ETV Bharat / city

ಪ್ಲಾಸ್ಟಿಕ್ ನಿಷೇಧ ಜಾರಿಗೆ ಸೆಪ್ಟೆಂಬರ್​ 1 ಡೆಡ್​ಲೈನ್​​ - undefined

ಸೆಪ್ಟೆಂಬರ್ 1ರೊಳಗೆ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ತರದೇ ಇದ್ದರೇ ಬಿಬಿಎಂಪಿ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ (ಎನ್​ಜಿಟಿ) ವರದಿ ನೀಡುತ್ತೇವೆ ಎಂದು ರಾಜ್ಯ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿ ಅಧ್ಯಕ್ಷ ಸುಭಾಷ್ ಬಿ.ಆಡಿ ಎಚ್ಚರಿಕೆ ನೀಡಿದರು.

'ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ' ಕಾರ್ಯಕ್ರಮವನ್ನು ಮೇಯರ್ ಗಂಗಾಂಬಿಕೆ ಅವರು ಉದ್ಘಾಟಿಸಿದರು.
author img

By

Published : Jul 21, 2019, 8:30 PM IST

ಬೆಂಗಳೂರು: ಪುರಭವನದಲ್ಲಿ ಇಂದು ಆಯೋಜಿಸಿದ್ದ 'ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ' ಕಾರ್ಯಕ್ರಮದಲ್ಲಿ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿ ಅಧ್ಯಕ್ಷ ಸುಭಾಷ್ ಬಿ.ಆಡಿ ಮಾತನಾಡಿದರು.

ಬೈಲಾದಲ್ಲಿ ಕೆಲವು ನಿಯಮಗಳನ್ನು ಮಾರ್ಪಾಡುಗೊಳಿಸಿ ದುಪ್ಪಟ್ಟು ದಂಡ ವಿಧಿಸುವ ಮೂಲಕ ಪ್ಲಾಸ್ಟಿಕ್​ಗೆ ನಿಷೇಧ ಹೇರಬೇಕು. ಅದು ಸೆ.1ರೊಳಗೆ ಜಾರಿಯಾಗಬೇಕು ಎಂದು ಮೇಯರ್​ಗೆ ಸೂಚಿಸಿದರು.

ಮನೆಯಲ್ಲೇ ಕಸ ವಿಂಗಡಣೆ ಮಾಡುವುದನ್ನು ಕಡ್ಡಾಯಗೊಳಿಸಬೇಕು. ಅನುಕರಣೆ ಮಾಡದವರಿಗೆ ದುಪ್ಪಟ್ಟು ದಂಡ ವಿಧಿಸಬೇಕು. ದೇಶದಲ್ಲಿ ಪ್ರತಿನಿತ್ಯ 1.50 ಲಕ್ಷ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಹೀಗೆ ಮುಂದುವರಿದರೆ 3 ಲಕ್ಷ ಮುಟ್ಟುತ್ತದೆ. ಬೆಂಗಳೂರಿನಲ್ಲಿ 5,700 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಬಹುತೇಕ ಕಸವನ್ನು ಕ್ವಾರಿಗಳಿಗೆ ಸುರಿಯುತ್ತಿದ್ದಾರೆ. ಇದು ಪರಿಸರದ ಮತ್ತು ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೇಯರ್ ಗಂಗಾಂಬಿಕೆ ಮಾತನಾಡಿ, ನಗರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ಘನತ್ಯಾಜ್ಯ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸಾಧ್ಯವಾಗುತ್ತದೆ. ಎಲ್ಲರೂ ಇದಕ್ಕೆ ಸಹಕರಿಸಬೇಕು. ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಸೆಪ್ಟೆಂಬರ್ 1ರಿಂದ ಹೊಸ ಟೆಂಡರ್ ಜಾರಿಗೊಳಿಸುತ್ತಿದೆ ಎಂದರು.

ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿ ಕೊಡದಿದ್ದಲ್ಲಿ ದುಪಟ್ಟು ದಂಡ ವಿಧಿಸಲಾಗುತ್ತದೆ. ನಗರದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಬಿಬಿಎಂಪಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಅದಕ್ಕಾಗಿ ಕಾನೂನಿನಲ್ಲಿ ಕೆಲವು ಮಾರ್ಪಾಡು ಮಾಡಲಾಗುತ್ತಿದೆ. ಆಗಸ್ಟ್ 1ರಿಂದ ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡು ಬಂದರೆ 5 ಪಟ್ಟು ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.

