ETV Bharat / city

ಯತ್ನಾಳ್ ಹೇಳಿಕೆ ಬಗ್ಗೆ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ: ಡಿಸಿಎಂ ಅಶ್ವತ್ಥ ನಾರಾಯಣ

ಒಂದು ವ್ಯವಸ್ಥೆಯಡಿ ಎಲ್ಲರೂ ಕೆಲಸ ಮಾಡಬೇಕು. ಗಂಡು, ಹೆಣ್ಣು ಎಂಬ ಪ್ರಶ್ನೆಯಿಲ್ಲ. ಎಲ್ಲರೂ ಶಿಸ್ತುಪಾಲನೆ ಮಾಡಬೇಕು. ಎಲ್ಲರೂ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು. ಶಿಸ್ತಿನ ವಿಚಾರದಲ್ಲಿ ಮಾಹಿತಿ ನೀಡಲು ಪಕ್ಷದ ವರಿಷ್ಠರು ಇದ್ದಾರೆ. ಅವರು ಸೂಕ್ತವಾದ ಕ್ರಮವನ್ನು ಸಕಾಲಕ್ಕೆ ವಹಿಸುವ ಕಾರ್ಯ ಮಾಡುತ್ತಾರೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.

DCM Ashwath Narayan reaction about yathnal statement
ಯತ್ನಾಳ್ ಹೇಳಿಕೆ ಬಗ್ಗೆ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ: ಡಿಸಿಎಂ ಅಶ್ವಥ್ ನಾರಾಯಣ್
author img

By

Published : Jan 6, 2021, 6:05 PM IST

ಬೆಂಗಳೂರು: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗೆ ಪಕ್ಷದ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಯತ್ನಾಳ್ ಹೇಳಿಕೆ ಬಗ್ಗೆ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ: ಡಿಸಿಎಂ ಅಶ್ವತ್ಥ ನಾರಾಯಣ್

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನಡುವಿನ ವಾಕ್ಸಮರ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ವ್ಯವಸ್ಥೆಯಡಿ ಎಲ್ಲರೂ ಕೆಲಸ ಮಾಡಬೇಕು. ಗಂಡು, ಹೆಣ್ಣು ಎಂಬ ಪ್ರಶ್ನೆಯಿಲ್ಲ. ಎಲ್ಲರೂ ಶಿಸ್ತುಪಾಲನೆ ಮಾಡಬೇಕು. ಎಲ್ಲರೂ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು. ಶಿಸ್ತಿನ ವಿಚಾರದಲ್ಲಿ ಮಾಹಿತಿ ನೀಡಲು ಪಕ್ಷದ ವರಿಷ್ಠರು ಇದ್ದಾರೆ. ಅವರು ಸೂಕ್ತವಾದ ಕ್ರಮವನ್ನು ಸಕಾಲಕ್ಕೆ ವಹಿಸುವ ಕಾರ್ಯ ಮಾಡುತ್ತಾರೆ ಎಂದರು.

ಸಚಿವರು ಎಲ್ಲರೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಕೆಲ ಶಾಸಕರು ಇನ್ನಷ್ಟು ಗುಣಮಟ್ಟದ ಕೆಲಸವನ್ನು ಬಯಸುತ್ತಿದ್ದು, ಅವರ ಅಪೇಕ್ಷೆಯಂತೆ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸುತ್ತೇವೆ. ಹೆಚ್ಚಿನ ಕಾರ್ಯ ಮಾಡುವುದರಿಂದ ಜನರಿಗೆ ಇನ್ನಷ್ಟು ಅನುಕೂಲವಾಗಲಿದೆ. ಇದರಿಂದ ನಾಡು ಸದೃಢವಾಗುತ್ತದೆ ಮತ್ತು ಸರ್ಕಾರವು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಆಗಲಿದೆ. ಯಾವುದೇ ಪ್ರತಿನಿಧಿಗಳು ಸೂಕ್ತ ಸಲಹೆ ಸೂಚನೆ ನೀಡಿದರೆ ಅದನ್ನು ಪರಿಗಣಿಸುತ್ತೇವೆ. ಪ್ರತಿಯೊಬ್ಬ ಶಾಸಕರ ಸಲಹೆಯನ್ನು ಸ್ವೀಕರಿಸಿ ಅದನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈಗಾಗಲೇ ಸರ್ಕಾರ ಎಲ್ಲಾ ಕ್ಷೇತ್ರಗಳಿಗೂ ಸಾಕಷ್ಟು ಅನುದಾನವನ್ನು ನೀಡಿದೆ. ಕೆಲ ಸದಸ್ಯರು ಬಯಸಿದ ಮಟ್ಟದಲ್ಲಿ ಅನುದಾನ ನೀಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡುವ ಕಾರ್ಯವನ್ನು ಮುಖ್ಯಮಂತ್ರಿಗಳು ಮಾಡಲಿದ್ದಾರೆ. ಈಗಾಗಲೇ ಹೆಚ್ಚಿನ ಅನುದಾನ ನೀಡುವುದಾಗಿಯೂ ಅವರು ಭರವಸೆ ಇತ್ತಿದ್ದಾರೆ. ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅತಿವೃಷ್ಟಿ-ಅನಾವೃಷ್ಟಿ ಹಾಗೂ ಕೋವಿಡ್ ಮತ್ತಿತರ ಸಮಸ್ಯೆಗಳು ಎದುರಾಗಿವೆ. ಇದರ ನಡುವೆಯೂ ಸಾಕಷ್ಟು ಸುಧಾರಣೆಗಳನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ನಮ್ಮ ಶಾಸಕರನ್ನು ಮೆಚ್ಚಿಸುವ ಕಾರ್ಯ ಮಾಡುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.