ಬೆಂಗಳೂರು: ರಾಜ್ಯದ ಒಂದು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ, ರಾಜ್ಯದಲ್ಲಿ ಆಡಳಿತ ವಿರೋಧ ಅಲೆ ಇರುವ ಸ್ಪಷ್ಟ ಸುಳಿವನ್ನು ಮತದಾರರು ಮತಗಳ ಮೂಲಕವೇ ರವಾನಿಸಿದ್ದಾರೆ.
ಹೌದು, ಬೈ ಎಲೆಕ್ಷನ್ ಚಾಂಪಿಯನ್ ಎಂದು ಬೀಗುತ್ತಿದ್ದ ಬಿಜೆಪಿಗೆ ಈ ಬಾರಿ ಮತದಾರರು ಬೇರೆಯ ಸಂದೇಶವನ್ನೇ ನೀಡಿದ್ದಾರೆ. ತನ್ನದೇ ಕ್ಷೇತ್ರವಾದ ಬೆಳಗಾವಿಯನ್ನು ಬಿಜೆಪಿ ಬಹಳ ಪ್ರಯಾಸದಿಂದ ಗೆಲ್ಲಬೇಕಾಯಿತು. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸುರೇಶ್ ಅಂಗಡಿ 4 ಲಕ್ಷ ಮತಗಳ ಅಂತರದ ಗೆಲುವು ಪಡೆದಿದ್ದರೆ, ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿ ಕೇವಲ 5 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಒಂದು ಹಂತದಲ್ಲಿ ಸೋತೇ ಬಿಟ್ಟರು ಎನ್ನವ ಸಂದರ್ಭವೂ ಬಂದಿತ್ತು, ಆದರೆ ಕೊನೆ ಹಂತದಲ್ಲಿ ಅಲ್ಪ ಮತಗಳ ಗೆಲುವು ಪಡೆದಿದ್ದು ಬಿಜೆಪಿ ನಾಯಕರು ನಿಟ್ಟುಸಿರು ಬಿಡುವಂತಾಗಿದೆ.
ಇನ್ನು ಮಸ್ಕಿ ಕ್ಷೇತ್ರದಲ್ಲಂತೂ ಬಿಜೆಪಿ ಸೋತು ಸುಣ್ಣವಾಗಿದೆ. ಮತದಾರರು ಬಿಜೆಪಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 213 ಮತಗಳ ಅಂತರದ ವೀರೋಚಿತ ಸೋಲು ಕಂಡಿದ್ದ ಬಿಜೆಪಿ ಉಪ ಚುನಾವಣೆಯಲ್ಲಿ 30 ಸಾವಿರಕ್ಕೂ ಹೆಚ್ಚಿನ ಅಂತರದ ಮತಗಳ ಸೋಲು ಕಂಡಿದೆ. ಇದು ಮತದಾರರು ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
2018 ರ ಸಾರ್ವತ್ರಿಕ ಚುನಾವಣೆ ವೇಳೆ ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ 18 ಸಾವಿರ ಮತಗಳ ಅಂತರದ ಸೋಲು ಕಂಡಿದ್ದ ಬಿಜೆಪಿ ಈ ಬಾರಿಯ ಉಪ ಚುನಾವಣೆಯಲ್ಲಿ 20 ಸಾವಿರ ಮತಗಳ ಅಂತರದ ಗೆಲುವು ಸಾಧಿಸಿದ್ದು ಕೊಂಚ ಸಮಾಧಾನ ತರಿಸಿದೆ.
ಮೂರೂ ಕ್ಷೇತ್ರಗಳ ಲೆಕ್ಕ ತೆಗೆದುಕೊಂಡಲ್ಲಿ ಬಿಜೆಪಿಗೆ ಒಂದು ಸ್ಥಾನ ಹೆಚ್ಚಿಗೆ ಬಂದಿದೆಯಾದರೂ ಮತಗಳ ಲೆಕ್ಕಾಚಾರ ಬಿಜೆಪಿ ವಿರುದ್ಧ ಜನರ ನಿಲುವಿರುವ ಸಂದೇಶ ರವಾನಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾದ ನಂತರ ಇದು ಮೂರನೇಯ ಉಪ ಚುನಾವಣೆಯಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್, ಜೆಡಿಎಸ್ ನಾಯಕರು ಬಿಜೆಪಿ ಸೇರಿದ್ದರಿಂದ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನ ಗೆದ್ದು ಬೀಗಿತ್ತು, ನಂತರ ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರ ಗೆದ್ದು ಸರ್ಕಾರಕ್ಕೆ ಜನಾದೇಶವಿದೆ ಎಂದು ಬಿಂಬಿಸಿಕೊಂಡಿತ್ತು. ಎರಡೂ ಉಪ ಚುನಾವಣೆಯಲ್ಲಿ ದೊಡ್ಡ ಅಂತರದ ಗೆಲುವನ್ನೇ ಬಿಜೆಪಿ ಅಭ್ಯರ್ಥಿಗಳು ಗಳಿಸಿಕೊಂಡಿದ್ದರು.