Intro:ಪ್ಲಾಸ್ಟಿಕ್ ನಿಷೇಧ ಜಾರಿಗೆ ಸೆಪ್ಟೆಂಬರ್ 1ರಂದು ಡೆಡ್ ಲೈನ್..

ಬೆಂಗಳೂರು: ಪ್ಲಾಸ್ಟಿಕ್‌ ನಿಷೇಧ ಜಾರಿಗೆ ಸೆಪ್ಟೆಂಬರ್ 1 ರಂದು ಡೆಡ್ ಲೈನ್ ನೀಡಿ, ಕಟ್ಟುನಿಟ್ಟಾಗಿ ಆದೇಶ ಜಾರಿಮಾಡದಿದ್ದರೆ, ಬಿಬಿಎಂಪಿ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಧೀಕರಣಕ್ಕೆ ವರದಿ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಮಟ್ಟದ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿ ಅಧ್ಯಕ್ಷ ಮತ್ತು ನಿವೃತ್ತ ನಾಯಾಧೀಶ ಸುಭಾಷ್ ಬಿ ಆಡಿ ತಿಳಿಸಿದರು..

ಇಂದು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ ಕುರಿತು ಪುರಭವನದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.. ಈ ಸಂದರ್ಭದಲ್ಲಿ ಮಾತಾನಾಡಿದ ಅವರು, ನಮ್ಮ ಕಸ ನಮ್ಮ ಜವಾಬ್ದಾರಿ ಎಂಬಂತೆ ನಮ್ಮ ವಾರ್ಡ್ ನಮ್ಮ ಜವಾಬ್ದಾರಿ ಎಂಬ ಘೋಷವಾಕ್ಯದಡಿ ತಮ್ಮ ವಾರ್ಡ್ಗಳಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನು ಮೂಲದಲ್ಲೇ ಸಂಸ್ಕರಿಸಲು ಮುಂದಾಗಬೇಕು ಎಂದು ತಿಳಿಸಿದರು..‌

ದೇಶದಲ್ಲಿ ಪ್ರತಿನಿತ್ಯ 1.50 ಲಕ್ಷ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಅದು 3 ಲಕ್ಷಕ್ಕೆ ಹೆಚ್ಚಳವಾಗಲಿದೆ. ನಗರದಲ್ಲಿ 5,700 ಟನ್ ತ್ಯಾಜ್ಯ ಉತ್ಪತ್ತಿ ಆಗುತ್ತಿದ್ದು, ಬಹುತೇಕ ತ್ಯಾಜ್ಯವನ್ನು ಕ್ವಾರಿಗಳಲ್ಲಿ ಸುರಿಯಲಾಗುತ್ತಿದೆ. ಇದರಿಂದ ಕಸ ಭೂಮಿಯ ಒಡಲು ಸೇರಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿಂದೆ ಮಂಡೂರಿನಲ್ಲಿ 35 ಲಕ್ಷ ಟನ್ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಿರುವ ಪರಿಣಾಮ ಅಲ್ಲಿನ ಸ್ಥಳೀಯರು ಇಂದಿಗೂ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ಕಸವನ್ನು ಮೂಲದಲ್ಲೇ ವಿಂಗಡಿಸಿದಲ್ಲಿ ಬೆಂಗಳೂರು ಸ್ವಚ್ಛ ನಗರಿಯಾಗಲಿದೆ ಎಂದು ಹೇಳಿದರು.

