ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ ಉಂಟಾಗುತ್ತಿರುವ ಹಿನ್ನೆಲೆ ಕೊರೊನಾ ಸರಪಳಿ ಮುರಿಯಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಕಠಿಣ ನಿಯಮಗಳ ಹೊರತಾಗಿಯೂ, ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದೆ. ಆದರೆ, ಪ್ರಮುಖ ವಿಷಯ ಎಂದರೆ ಕಳೆದ 2-3 ದಿನಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ.
ಪಾಸಿಟಿವ್ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಕೊರೊನಾ ಪರೀಕ್ಷೆಗಳನ್ನು ಕಡಿಮೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಕೇವಲ 32,862 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಪೈಕಿ 16,747 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿಂದೆ, ನಿತ್ಯ 65,000 ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು.
ಇದರ ನಡುವೆ ಕೊರೊನಾ ನಿಯಂತ್ರಣಕ್ಕಾಗಿ ನಿತ್ಯ 1 ಲಕ್ಷ ಪರೀಕ್ಷೆಯನ್ನು ಹೆಚ್ಚಿಸಲು ಕೊರೊನಾ ಕಾರ್ಯಪಡೆ ಸಮಿತಿ ಸೂಚಿಸಿದೆ. ಆದಾಗ್ಯೂ, ಪರೀಕ್ಷೆಗಳನ್ನು ಬಿಬಿಎಂಪಿ ಅರ್ಧದಷ್ಟು ಕಡಿಮೆ ಮಾಡಿದೆ. ದೇಶದ ಎಲ್ಲ ನಗರಗಳಿಗಿಂತ ಬೆಂಗಳೂರಿನಲ್ಲಿ ಹೆಚ್ಚು ಸೋಂಕು ಇದೆ. ಹೀಗಾಗಿ, ದೇಶದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ನಗರ ಎಂದು ಹೆಸರಿಸುವ ಭಯ ನಿರ್ಮಾಣ ಆಗಿದೆ. ಈ ಕಾರಣಕ್ಕಾಗಿಯೇ ಬಿಬಿಎಂಪಿ ಪರೀಕ್ಷೆಗಳನ್ನು ಕಡಿಮೆ ಮಾಡಿದೆ ಎನ್ನಲಾಗಿದೆ.
ಬೆಂಗಳೂರು ನಗರದ ಪ್ರಕರಣ ವಿವರಗಳು:
ದಿನಾಂಕ | ಪ್ರಕರಣಗಳ ಸಂ. | ಸಾವು |
---|---|---|
ಮೇ 1 | 19,353 | 162 |
ಮೇ 2 | 21,199 | 64 |
ಮೇ 3 | 22,112 | 115 |
ಮೇ 4 | 20,870 | 132 |
ಮೇ 5 | 23,106 | 161 |
ಮೇ 6 | 23,706 | 139 |
ಮೇ 7 | 21,376 | 346 |
ಮೇ 8 | 18, 473 | 285 |
ಮೇ 9 | 20,897 | 281 |
ಮೇ 10 | 16,747 | 374 |
ಬೆಂಗಳೂರಿನಲ್ಲಿ ಮಾತ್ರ ತಾಂತ್ರಿಕ ಸಲಹಾ ಸಮಿತಿಯು ಪ್ರತಿದಿನ ಒಂದು ಲಕ್ಷ ಜನರಿಗೆ ಕೋವಿಡ್ ಪರೀಕ್ಷೆಯನ್ನು ಮಾಡಬೇಕೆಂದು ಶಿಫಾರಸು ಮಾಡಿದೆ. ಆದರೆ, ಈಗ ರಾಜ್ಯದಾದ್ಯಂತ ಒಂದೂವರೆ ಲಕ್ಷ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ರಾಜ್ಯ ಕೋವಿಡ್ ಪರೀಕ್ಷೆಯ ಅಂಕಿ ಅಂಶಗಳು:
ದಿನಾಂಕ | ಕೋ.ಪರೀಕ್ಷೆ | ಸೋಂ.ಸಂ. |
---|---|---|
ಏ. 27 | 1,70,116 | 31,830 |
ಏ. 28 | 1,71,997 | 39,047 |
ಏ. 29 | 1,75,816 | 35,024 |
ಏ. 30 | 1,89,793 | 48,296 |
ಮೇ 01 | 1,77,982 | 40,990 |
ಮೇ 02 | 1,58,365 | 37,733 |
ಮೇ 03 | 1,49,090 | 44,438 |
ಮೇ 04 | 1,53,707 | 44,631 |
ಮೇ 05 | 1,55,224 | 50,112 |
ಮೇ 06 | 1,64,441 | 49,058 |
ಮೇ 07 | 1,58,902 | 48,781 |
ಮೇ 08 | 1,57,027 | 47,563 |
ಮೇ 09 | 1,46,491 | 47,930 |
ಮೇ 10 | 1,24,110 | 39,305 |
ನಿನ್ನೆ ರಾಜ್ಯವ್ಯಾಪಿ 1,24,100 ಜನರನ್ನು ಪರೀಕ್ಷಿಸಲಾಯಿತು. ಈ ಹಿಂದೆ 2 ಲಕ್ಷಕ್ಕೆ ತಲುಪಿದ್ದ ಕೋವಿಡ್ ಪರೀಕ್ಷೆ ಈಗ ಕಡಿಮೆಯಾಗಿದೆ. ಸಕಾರಾತ್ಮಕ ದರವನ್ನು ಕಡಿಮೆ ಮಾಡಲು ಕೋವಿಡ್ ಪರೀಕ್ಷೆಯನ್ನು ಕಡಿಮೆ ಮಾಡಲಾಗಿದೆಯೇ ಎಂಬುದು ಇಲ್ಲಿ ಪ್ರಮುಖ ಪ್ರಶ್ನೆಯಾಗಿದೆ.