ETV Bharat / city

ಸಿಎಂ ಬಿಎಸ್​ವೈ ವಿರುದ್ಧದ ಕಾಂಗ್ರೆಸ್ ದೂರು ಹಾಸ್ಯಾಸ್ಪದ: ಡಿಸಿಎಂ ಕಾರಜೋಳ

ನಕಲಿ ಧ್ವನಿ ಸುರುಳಿ ಸೃಷ್ಟಿಸಿ, ಜನತೆಯಲ್ಲಿ ಗೊಂದಲ ಮೂಡಿಸುವುದು ಕಾಂಗ್ರೆಸ್‌ಗೆ ಕರಗತವಾಗಿದೆ. ಇಂತಹ ವ್ಯರ್ಥ ಪ್ರಯತ್ನಗಳು ಕಾಂಗ್ರೆಸ್​​ಗೆ ಶೋಭೆ ತರುವುದಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

author img

By

Published : Nov 3, 2019, 1:51 AM IST

ಡಿಸಿಎಂ ಗೋವಿಂದ ಕಾರಜೋಳ

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ರಾಜಭವನಕ್ಕೆ ತೆರಳಿ, ಸಿಎಂ ಬಿಎಸ್​ವೈ ಸರ್ಕಾರದ ವಿರುದ್ಧ ದೂರು ನೀಡಿರುವುದು ಹಾಸ್ಯಾಸ್ಪದ ಸಂಗತಿ ಎಂದು ಡಿಸಿಎಂ ಗೋವಿಂದ ಕಾರಜೋಳ 'ಕೈ' ನಾಯಕರ ನಡೆಯನ್ನು ಟೀಕೆ ಮಾಡಿದ್ದಾರೆ.

ನಕಲಿ ಧ್ವನಿ ಸುರುಳಿ ಸೃಷ್ಟಿಸಿ, ಜನತೆಯಲ್ಲಿ ಗೊಂದಲ ಮೂಡಿಸುವುದು ಕಾಂಗ್ರೆಸ್‌ಗೆ ಕರಗತವಾಗಿದೆ. ಅವರು ಯಾವ ಆಧಾರದಲ್ಲಿ ಇಂತಹ ಹೇಳಿಕೆ ನೀಡುತ್ತಿದ್ದಾರೆ..? ಇಂತಹ ವ್ಯರ್ಥ ಪ್ರಯತ್ನಗಳು ಕಾಂಗ್ರೆಸ್​​ಗೆ ಶೋಭೆ ತರುವುದಿಲ್ಲ. ಅನರ್ಹ ಶಾಸಕರ ಪ್ರಕರಣ ಸರ್ವೋಚ್ಛ ನ್ಯಾಯಾಲಯದಲ್ಲಿರುವಾಗ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನ್ಯಾಯಾಲಯದ ಮೇಲೆ ಪ್ರಭಾವ ಬೀರಿರುವುದು ಮಹಾಪರಾಧ ಮತ್ತು ರಾಜಕೀಯ‌ ಕುತಂತ್ರವಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ನೆರೆ ಸಂತ್ರಸ್ತರಿಗೆ ಹಾಗೂ ಜನತೆಯ ಕಷ್ಟಗಳಿಗೆ ಸ್ಪಂದಿಸುವುದನ್ನು ಬಿಟ್ಟು, ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ ಇದು ಕಾಂಗ್ರೆಸ್ ಪಕ್ಷದ ಬೌದ್ಧಿಕ‌ ದಿವಾಳಿಯ ಸಾಕ್ಷಿಯಾಗಿದೆ. ಸಿಎಂ ಬಿಎಸ್​ ಯಡಿಯೂರಪ್ಪ ಪ್ರಕೃತಿವಿಕೋಪದ ಸಂದರ್ಭದಲ್ಲಿ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಿ, ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ‌ ಕಾಂಗ್ರೆಸ್ ನಾಯಕರು ಗೊಂದಲ ಮೂಡಿಸಿ, ಪುಕ್ಕಟೆ ಪ್ರಚಾರ ಪಡೆಯುವುದು ಸರಿಯಲ್ಲ ಎಂದು‌ ಡಿಸಿಎಂ ಕಾರಜೋಳ ತಿಳಿಸಿದ್ದಾರೆ.

Intro:KN_BNG_07_DCM_KARAJOLA_PRESS_STATEMENT_SCRIPT_9021933

ಕಾಂಗ್ರೆಸ್ ದೂರು ನೀಡಿರುವುದು ಹಾಸ್ಯಾಸ್ಪದ : ಡಿಸಿಎಂ ಗೋವಿಂದ ಕಾರಜೋಳ

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ರಾಜಭವನಕ್ಕೆ ಹೋಗಿ, ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ದೂರು ನೀಡಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.

ನಕಲಿ ಧ್ವನಿ ಸುರಳಿ ಸೃಷ್ಟಿಸಿ, ಜನತೆಯಲ್ಲಿ ಗೊಂದಲ ಮೂಡಿಸುವುದು ಕಾಂಗ್ರೆಸ್‌ಗೆ ಕರಗತವಾಗಿದೆ. ಅವರು ಯಾವ ಆಧಾರದಲ್ಲಿ ಇಂತಹ ಹೇಳಿಕೆ ನೀಡುತ್ತಿದ್ದಾರೆ? ಇಂತಹ ವೃತ ಪ್ರಯತ್ನಗಳು ಕಾಂಗ್ರೆಸ್ ಗೆ ಶೋಭೆ ತರುವುದಿಲ್ಲ. ಅನರ್ಹ ಶಾಸಕರ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿರುವಾಗ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನ್ಯಾಯಾಲಯದ ಮೇಲೆ ಪ್ರಭಾವ ಬೀರಿವುದು ಮಹಾ ಅಪರಾಧ ಮತ್ತು ರಾಜಕೀಯ‌ ಕುತಂತ್ರವಾಗಿದೆ ಇದೊಂದು ರಾಜಕೀಯ ಷಡ್ಯಂತ್ರ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ನೆರೆ ಸಂತ್ರಸ್ತರಿಗೆ ಹಾಗೂ ಜನತೆಯ ಕಷ್ಟಗಳಿಗೆ ಸ್ಪಂದಿಸುವುದನ್ನು ಬಿಟ್ಟು , ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ ಇದು ಕಾಂಗ್ರೆಸ್ ಪಕ್ಷದ ಬೌದಿಕ‌ ದಿವಾಳಿಯ ಸಾಕ್ಷಿಯಾಗಿದೆ ಸಿಎಂ ಬಿಎಸ್ವೈ ಪ್ರಕೃತಿವಿಕೋಪದ ಸಂದರ್ಭದಲ್ಲಿ ಸಂತ್ರಸ್ತರಿಗೆ ಆತ್ಮಸೈರ್ಯ ತುಂಬಿ, ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ‌ ಕಾಂಗ್ರೆಸ್ ನಾಯಕರು ಗೊಂದಲ ಮೂಡಿಸಿ, ಪುಕ್ಕಟೆ ಪ್ರಚಾರ ಪಡೆಯುವುದು ಸರಿಯಲ್ಲ ಎಂದು‌ ಡಿಸಿಎಂ ತಿಳಿಸಿದ್ದಾರೆ.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.