ETV Bharat / city

ಎಸ್​.ಸಿ.ಪಿ/ಟಿ.ಎಸ್​.ಪಿ ಅನುದಾನ ಲ್ಯಾಪ್ಸ್ ಆಗದಂತೆ ಕ್ರಮವಹಿಸಿ: ಡಿಸಿಎಂ ಕಾರಜೋಳ - ಡಿಸಿಎಂ ಗೋವಿಂದ ಎಂ. ಕಾರಜೋಳ ನ್ಯೂಸ್​

ಎಸ್​.ಸಿ.ಪಿ/ಟಿ.ಎಸ್​.ಪಿ ಕಾರ್ಯಕ್ರಮದಡಿ ಯಾವುದೇ ಅನುದಾನದ ಅವಧಿ ಮೀರದಂತೆ ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು‌ ಎಂದು ಡಿಸಿಎಂ ಗೋವಿಂದ ಎಂ. ಕಾರಜೋಳ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಡಿಸಿಎಂ ಕಾರಜೋಳ
ಡಿಸಿಎಂ ಕಾರಜೋಳ
author img

By

Published : Dec 16, 2019, 5:14 PM IST

ಬೆಂಗಳೂರು: ಎಸ್​.ಸಿ.ಪಿ/ಟಿ.ಎಸ್​.ಪಿ ಕಾರ್ಯಕ್ರಮದಡಿ ಯಾವುದೇ ಅನುದಾನದ ಅವಧಿ ಮೀರದಂತೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು‌ ಎಂದು ಡಿಸಿಎಂ ಗೋವಿಂದ ಎಂ. ಕಾರಜೋಳ ಅಧಿಕಾರಿಗಳಿಗೆ ಸೂಚನೆ‌ ನೀಡಿದ್ದಾರೆ.

ವಿಕಾಸಸೌಧದಲ್ಲಿ ಇಂದು ರಾಜ್ಯ ಪರಿಷತ್ತು ಅನುಮೋದಿಸಿದ 2019-20 ನೇ ಸಾಲಿನ ಎಸ್​.ಸಿ.ಪಿ/ಟಿ.ಎಸ್​.ಪಿ ಯೋಜನೆಯಡಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ 30 ಸಾವಿರ ಕೋಟಿ ರೂ. ವೆಚ್ಚದ ಕಾರ್ಯಕ್ರಮಗಳಿಗೆ ಹಣ ಅನುಮೋದನೆಯಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಶೇ.100 ರಷ್ಟು ಪ್ರಮಾಣದಲ್ಲಿ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಬೇಕು. ರಾಜ್ಯ ಪರಿಷತ್ತಿನಲ್ಲಿ ಕಾರ್ಯಕ್ರಮಗಳ ಅನುಮೋದನೆಯಾಗಿದ್ದು, ಪುನಃ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯುವ ಅಗತ್ಯ ಇಲ್ಲ. ಎಲ್ಲಾ ಇಲಾಖೆಗಳು ಯಾವುದೇ ತಾಂತ್ರಿಕ ನೆಪ ಹೇಳದೆ ತ್ವರಿತವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

ಜಲಾನಯನ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಈ ಯೋಜನೆಯಡಿ ಪರಿಶಿಷ್ಟರಿಗೆ ಅನುಕೂಲವಾಗಿಲ್ಲ. ಈ ಯೋಜನೆಯಡಿ ಪರಿಶಿಷ್ಟರ ಜಮೀನಿನಲ್ಲಿ‌ ಜಲಾನಯನ ಕಾರ್ಯಕ್ರಮಗಳನ್ನು‌ ಅನುಷ್ಠಾನಗೊಳಿಸಬೇಕು. ಕೃಷಿ ಇಲಾಖೆಯು ಪರಿಶಿಷ್ಟರಿಗೆ ನೀಡುವ ಪರಿಕರಗಳ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಡಿಸಿಎಂ ಹೇಳಿದ್ರು.

ಮುಂದಿನ ವರ್ಷದಿಂದ ಈ ಯೋಜನೆಯಡಿ ಪರಿಶಿಷ್ಟರ ಕಾಲೋನಿಯಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಲಾಗುವುದು. ಮುಂದಿನ ವರ್ಷದಿಂದ ಈ ಯೋಜನೆಯಡಿ ಶಿಕ್ಷಣ, ವಸತಿ ನಿಲಯ, ವಸತಿ ಶಿಕ್ಷಣ, ಜಮೀನು ಖರೀದಿ, ಗಂಗಾ ಕಲ್ಯಾಣ, ಸಮುದಾಯ ಭವನ ನಿರ್ಮಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Intro:Body:KN_BNG_03_SCPTSP_MEETING_SCRIPT_7201951

