ETV Bharat / city

ದಲಿತ ಕವಿ ಡಾ. ಸಿದ್ದಲಿಂಗಯ್ಯ ನಡೆದು ಬಂದ ಹಾದಿ; ಇಲ್ಲಿದೆ ಸಂಕ್ಷಿಪ್ತ ಪರಿಚಯ

ಡಾ. ಸಿದ್ದಲಿಂಗಯ್ಯ ಅವರು ವಿಧಿವಶಕವಿ ಡಾ. ಸಿದ್ದಲಿಂಗಯ್ಯ ಅವರು ವಿಧಿವಶರಾಗಿದ್ದು, ಅವರ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

dr.siddalingaiah  profile  profile
ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರ ಸಂಕ್ಷಿಪ್ತ ಪರಿಚಯ
author img

By

Published : Jun 11, 2021, 6:23 PM IST

ಬೆಂಗಳೂರು: ಕನ್ನಡದ ಜನಪ್ರಿಯ ಲೇಖಕ ಹಾಗೂ ದಲಿತ ಕವಿ ಎಂದೇ ಪ್ರಸಿದ್ಧರಾಗಿದ್ದ ಸಿದ್ದಲಿಂಗಯ್ಯ ಅವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿ ಜನಪ್ರಿಯರಾಗಿದ್ದರು.

ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಾಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ - ಬರವಣಿಗೆಗಳಲ್ಲಿ ತೊಡಗಿಕೊಂಡು ಕನ್ನಡ ನಾಡಿಗೆ ಚಿರಪರಿಚಿತರಾಗಿದ್ದರು.

ಸಿದ್ದಲಿಂಗಯ್ಯ ಅವರ ಬಾಲ್ಯ, ವಿದ್ಯಾಭ್ಯಾಸ

ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.

dr.siddalingaiah  profile  profi
ಡಾ. ಸಿದ್ದಲಿಂಗಯ್ಯ

ಅಧ್ಯಾಪಕ, ಪ್ರಾಧ್ಯಾಪಕ, ಕವಿ, ಹೋರಾಟಗಾರರಾಗಿದ್ದ ಸಿದ್ದಲಿಂಗಯ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯನಿರ್ವಾಹಕ ಸದಸ್ಯರಾಗಿ ಜನಪ್ರಿಯರಾಗಿದ್ದರು. ಬಿ.ಕೃಷ್ಣಪ್ಪ ಅವರೊಂದಿಗೆ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು.

dr.siddalingaiah  profile  profi
ಡಾ. ಸಿದ್ದಲಿಂಗಯ್ಯ

1988ರಲ್ಲಿ, ತಮ್ಮ 34ನೇ ವಯಸ್ಸಿನಲ್ಲಿ, ಅವರು ಕರ್ನಾಟಕ ವಿಧಾನಪರಿಷತ್ ಸದಸ್ಯರಾಗಿ ಮತ್ತು 1995ರಿಂದ 2001ರ ಅವಧಿಗೆ ಜನತಾ ಪರಿವಾರದಿಂದ ವಿಧಾನ ಪರಿಷತ್​​ಗೆ ನಾಮ ನಿರ್ದೇಶನಗೊಂಡಿದ್ದರು.

2006ರಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು, 2008ರವರೆಗೆ ಅವರು ಕ್ಯಾಬಿನೆಟ್ ಶ್ರೇಣಿಯನ್ನು ಹೊಂದಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿದ್ದರು. ಅವರನ್ನು ದಲಿತ ಚಳವಳಿಯ ಸಂಕೇತ ಮತ್ತು ಪ್ರಮುಖ ಸಾರ್ವಜನಿಕ ಬುದ್ಧಿಜೀವಿ ಮತ್ತು ಕನ್ನಡ ಕವಿ ಎಂದು ಗುರುತಿಸಲಾಗಿದೆ.

dr.siddalingaiah  profile  profi
ಡಾ. ಸಿದ್ದಲಿಂಗಯ್ಯ

ಸಿದ್ದಲಿಂಗಯ್ಯ ಅವರ ಕೃತಿಗಳು

ಪಿಎಚ್ ಡಿ ಸಂಶೋಧನಾ ಪ್ರಬಂಧ, ಗ್ರಾಮ ದೇವತೆಗಳು, ಕವನ ಸಂಕಲನಗಳು- ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಆಯ್ದಕವಿತೆಗಳು, ಅಲ್ಲೆಕುಂತವರೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಸಮಕಾಲೀನ ಕನ್ನಡ ಕವಿತೆ ಭಾಗ-3,4 (ಸಂಪಾದನೆ ಇತರರೊಂದಿಗೆ)

ಸಿದ್ದಲಿಂಗಯ್ಯ ಅವರ ವಿಮರ್ಶನಾ ಕೃತಿಗಳು

ಹಕ್ಕಿ ನೋಟ, ರಸಗಳಿಗೆಗಳು, ಎಡಬಲ, ಉರಿ ಕಂಡಾಯ,

ಸಿದ್ದಲಿಂಗಯ್ಯ ಅವರ ಲೇಖನಗಳ ಸಂಕಲನ

ಅವತಾರಗಳು, ಸದನದಲ್ಲಿ ಸಿದ್ದಲಿಂಗಯ್ಯ ಭಾಗ -1, ಸದನದಲ್ಲಿ ಸಿದ್ದಲಿಂಗಯ್ಯ ಭಾಗ -2, ಜನಸಂಸ್ಕೃತಿ, ನಾಟಕಗಳು- ಏಕಲವ್ಯ, ನೆಲಸಮ, ಪಂಚಮ, ಆತ್ಮಕಥೆ- ಊರುಕೇರಿ- ಭಾಗ-1, ಊರುಕೇರಿ- ಭಾಗ-2

ಸಿದ್ದಲಿಂಗಯ್ಯ ಅವರಿಗೆ ಒಲಿದು ಬಂದ ಗೌರವ, ಪ್ರಶಸ್ತಿಗಳು

  • ಉತ್ತಮ ಚಲನಚಿತ್ರಗೀತೆ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-1984
  • ರಾಜ್ಯೋತ್ಸವ ಪ್ರಶಸ್ತಿ -1986
  • ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ -1992
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -1996
  • ಜಾನಪದ ತಜ್ಞ ಪ್ರಶಸ್ತಿ -2001
  • ಸಂದೇಶ್ ಪ್ರಶಸ್ತಿ -2001
  • ಡಾ.ಅಂಬೇಡ್ಕರ್ ಪ್ರಶಸ್ತಿ -2002
  • ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ -2002
  • ಬಾಬು ಜಗಜೀವನರಾಮ್ ಪ್ರಶಸ್ತಿ -2005
  • ನಾಡೋಜ ಪ್ರಶಸ್ತಿ -2007
  • ಪ್ರೆಸಿಡೆನ್ಸಿ ಇನ್ಸಿಟ್ಯೂಷನ್ ಪ್ರಶಸ್ತಿ -2012
  • ಆಳ್ವಾಸ್ ನುಡಿಸಿರಿ ಪ್ರಶಸ್ತಿ -2012
  • ನೃಪತುಂಗ ಪ್ರಶಸ್ತಿ -2018
  • ಪಂಪ ಪ್ರಶಸ್ತಿ - 2019

ETV Bharat Logo

Copyright © 2024 Ushodaya Enterprises Pvt. Ltd., All Rights Reserved.