ETV Bharat / city

ಬೆಂಗಳೂರು ನಗರ ರೌಡಿಶೀಟರ್ ಕಾರ್ತಿಕ್‌ನನ್ನು ಒಂದು ವರ್ಷ ಗಡಿಪಾರು‌ ಮಾಡಿ ಡಿಸಿಪಿ ಶರಣಪ್ಪ ಆದೇಶ

ಕ್ರಿಮಿನಲ್‌ ಪ್ರಕರಣಗಳಲ್ಲಿ ಈತನನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದರೂ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಹತ್ತಾರು ವರ್ಷಗಳಿಂದ‌ ಕುಕೃತ್ಯಗಳಲ್ಲಿ ಪಾಲ್ಗೊಂಡಿದ್ದ.‌.

Rowdy sheeter
Rowdy sheeter
author img

By

Published : Apr 27, 2021, 5:40 PM IST

ಬೆಂಗಳೂರು : ವಿವಿಧ ಅಪರಾಧ‌ ಕೃತ್ಯಗಳಲ್ಲಿ ತೊಡಗಿಸಿಕೊಂಡು ಗೂಂಡಾ ವರ್ತನೆ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ರೌಡಿಶೀಟರ್ನನ್ನು ಒಂದು ವರ್ಷದವರೆಗೂ ಬೆಂಗಳೂರು ನಗರ ಜಿಲ್ಲೆಯಿಂದ‌ ಗಡಿಪಾರು ಮಾಡಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿರುವ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆದೇಶ ಹೊರಡಿಸಿದ್ದಾರೆ.

ಹಲಸೂರು ಪೊಲೀಸ್ ಠಾಣೆಯ ರೌಡಿಶೀಟರ್ ಕಾರ್ತಿಕ್‌ಗೆ ಏ.26ರಿಂದ ಮುಂದಿನ ವರ್ಷ ಏ.26ವರೆಗೂ ಬೆಂಗಳೂರು ನಗರ ಜಿಲ್ಲೆಯಿಂದ ಗಡಿಪಾರು ಮಾಡಿದ್ದಾರೆ.

Rowdy sheeter
Rowdy sheeter

ಹಾಗಾಗಿ, ನಗರದಲ್ಲಿ ಎಲ್ಲಿಯೂ ಇರುವಂತಿಲ್ಲ, ಒಂದು ವೇಳೆ ನಿಯಮ ಉಲ್ಲಂಘನೆ ಕಂಡು ಬಂದರೆ ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.

ಹಲಸೂರಿನ ಗೌತಮಪುರದ ನಿವಾಸಿಯಾದ ಕಾರ್ತಿಕ್, ಆತ್ಯಾಚಾರ ಯತ್ನ, ದರೋಡೆ, ಕೊಲೆ ಯತ್ನ, ಸುಲಿಗೆ, ಸರ್ಕಾರಿ ನೌಕರರ ಮೇಲೆ ಹಲ್ಲೆ ಸೇರಿದಂತೆ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ನಿರಂತರವಾಗಿ ಗೂಂಡಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಕಾನೂನು‌ ಸುವ್ಯವಸ್ಥೆಗೆ ಧಕ್ಕೆ‌ ಹಾಗೂ ಸಮಾಜದ‌ ಸ್ವಾಸ್ಥ್ಯ ಹಾಳು ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ.

ಕ್ರಿಮಿನಲ್‌ ಪ್ರಕರಣಗಳಲ್ಲಿ ಈತನನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದರೂ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಹತ್ತಾರು ವರ್ಷಗಳಿಂದ‌ ಕುಕೃತ್ಯಗಳಲ್ಲಿ ಪಾಲ್ಗೊಂಡಿದ್ದ.‌

ಈ ಸಂಬಂಧ ನಗರ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ಅಪರಾಧ ಹಿನ್ನೆಲೆ ವರದಿ ಪರಿಶೀಲಿಸಿ‌, ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾಣಿಸಿಕೊಳ್ಳದಂತೆ ಒಂದು ವರ್ಷದವರೆಗೂ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.