ಮನೆ-ಮನೆ ಕಸ ವಿಂಗಡಣೆ ಮಾಡುವುದನ್ನು ಕಡ್ಡಾಯಗೊಳಿಸಬೇಕು. ಹಸಿ ಕಸ, ಒಣ ಕಸ ವಿಂಗಡಿಸಿ ಕೊಡದಿದ್ದರೆ ದುಪ್ಪಟ್ಟು ದಂಡ ವಿಧಿಸಬೇಕು. ಅಲ್ಲದೆ ತಮ್ಮ ವಾರ್ಡ್ಗಳಲ್ಲಿ ಉತ್ಪತ್ತಿ ಆಗುವ ಕಸವನ್ನು ವಾರ್ಡ್ಗಳಲ್ಲೇ ಸಂಸ್ಕರಣೆ ಮಾಡಲು ಮುಂದಾದಲ್ಲಿ ನಗರದಲ್ಲಿ ಕಸದ ಸಮಸ್ಯೆ ನಿವಾರಣೆಯಾಗಲು ಸಾಧ್ಯ. ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಗರದಲ್ಲಿ ಬಳಕೆ ಮಾಡದಂತೆ ಕಟ್ಟಿನಿಟ್ಟಿನ ಕಾನೂನು ಜಾರಿಗೊಳಿಸಬೇಕು. ಬೈಲಾದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ ದುಪ್ಪಟ್ಟು ದಂಡ ವಿಧಿಸುವ ಮೂಲಕ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಈ ಸಂಬಂಧ ನಗರದಲ್ಲಿ ಸೆಪ್ಟೆಂಬರ್ 1 ರೊಳಗಾಗಿ ಪ್ಲಾಸ್ಟಿಕ್‌ನ್ನು ಸಂಪೂರ್ಣ ನಿಷೇಧಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಮೇಯರ್ ರಿಗೆ ಸೂಚಿಸಿದರು.

ನಂತರ ಮಾತನಾಡಿದ ಮೇಯರ್ ಗಂಗಾಂಭಿಕೆ,, ನಗರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಘನತ್ಯಾಜ್ಯ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸಾಧ್ಯವಾಗುತ್ತದೆ. ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದರು.

ಬಿಬಿಎಂಪಿ ಎಂಟು ವಲಯಗಳಲ್ಲೂ ಎನ್‌ಜಿಟಿ ಸಭೆ ಆಯೋಜಿಸಲಾಗುತ್ತಿದೆ. ಅದರಂತೆ ಈಗಾಗಲೇ ಪಶ್ಚಿಮ ವಲಯದಲ್ಲಿ ಸಭೆ ನಡೆಸಿದ್ದು, ಇಂದು ದಕ್ಷಿಣ ವಲಯದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ವಲಯದಲ್ಲಿ ಆರು ವಿಧಾನ ಸಭಾ ಕ್ಷೇತ್ರಗಳಿದ್ದು, 44 ವಾರ್ಡ್ಗಳು ಬರಲಿವೆ.

ಈ ಪೈಕಿ ಎಲ್ಲ ವಾರ್ಡ್ಗಲ್ಲೂ ಸಮರ್ಪಕವಾಗಿ ತ್ಯಾಜ್ಯ ವಿಂಗಡಿಸಿ ಕೊಡಬೇಕು. ತ್ಯಾಜ್ಯ ವಿಲೇವಾರಿಗಾಗಿ ಪಾಲಿಕೆ ಸೆಪ್ಟೆಂಬರ್ 1 ರಿಂದ ಹೊಸ ಟೆಂಡರ್ ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಎಲ್ಲ ಸಾರ್ವಜನಿಕರ ಸಹಕಾರ ಮುಖ್ಯಪಾತ್ರ ವಹಿಸುತ್ತದೆ. ಆದ್ದರಿಂದ ಎಲ್ಲರೂ ಕಸ ವಿಂಗಡಿಸಿಕೊಂಡಲು ಮುಂದಾಗಬೇಕು. ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿಕೊಡದಿದ್ದಲ್ಲಿ ದುಪಟ್ಟು ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.

ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಿರಲು ಬಿಬಿಎಂಪಿ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾನೂನಿನಲ್ಲಿ ಹಲವು ಮಾರ್ಪಾಡುಗಳನ್ನು ತರಲಾಗುತ್ತಿದೆ. ಆಗಸ್ಟ್ ಒಂದರಿಂದ ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡುಬಂದರೆ ಐದು ಪಟ್ಟು ದಂಡ ವಿಧಿಸುವ ಜೊತೆಗೆ ಬಳಕೆದಾರರಿಗೂ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.

KN_BNG_03_BBMP_PLASTIC_SCRIPT_7201801
Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.