ಎಸ್ ಸಿಪಿ/ಟಿಎಸ್ ಪಿ ಅನುದಾನ ಲ್ಯಾಪ್ಸ್ ಆಗದಂತೆ ಕ್ರಮವಹಿಸಿ: ಡಿಸಿಎಂ ಕಾರಜೋಳ

ಬೆಂಗಳೂರು: ಎಸ್ ಸಿಪಿ ಮತ್ತು ಟಿಎಸ್ ಪಿ ಕಾರ್ಯಕ್ರಮದಡಿ ಯಾವುದೇ ಅನುದಾನದ ಅವಧಿ ಮೀರದಂತೆ ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು‌ ಎಂದು ಡಿಸಿಎಂ ಗೋವಿಂದ ಎಂ ಕಾರಜೋಳ ಅಧಿಕಾರಿಗಳಿಗೆ ಸೂಚನೆ‌ ನೀಡಿದ್ದಾರೆ.

ವಿಕಾಸೌಧದಲ್ಲಿ ಇಂದು ರಾಜ್ಯ ಪರಿಷತ್ತು ಅನುಮೋದಿಸಿದ 2019-20ನೇ ಸಾಲಿನ ಎಸ್ ಸಿ ಪಿ ಮತ್ತು ಟಿಎಸ್ ಪಿ ಯೋಜನೆಯಡಿ ಕಾರ್ಯ ಕ್ರಮಗಳ ಅನುಷ್ಠಾನ ಕುರಿತ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ 30 ಸಾವಿರ ಕೋಟಿ ರೂ. ವೆಚ್ಚದ ಕಾರ್ಯ ಕ್ರಮಗಳಿಗೆ ಅನುಮೋದನೆಯಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಶೇ.100 ರಷ್ಟು ಪ್ರಮಾಣದಲ್ಲಿ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಬೇಕು. ರಾಜ್ಯ ಪರಿಷತ್ತಿನಲ್ಲಿ ಕಾರ್ಯಕ್ರಮಗಳ ಅನುಮೋದನೆಯಾಗಿದ್ದು, ಪುನಃ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯುವ ಅಗತ್ಯ ಇಲ್ಲ. ಎಲ್ಲಾ ಇಲಾಖೆಗಳು ಯಾವುದೇ ತಾಂತ್ರಿಕ ನೆಪ ಹೇಳದೇ ತ್ವರಿತವಾಗಿ ಕಾರ್ಯಕ್ರಮ ಗಳನ್ನು ಅನುಷ್ಠಾನ ಗೊಳಿಸಬೇಕು ಎಂದು ಸೂಚಿಸಿದರು.

ಜಲಾನಯನ ಕಾರ್ಯಕ್ರಮ ಗಳು ಸಮರ್ಪಕವಾಗಿ ಅನುಷ್ಠಾನ ವಾಗಿಲ್ಲ. ಈ ಯೋಜನೆಯಡಿ ಪರಿಶಿಷ್ಟರಿಗೆ ಅನುಕೂಲವಾಗಿಲ್ಲ. ಈ ಯೋಜನೆಯಡಿ ಪರಿಶಿಷ್ಟರ ಜಮೀನಿನಲ್ಲಿ‌ ಜಲಾನಯನ ಕಾರ್ಯಕ್ರಮ ಗಳನ್ನು‌ ಅನುಷ್ಠಾನ ಗೊಳಿಸಬೇಕು. ಕೃಷಿ ಇಲಾಖೆಯು ಪರಿಶಿಷ್ಟರಿಗೆ ನೀಡುವ ಪರಿಕರಗಳ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.

ಮುಂದಿನ ವರ್ಷದಿಂದ ಈ ಯೋಜನೆಯಡಿ ಪರಿಶಿಷ್ಟರ ಕಾಲೋನಿಯಲ್ಲಿ ಸಿಸಿ ರಸ್ತೆಗಳನ್ನು ನಿಲ್ಲಿಸಲಾಗುವುದು. ಗ್ರಾಮಗಳಲ್ಲಿ ಪ್ರತಿ ವರ್ಷ ಸಿಸಿ ರಸ್ತೆಗಳನ್ನು ನಿರ್ಮಿಸಿ ಮನೆಗಳ ಬಾಗಿಲು ರಸ್ತೆ ಗಿಂತ ಬಹಳ ಕೆಳಮಟ್ಟಕ್ಕೆ ಬಂದಿದೆ. ಮುಂದಿನ ವರ್ಷ ದಿಂದ ಈ ಯೋಜನೆಯಡಿ ಶಿಕ್ಷಣ, ವಸತಿ ನಿಲಯ, ವಸತಿ ಶಿಕ್ಷಣ, ಜಮೀನು ಖರೀದಿ, ಗಂಗಾ ಕಲ್ಯಾಣ, ಸಮುದಾಯ ಭವನ ನಿರ್ಮಾಣ ಕಾರ್ಯಕ್ರಮ ಗಳಿಗೆ ವಿನಿಯೋಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.