ಬ ಎಂದರೆ ಹಿಂದೂಗಳಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಹಬ್ಬ. ಊರ ಜನರೆಲ್ಲಾ ಅಲ್ಲಲ್ಲಿ ಸಾಮೂಹಿಕವಾಗಿ ನಿಂತು ಯುಗಾದಿ ಚಂದಿರನನ್ನು ನೋಡುತ್ತಾರೆ ಚಂದ್ರ ದರ್ಶನದ ನಂತರ ಮನೆಗಳಲ್ಲಿ, ನೆರೆಹೊರೆಯವರಲ್ಲಿ ಬೇವು ಬೆಲ್ಲವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ ಆದರೆ ಈ ಬಾರಿ ಸಾಮಾಜಿಕ ಅಂತರದ ಕಾರಣಕ್ಕೆ ಸಾಮೂಹಿಕವಾಗಿ ನಿಂತು ಚಂದ್ರ ದರ್ಶನ ಮಾಡಲು ಅವಕಾಶವಿಲ್ಲದಂತಾಗಿದೆ.ಅಲ್ಲದೆ ಬೇವು ಬೆಲ್ಲ ಹಂಚಿಕೆಗೂ ಕೋವಿಡ್ ನಿಯಮದ ಅಡ್ಡಿ ಎದುರಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.