ಆದರೆ ಈಗ ನಡೆದ ಉಪ ಚುನಾವಣೆಯಲ್ಲಿ ಮೂರ ಸ್ಥಾನಗಳಲ್ಲಿ ಎರಡು ಸ್ಥಾನ ಬಿಜೆಪಿ ಗೆದ್ದರೂ ಅದು ಬಿಜೆಪಿ ನಿರೀಕ್ಷೆಗೆ ತಕ್ಕ ರೀತಿಯಲ್ಲಿಲ್ಲ ಎಂದು ಮೇಲ್ನೋಟಕ್ಕೇ ಕಂಡುಬರುತ್ತಿದೆ. ಇಡೀ ಸರ್ಕಾರವೇ ಮೂರು ಕ್ಷೇತ್ರಗಳಲ್ಲಿ ಠಿಕಾಣಿ ಹೂಡಿತ್ತು, ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಚಾರದ ಅಖಾಡಕ್ಕಿಳಿದಿದ್ದರು. ಆದರೂ ಬೆಳಗಾವಿಯಲ್ಲಿ ಗೆಲುವಿಗೆ ಬಹಳ ಪ್ರಯಾಸಪಟ್ಟಿದೆ. ಮಸ್ಕಿಯಲ್ಲಿ ಸ್ವತಃ ಸಿಎಂ ಪುತ್ರ, ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಉಸ್ತುವಾರಿ ವಹಿಸಿದ್ದರೂ ಗೆಲುವು ಗಗನ ಕುಸುಮವಾಯಿತು. ದೊಡ್ಡ ಅಂತರದ ಸೋಲು ಆಡಳಿತಾರೂಢ ಬಿಜೆಪಿಗೆ ಮಖಭಂಗವನ್ನುಂಟು ಮಾಡಿದೆ. ಬಸವಕಲ್ಯಾಣ ಮಾತ್ರ ಬಿಜೆಪಿಯ ಗೌರವ ಕಾಪಾಡಿದೆ.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಎಡವಿದ್ದು, ಅಭಿವೃ ದ್ಧಿ ಕಾರ್ಯಗಳಿಗೆ ತೀವ್ರ ಹಿನ್ನಡೆ, ಶಾಸಕರಿಗೆ ಸರಿಯಾಗಿ ಅನುದಾನ ಬಿಡುಗಡೆ ಮಾಡದೇ ಇರುವುದು, ಬಿಜೆಪಿಯಲ್ಲಿ ಪದೇ ಪದೇ ನಾಯಕತ್ವ ಬದಲಾವಣೆ ಕೂಗು, ಆಂತರಿಕ ಕಲಹ ಇತ್ಯಾದಿಗಳಿಂದ ಜನರು ಬೇಸತ್ತಿದ್ದಾರೆ ಎನ್ನುವುದು ಉಪ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ.
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯ ವಾತಾವರಣ ನಿರ್ಮಾಣವಾಗುತ್ತಿದೆ. ಪ್ರತಿಪಕ್ಷ ಕಾಂಗ್ರೆಸ್ ಬಲಗೊಳ್ಳುತ್ತಿದೆ ಎನ್ನುವ ಸಂದೇಶವನ್ನು ಬೆಳಗಾವಿ ಮತದಾರರು ನೀಡಿದ್ದಾರೆ. ಹಾಗಾಗಿ 2023 ಕ್ಕೆ ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಎನ್ನುವ ಲೆಕ್ಕಾಚಾರ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ.
ಸ್ವತಃ ಬಿಜೆಪಿ ರಾಷ್ಟ್ರೀಯ ಘಟಕವೇ ರಾಜ್ಯಕ್ಕೆ ಇಂತಹ ಸೂಚನೆ ನೀಡಿದೆ. ಉಪ ಚುನಾವಣಾ ಫಲಿತಾಂಶ ನಿಮಗೆ ಎಚ್ಚರಿಕೆಯ ಗಂಟೆಯಾಗಿದೆ, ಮೈಮರೆತಲ್ಲಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಗಲಿದೆ ಎಚ್ಚೆತ್ತುಕೊಳ್ಳಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸರ್ಕಾರ ಹಾಗೂ ರಾಜ್ಯ ಘಟಕಕ್ಕೆ ಸಲಹೆ ನೀಡಿದ್ದಾರೆ.
ಒಟ್ಟಿನಲ್ಲಿ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದರೂ ಆತ್ಮಾವಲೋಕನದ ಹಾದಿ ಹಿಡಿಯಬೇಕಾದ ಸ್ಥಿತಿಗೆ ಬಿಜೆಪಿ ತಲುಪಿದೆ. ಭವಿಷ್ಯದ ಆಡಳಿಯ ವಿರೋಧಿ ಅಲೆಯ ಎಚ್ಚರಿಕೆಯನ್ನೂ ಮತದಾರರು ಕೇಸರಿಪಡೆಗೆ ರವಾನಿಸಿದ್ದು, ಬಿಜೆಪಿಯ ಮುಂದಿನ ನಡೆ ಕಾದು ನೋಡಬೇಕಿದೆ.
ಆಡಳಿತ ವಿರೋಧಿ ಅಲೆ ಸುಳಿವು ನೀಡಿತಾ ಉಪ ಚುನಾವಣಾ ಫಲಿತಾಂಶ...? - ಬಸವಕಲ್ಯಾಣ ಉಪಚುನಾವಣೆ
ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದರೂ ಆತ್ಮಾವಲೋಕನದ ಹಾದಿ ಹಿಡಿಯಬೇಕಾದ ಸ್ಥಿತಿಗೆ ಬಿಜೆಪಿ ತಲುಪಿದೆ. ಭವಿಷ್ಯದ ಆಡಳಿಯ ವಿರೋಧಿ ಅಲೆಯ ಎಚ್ಚರಿಕೆಯನ್ನೂ ಮತದಾರರು ಕೇಸರಿಪಡೆಗೆ ರವಾನಿಸಿದ್ದು, ಬಿಜೆಪಿಯ ಮುಂದಿನ ನಡೆ ಕಾದು ನೋಡಬೇಕಿದೆ.