ETV Bharat / city

ಕೊರೊನಾ ಸೋಂಕಿನ ಪರಿಸ್ಥಿತಿ ನಿಭಾಯಿಸಲಾಗದ ಸರ್ಕಾರ ನಮಗೆ ಬೇಕೆ: ಡಿಕೆಶಿ ಪ್ರಶ್ನೆ

ಕೊರೊನಾ ಸೋಂಕಿನಿಂದ ದೇವರೇ ರಾಜ್ಯದ ಪ್ರಜೆಗಳನ್ನು ಕಾಪಾಡಬೇಕು ಎಂಬ ಸಚಿವ ಶ್ರೀರಾಮುಲು ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

dks
ಡಿಕೆಶಿ
author img

By

Published : Jul 16, 2020, 1:08 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಭಗವಂತನೇ ನಮ್ಮೆಲ್ಲರನ್ನು ಕೊರೊನಾದಿಂದ ಕಾಪಾಡಬೇಕೆಂದು ಹೇಳಿದ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

dks tweet
ಡಿಕೆಶಿ ಟ್ವೀಟ್​

ಈ ಕುರಿತು ಟ್ವೀಟ್​ ಮಾಡಿರುವ ಡಿಕೆಶಿ ''ಇದು ಬಿಎಸ್​ವೈ ನೇತೃತ್ವದ ರಾಜ್ಯ ಸರ್ಕಾರದ ಅಸಮರ್ಥತೆಯನ್ನು ಎತ್ತಿ ತೋರಿಸುತ್ತದೆ. ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ'' ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜೊತೆಗೆ ಕೊರೊನಾ ಸೋಂಕನ್ನು ನಿರ್ವಹಿಸಲು ಸಾಧ್ಯವಾಗದ ಇಂಥಹ ಸರ್ಕಾರ ನಮಗೆ ಬೇಕೆ ಎಂದು ಟ್ವಿಟ್ಟರ್​ನಲ್ಲಿ ಪ್ರಶ್ನಿಸಿದ್ದಾರೆ. ಈ ಸರ್ಕಾರ ಜನರ ಹೊಣೆಯನ್ನು ದೇವರಿಗೆ ಬಿಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.